ಕ್ರಿಯಾಶೀಲತೆಯೇ ಮಂತ್ರ, ಬೆಳೆಯುವ-ಬೆಳಸುವ, ಬೆಳ್ಳಿಕೂಟ-ಕಾವ್ಯಕೂಟ

ಕ್ರಿಯಾಶೀಲತೆಯೇ ಮಂತ್ರ, ಬೆಳೆಯುವ-ಬೆಳಸುವ, ಬೆಳ್ಳಿಕೂಟ-ಕಾವ್ಯಕೂಟ

(ವಾರ್ಷಿಕೋತ್ಸವದ ಸಮಗ್ರ ವರದಿ)

ಕಾವ್ಯಕೂಟ ಬೆಳಗಾವಿ ಜಿಲ್ಲೆ ಕಳೆದ ಒಂದು ವರ್ಷದಿಂದ ಒಂದು ದಿನವೂ ತಪ್ಪಿಸದೆ ವಾಟ್ಸ್ ಆಪ್ ಗ್ರೂಪ್ ನಲ್ಲಿ ಕ್ರಿಯಾಶೀಲವಾಗಿ ಕನ್ನಡ ಬರಹದ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಪ್ರಮುಖ ಗುಂಪಾಗಿದೆ.
ಹೆಸರಿಗಷ್ಟೆ ಬೆಳಗಾವಿ ಕಾವ್ಯ ಕೂಟ ಅಂತ ಇದ್ದರೂ ಈ ಕೂಟದಲ್ಲಿ ಧಾರವಾಡ, ಭಾಗಲಕೋಟೆ, ರಾಯಚೂರು, ಕೊಪ್ಪಳ ಮತ್ತು ಬೆಂಗಳೂರು ಜಿಲ್ಲೆಗಳ ಸಾಹಿತ್ಯದ ಮನಸುಗಳು ಅರಳಿಕೊಂಡಿವೆ.
ಸಿಂಹ ಪಾಲು ಸಹಜವಾಗಿ ಬೆಳಗಾವಿ ಜೆಲ್ಲೆಯದು.
ಇದರ ರುವಾರಿ ಹಿರಿಯ ಸಾಹಿತಿ ಶ್ರೀ ಈಶ್ವರ ಮಮದಾಪೂರ ಸರ್. ಈ ಗುಂಪು ರಚಿಸಿ ಇದರ ನಿರ್ವಹಣೆಯ ಜವಾಬ್ದಾರಿಯನ್ನು ಕವಯತ್ರಿ, ಜಾನಪದ ಹಾಡುಗಾರ್ತಿ ಶ್ರೀಮತಿ ಆಶಾ ಎಸ್ ಯಮಕನಮರಡಿ ಅವರಿಗೆ ಒಪ್ಪಿಸಿ ಅವರ ಬೆನ್ನ ಹಿಂದಿನ ಬೆಳಕಾಗಿ ನಿಂತು ಪ್ರಕಾಶಿಸುವಂತೆ‌ ಮಾಡುವಲ್ಲಿ ಶ್ರೀ ಈಶ್ವರ ಮಮದಾಪೂರ ಸರ್ ಯಶಸ್ವಿಯಾಗಿದ್ದಾರೆ.
ಜವಬ್ದಾರಿ ಹೊತ್ತಕೊಂಡ ಶ್ರೀಮತಿ ಆಶಾ ಎಸ್.ಯಮಕನಮರಡಿ ಅವರು ಡಾಕ್ಟರೇಟ್ ಪದವಿ ಪಡೆಯುವ ವಿದ್ಯಾರ್ಥಿನಿಯಂತೆ ಯಾವ ಹಮ್ಮು ಬಿಮ್ಮು ಇಲ್ಲದೆ ಅಂತರ್ ಶಿಸ್ತಿನಿಂದ ಒಂದು ದಿನವು ಬಿಡುವಿಲ್ಲದ ಸೈನಿಕರಂತೆ ಸಾಹಿತ್ಯದ ಅನೇಕ ಪ್ರಕಾರಗಳು , ಸಂಸ್ಕೃತಿ ವಿವರನ್ನು ತಯಾರಿಸಿ ವಾರದ ಪಟ್ಟಿಯನ್ನು ಬಿಡುಗಡೆ ಮಾಡಿ ಅಂದಂದಿನ ವಿಷಯವನ್ನು ಬೆಳಿಗ್ಗೆ ಗೂಂಪಿನಲ್ಲಿ ಹಾಕಿ ಬರೆಯುಂತೆ ಪ್ರೇರಿಪಿಸುವ ಕೆಲಸವನ್ನು ಚಾಚು ತಪ್ಪದೆ‌ ಮಾಡಿಕೊಂಡು ಬಂದ ಯಶಸ್ಸಿನ ಬಹುಪಾಲು ಆಶಾ ಸಹೋದರಿಯದು.
ಕಾವ್ಯ ಕೂಟಕ್ಕೆ ಒಂದು ವರ್ಷ ತುಂಬಿದ ನೆನಹುವಿನಲ್ಲಿ ಶನಿವಾರ ಸುಮಾರು ಮೂರು ತಾಸು ವೆಬಿನಾರ ಮೂಲಕ ನಡೆದ ವಾರ್ಷಿಕೋತ್ಸವದ ಕಾರ್ಯಕ್ರಮ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ‌ಮಾಡಿತು.

ಕಾರ್ಯಕ್ರಮದಲ್ಲಿ ಗಣಪತಿ ಹಾಡು, ಸ್ವರಚಿತ ಕವಿತೆಯ ವಾಚನ, ವಚನ ವಿಶ್ಲೇಷಣೆ, ಹಾಡುಗಾರಿಕೆ, ಏಕಪಾತ್ರ ಅಭಿನಯ, ಗಜಲ್ ನಿನಾದ, ಜಾನಪದ ಹಾಡಿನ ಮೊಡಿ, ಕತೆ, ತ್ರಿಪದಿ, ಚಿತ್ರಗೀತೆಗಳು ಮಾರ್ದನಿಸಿದವು.
ಈ ಕೂಟದ ವಿಶೇಷತೆ ಎಂದರೆ ವಯಸ್ಸು, ಲಿಂಗ ತಾರತಮ್ಯವಿಲ್ಲ, ಒಂದು ಅಂದಾಜಿನ ಆಸುಪಾಸು ೩೫ ವರ್ಷದ ಯುವಕರಿಂದ ೭೫ ವರ್ಷದ ಹಿರಿಯ ಅಜ್ಜಿಯರು ( ಅಜ್ಜಿ ಅಂದದ್ದಕ್ಕೆ ಬೇಸರ‌ ಮಾಡಿಕೊಳ್ಳಬೇಡಿ) ಇದ್ದಾರೆ. ಅವರಲ್ಲಿರುವ ಜೀವನೋತ್ಸಾಹ ಯಾರೊಬ್ಬರ ಬಗ್ಗೆಯೂ ಯಾರು ಅನುಮಾನಿಸದೆ ಪರಸ್ಪರ ಒಂದೇ ಕುಟುಂಬದ ಬಂಧು ಬಾಂಧವರಂತೆ, ಬಹುಕಾಲದ ಪರಿಚಿತರಂತೆ ಭಾಗವಹಿಸುವ ತಲ್ಲಿನತೆ ಅತ್ಯಂತ ಅನುಕರುಣೀಯವಾದುದು.,
ಶ್ರೀಮತಿ ಮಹಾನಂದ ಪುರಶಟ್ಟಿ ಅವರ ಪ್ರಾರ್ಥನೆ ಯೊಂದಿಗೆ ಆರಂಭವಾದ ಕಾರ್ಯಕ್ರಮ ಸರಳವಾಗಿ ಸಾರಗವಾಗಿ ಸಾಗಿಬಂದಿತು. ಕವಯತ್ರಿ ಹಾಗೂ ಪತ್ರಕರ್ತೆ ಶ್ರೀಮತಿ ರೋಹಿಣಿ ಯಾದವಾಡ ಅವರ ಸ್ವಾಗತಿದರು. ಸಂಕೇಶ್ವರದ ಹಿರಿಯ ಕವಯತ್ರಿ ಶ್ರೀಮತಿ ಹಮೀದಾ ಬೇಗಂ ಅಮ್ಮ ಪ್ರಾಸ್ತಾವಿಕ ಮಾತನಾಡಿ ಒಂದು ವರ್ಷದಲ್ಲಿ ನಡೆದ ಕಾರ್ಯಕ್ರಮ ವಿವರಗಳನ್ನು ಮೆಲಕು ಹಾಕುವ ಮೂಲಕ ನೆನಪಿಸಿದರು. ಗುಂಪಿನ ರುವಾರಿಗಳಾದ ಶ್ರೀ ಈಶ್ವರ ಮಮದಾಪೂರ ಸರ್ ಮಾತನಾಡಿ ಗುಂಪು ರಚನೆಯ ಉದ್ದೇಶ, ಅದರ ಜವಬ್ದಾರಿ ತೆಗೆದುಕೊಂಡು ನಿರ್ವಹಿಸಿದ ಶ್ರೀಮತಿ ಆಶಾ ಎಸ್.ಯಮಕನಮರಡಿ ಅವರ ಕ್ರಿಯಾಶೀಲತೆ, ಪ್ರತಿದಿನ ಹೊಸದನ್ನು ಕಲಿಯುತ್ತ ಕಲಿಸುವ ವಿಶಿಷ್ಟ ಪ್ರಕಾರವಾಗಿ ಹೊಮ್ಮಿದ ಗುಂಪಿನ ಚಟುವಟಿಕೆ ಬಗ್ಗೆ ಅಭಿಮಾನ ಪೂರ್ವಕವಾಗಿ ಮಾತನಾಡಿದರು.
ಕಾವ್ಯಕೂಟದ ಅಡ್ಮಿನ್, ನಿರ್ವಾಹಕಿ ಶ್ರೀಮತಿ ಆಶಾ ಎಸ್ ಯಮಕನಮರಡಿ ‌ಮಾತನಾಡಿ ನಾಡಹಬ್ಬದ ವೇಣುಧ್ವನಿ, ರಂಗೋಲಿ ಸ್ಪರ್ಧೆ, ಕವಿಗೋಷ್ಟಿ ಸೇರಿದಂತೆ ಅನೇಕ ಚಟುವಟಿಕೆ ನಡೆಸುವದಕ್ಕೆ ಸಹಕರಿಸಿದವರನ್ನು ನೆನೆದು ಕೃತಜ್ಞತೆ ಸಲ್ಲಿಸಿದರು.
ಆರಂಭದಲ್ಲಿ ಶ್ರೀಮತಿ ಭಾರತಿ ಜೀರಿಗಿ ಅವರು ಗಣಪತಿಯ ಹಾಡಿನೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಗದ ಕುರಿತು ಶ್ರೀಮತಿ ರೋಹಿಣಿ ಯಾದವಾಡ ಮಾತನಾಡಿ ಕೂಡು ಕುಟುಂಬದ ಪರಿಕಲ್ಪನೆ ನೆನಪಿಸಿಕೊಂಡರು. ಇಲಕಲ್ಲನ ಶ್ರೀಮತಿ ಸವಿತಾ ಮಾಟೂರು ಬಸವಣ್ಣನವರ ವಚನ ಓದಿ ಅರ್ಥ ತಿಳಿಸಿ ಕೂಟದಲ್ಲಿ ಕಲಿತ ವಿಷಯಗಳನ್ನು ಮೆಲುಕು ಹಾಕಿದರು. ಇಲಕಲ್ಲನ ಮತ್ತೊಬ್ಬ ಸಹೋದರಿ ಶ್ರೀಮತಿ ಇಂದುಮತಿ ಅವರು ಇಲಕಲ್ ಸೀರಿ ಅದರ ಹುಟ್ಟು , ಇತಿಹಾಸ, ಇಲಕಲ್ಲ ಸೀರೆಗಳ ಪ್ರಕಾರ, ವೈವಿದ್ಯತೆ ಕುರಿತು ವಿವರಿಸಿ ಸೀರೆ ಉಡುವವರು ಬದಾಮಿ ಜಾತ್ರೆಯ ಸಂಭ್ರಮದಲ್ಲಿದ್ದರೆ, ಸೀರೆ ನೇಯ್ದವರ ಪ್ರತಿದಿನ ಶಿವರಾತ್ರಿ (ಉಪವಾಸ) ಆಚರಿಸುತ್ತಾರೆ. ಸೀರೆ ತಯಾರಕರ ಬಡತನ ತಿಳಿಸಿ ಪ್ರತಿಯೊಬ್ಬರು ಇಲಕಲ್ ಸೀರೆ ಖರೀದಿಸಿ ಪ್ರೋತ್ಸಾಹಿಸುವಂತೆ ಮಾಡಿದ ಮನವಿಗೆ ಪಾಲ್ಗೊಂಡು ಮಹಿಳೆಯರು ಖರೀದಿಸಲು ಸಜ್ಜಾಗಿದ್ದಂತೆ ಕಂಡು ಬಂದಿತು. ಶ್ರೀಮತಿ ಭಾರತಿ ಮಾಳಿ ಅವರು ಕಿತ್ತೂರು ಚೆನ್ನಮ್ಮ ನ ಏಕಪಾತ್ರ ಅಭಿನಯದ ಸಂಭಾಷಣೆ ನಡೆಸಿ ಚನ್ನಮ್ಮಳನ್ನು ವೇದಿಕೆಗೆ ತಂದು ಮೈ ನವಿರೇಳಿಸುವಂತೆ ಮಾಡಿದರು. ಶ್ರೀ ಮತಿ ಹೇಮಾ ಬರರಿ ಅವರು ಎಲ್ಲೋ ಹುಡುಕಿದೆ ಇಲ್ಲದ ದೇವರನು ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡಿದರು. ಶ್ರೀಮತಿ ಅಕ್ಕಮಹಾದೇವಿ ತೆಗ್ಗಿಯವರು ಮಾಡಿದೆ ಎನ್ನುವ ವಚನ ವಾಚಿಸಿ ಅದರ ತಾತ್ಪರ್ಯ ತಿಳಿಸಿದರು.
ಶ್ರೀಮತಿ ವಾಸಂತಿ ಮೆಳೆ ಅವರು ಸ್ವರಚಿತ ತ್ರಿಪದಿಗಳನ್ನು ವಾಚಿಸಿದರು. ಶ್ರೀಮತಿ ಅನಿತಾ ಮಾಲಗತ್ತಿ ಅವರು ಚಿತ್ರಗೀತೆ ಹಾಡಿದರೆ, ಶ್ರಿಮತಿ ಗೀತಾ ಮರಡಿ ಅವರು ನವಿಲೆಯ ಜಡೆ ಶಂಕರನ ಕುರಿತು ಸ್ಥಳ ಪರಿಚಯಿಸಿದರು. ಬೆಂಗಳೂರಿನ ಶ್ರೀಮತಿ ವಿದ್ಯಾ ಹುಂಡೇಕಾರ ಅವರ ಪರಿಸರ ಕುರಿತು ಕೊನೆಯ ಆಸೆ ಕಥೆಯನ್ನು ಪ್ರಸ್ತುತ ಪಡಿಸಿದರು.
ಶ್ರೀಮತಿ ಮಹಾನಂದ ಪುರಶಟ್ಟಿ ಅವರು ಕುವೆಂಪು ಅವರ ಭಾವಗೀತೆ ಹಾಡಿದರು. ಶ್ರೀಮತಿ ಪ್ರಭಾ ಪಾಟೀಲ ಅವರು ಬೀಸುವ ಕಲ್ಲಿನ ಕುರಿತು ಜಾನಪದ ಹಾಡು ಹಾಡಿ ಜನಪದ ಲೋಕ ಸೃಷ್ಡಿಸಿದರು. ಶ್ರೀಮತಿ ಸುನೀತಾ ನಂದಣ್ಣನವರು ಶರಣ ಬೀಡು ಕವಿತೆಯನ್ನು ಹಾಡಿದರು.
ಶ್ರೀಮತಿ ಮೇಘಾ ಪಾಟೀಲ ಕಗ್ಗ ಕುರಿತು ಮಾತನಾಡಿದರು. ಶ್ರೀಮತಿ ಆಶಾ ಸವಸುದ್ದಿ ಅವರು ವಚನ ವಾಚಿಸಿದರು.
ಶ್ರೀಮತಿ ಪ್ರೇಮಕ್ಕ ಅಂಗಡಿ ಅವರು ಅಕ್ಕಮಹಾದೇವಿಯ ಪಾತ್ರದಲ್ಲಿ ಕಾಣಿಸಿಕೊಂಡು ವಚನ ವಾಚಿಸಿ ಅನುಭವ ಮಂಟಪದಲ್ಲಿ ನಡೆದ ಸಂವಾದದ ಚರ್ಚೆ ಮರು ಸೃಷ್ಟಿ ಸಿದರು.
ಶ್ರೀಮತಿ ಜ್ಯೋತಿ‌ಮಾಳಿ ಅಕ್ಕಮಹಾದೇವಿ ವಚನ, ಶ್ರೀಮತಿ ಚಿನ್ಮಯ ಪಾಟೀಲ ಕಣವಿ ಅವರ ಹಾಡುಗಾರಿಕೆ, ಶ್ರೀಮತಿ ಸುಮಾ ಹಿರೇಮಠ ಅವರ ತೇರು ಕುರಿತು ಹಾಡಿದರು.

ಶ್ರೀಮತಿ ಹಮೀದಾ ಬೇಗಂ ಅಮ್ಮನವರು ಗಂಡ ಹೆಂಡಿರ ಸಂವಾದ ರೂಪದ ಹಾಡನ್ನು ಹಾಡಿ ಅತ್ಯಂತವಾಗಿ‌ ಮನೋಜ್ಞ ರೀತಿಯಲ್ಲಿ ಪ್ರಸ್ತುತ ಪಡಿಸಿ ಸೈ ಎನಿಸಿಕೊಂಡರು. ಶ್ರೀಮತಿ ಶಮಾ ಜಮದಾರ ಗಜಲ್ ವಾಚಿಸಿ ನವಿರಾದ ಕವಿತೆಗೆ ಬೆಚ್ಚನೆಯ ಉಸಿರು ತೊಡಿಸಿದರು. ಶ್ರೀಮತಿ ಲೀಲಾ ಕೊಟೆಯವರು ಹೌದಾದರ ಹೌದು ಅನ್ರೀ ಎನ್ನುವ ಸ್ವರಚಿತ ಕವನ ವಾಚಿಸಿ ಪ್ರಸಕ್ತ ವಿದ್ಯಮಾನಗಳನ್ನು ಅನಾವರಣಗೊಳಿಸಿದರು.
ಸಹೋದರ ವಿಶ್ವನಾಥ ಬೆಳವಂಕಿ ಕಾವ್ಯಕೂಟದ ಕುರಿತ ಕವಿತೆ ಮನಸೊರೆಗೊಂಡರೆ, ಶ್ರೀಮತಿ ನಿರ್ಮಲಾ ಪಾಟೀಲ ವಕೀಲರು ಜನಪದಗೀತೆ ಹಾಡಿದರು. ಶ್ರೀಮತಿ ಶಾಲಿನಿ‌ ಚಿನಿವಾರ ಅವರು ಭಯದ ವಾತವರಣದಲ್ಲಿ ನಿರ್ಭಯವಾಗಿ ಕೂಟ ಕುರಿತು ತಿಳಿಸಿದರು.

(ಶ್ರೀಮತಿ ರಾಧ ಅಮ್ಮನವರ ನಗುವಿನ ಉತ್ಸಾಹ)

ಶ್ರೀಮತಿ ರಾಧ ಶಾಮರಾವ್ ಅವರು ಸಹೃದಯದ ಅಂಗಂಳದಲ್ಲಿ ಕವಿತೆ ವಾಚಿಸಿ ಉಲ್ಲಾಸ ಭರಿತ ಅವರ ಸತತ ನಗು ಎಲ್ಲರನ್ನೂ‌ ನಗೆಗಡಲಲ್ಲಿ ತೆಲಿಸಿದರು.
ಶ್ರೀಮತಿ ಅಕ್ಕಮಹಾದೇವಿ ಉಲಗಬಾಳಿ ಅವರು ಅಕ್ಕ ಮಹಾದೇವಿ ವಚನ ವಾಚಿಸಿ ವಿಶ್ಲೇಷಿಸಿದರು.
ಕು.ಮಂಜುಶ್ರೀ ಹಾವಣ್ಣನವರ್ ಅವರು ರಂಗೋಲಿಯಲ್ಲಿ ಬಿಡಿಸಿದ ಗಿಳಿ, ನವಿಲು, ಬವಸ (ಎತ್ತುಗಳು), ಕುಂಭ, ಆನೆ, ಪಾರಿವಾಳ ನೃತ್ಯ ಮಾಡುವ ಮಹಿಳೆ, ಬಣ್ಣ ಬಣ್ಣದ ದೀಪಗಳನ್ನು ಪ್ರದರ್ಶಿಸಿದರು. ಶ್ರೀಮತಿ ಆಶಾ ಯಮಕನಮರಡಿ ಅವರು ಹಿಟ್ಟಿಗೆ ನೀರು ಹಾಕಿನಿ ರೊಟ್ಟಿ ಮಾಡಕ ಕುಂತಿನಿ, ಜಟ್ಟಿಯಂತ ನನರಾಯ ಬರಲಿಲ್ಲ ಎನ್ನುವ ಜಾನಪದ ಹಾಡನ್ನು ಸುಶ್ರಾವ್ಯ ವಾಗಿ ಹಾಡಿ ಎಲ್ಲರೂ ಮೆಚ್ಚವ ರೀತಿಯಲ್ಲಿ ಪ್ರಸ್ತುತ ಪಡಿಸಿದರು. ಈ ವರದಿ ಬರದಿರುವ ನಾನು ವೀರೇಶ ಸೌದ್ರಿ ಮಸ್ಕಿ ರಾಯಚುರು‌ ಜಿಲ್ಲೆ ಕುರಿತು ಮಾತನಾಡಿ ರಾಯಚೂರು ಜಿಲ್ಲೆಯ ಪರಿಚಯ ಮಾಡುವ ಪ್ರಯತ್ನ ಮಾಡಿದೆ.
ಶ್ರೀಮತಿ ಲಲಿತಾ ಕ್ಯಾಸನ್ನವರ ಅವರ ಅಚ್ಚುಕಟ್ಟಾದ ನಿರೂಪಣೆ, ಕು.ಮಂಜುಶ್ರೀ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ವರದಿ – ವೀರೇಶ ಸೌದ್ರಿ ಮಸ್ಕಿ

One thought on “ಕ್ರಿಯಾಶೀಲತೆಯೇ ಮಂತ್ರ, ಬೆಳೆಯುವ-ಬೆಳಸುವ, ಬೆಳ್ಳಿಕೂಟ-ಕಾವ್ಯಕೂಟ

  1. ಕಾವ್ಯ ಕೂಟ ಬೆಳಗಾವಿ ಕೂಟದ ವಾರ್ಷಿಕ ದಿನಾಚರಣೆಯ ವರದಿ ಚೆನ್ನಾಗಿ ಬಂದಿದೆ.

Comments are closed.

Don`t copy text!