ಕೃಷಿ ಅಭಿವೃದ್ದಿಯೆ ಸರಕಾರದ ಮೊದಲ ಗುರಿ – ಶಾಸಕ ಪಾಟೀಲ


e-ಸುದ್ದಿ, ಇಳಕಲ್ಲ
ಕೃಷಿ ಅಭಿವೃದ್ದಿಯಾದರೆ ದೇಶವೆ ಅಭಿವೃದ್ದಿ ಆದಂತೆ ಅದಕ್ಕಾಗಿ ಇಂದು ಸರಕಾರ ಕೃಷಿ ಅಭಿವೃದ್ದಿಗೆ ಮೊದಲ ಆದ್ಯತೆ ಕೊಟ್ಟಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲರು ತಿಳಿಸಿದರು.
ಅವರು ಇಳಕಲ್ಲ ನಗರದ ರೃತ ಸಂಪರ್ಕ ಕೆಂದ್ರದಲ್ಲಿ ಕೃಷಿ ಇಲಾಖೆಯಿಂದ ರಾಷ್ಟ್ರೀಯ ಆಹಾರ `Àಬದ್ರತಾ ಅಭಿಯಾನ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದ್ವಿದಳ ಧಾನ್ಯ ಹಾಗು ಎಣ್ಣೆ ಕಾಳು ಬೆಳೆಗಳ ಕಿರು ಚೀಲ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಳಕಲ್ಲ ತಾಲೂಕಿನ ರೃತರಿಗೆ ಸರಕಾರ ಕೊಡಮಾಡಿದ ರಿಯಾಯತಿ ದರದಲ್ಲಿ ದ್ವಿದಳ ಧಾನ್ಯಗಳನ್ನು ವಿತರಣೆ ವಿತರಣೆ ಮಾಡಿ ಮುಂಗಾರು ಹಂಗಾಮಿನ ಮಳೆಯು ಚನ್ನಾಗಿದೆ ಇದರ ಸದುಪಯೋಗವನ್ನು ರೃತರು ಮಾಡಿಕೊಳ್ಳಲಿ ಎಂದು ಸರಕಾರ ರೃತರಿಗೆ ರಿಯಾಯತಿ ದರದಲ್ಲಿ ಹೆಸರು, ತೊಗರಿ ಹಾಗು ವಿವಿಧ ಬೀಜಗಳನ್ನು ಕೊಡುತ್ತಿದೆ ನೀವುಗಳು ಇದರ ಸದುಪಯೋಗ ಮಾಡಿಕೊಂಡು ಉತ್ತವ ವ್ಯವಸಾಯ ಮಾಡಿ ಕೃಷಿ ಉತ್ಪಾದನೆ ಹೆಚ್ಚಿಸಿಕೊಂಡು ನೀವುಗಳು ಆರ್ಥಿಕವಾಗಿ ಮುಂದಾಗಿ ಎಂದರು.
ತಾಲೂಕಾ ಕೃಷಿ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ಮಾತನಾಡಿ ತಾಲೂಕಿನಲ್ಲಿ ಈ ವರ್ಷ ಕೃಷಿ ಅಭಿವೃದ್ದಿ ಪಡಿಸಲು ಸನ್ಮಾನ್ಯ ಶಾಸಕ ದೊಡ್ಡನಗೌಡ ಪಾಟೀಲರು ಸರಕಾರದಿಂದ ಅತಿ ಹೆಚ್ಚು ಅನುದಾನ ತಂದು ರೃತರಿಗೆ ಯಾವದೇ ತೊಂದರೆ ಆಗದಂತೆ ವಿತರಣೆ ಮಾಡಲು ಆದೇಶಿಸಿದ್ದಾರೆ ಅವರಿಗೆ ತಾಲೂಕಾ ರೃತರ ಪರವಾಗಿ ನಾನು ಅಭಿನಂದಿಸುವೆ ಎಂದರು.
ಸಮಾರಂಭದಲ್ಲಿ ಭಾರತಿಯ ಜನತಾ ಪಕ್ಷದ ತಾಲೂಕಾ ಅದ್ಯಕ್ಷ ಮಹಾಂತಗೌಡ ಪಾಟೀಲ (ತೊಂಡಿಹಾಳ) ಇಳಕಲ್ಲ ರೃತ ಸಂಪರ್ಕ ಕೆಂದ್ರದ ಅಧಿಕಾರಿ ಕಂಚಿನಕೊಟೆ, ರಮೇಶ ಬೋರಣ್ಣವರ, ಕೃಷಿ ಅಧಿಕಾರಿ ಚವ್ವಾಣ ಹಾಗು ಇತರರು ಇದ್ದರು.

Don`t copy text!