ಸಿಸಿ ರಸ್ತೆ ಗುಣಮಟ್ಟ ಪರಿಕ್ಷೀಸಿದ ನಗರ ಸಭೆ ಅಧ್ಯಕ್ಷೆ ಶೋಭಾ

e-ಸುದ್ದಿ, ಇಳಕಲ್ಲ

ಇಲ್ಲಿನ ನಗರಸಭೆಯ ಡಿವ್ಹಿಜನ್ ನಂ. 26ರ ಲಕ್ಷ್ಮೀನಗರದ ಸಿಸಿ ರಸ್ತೆ ಕಾಮಗಾರಿಯನ್ನು ನಗರಸಭೆ ಅಧ್ಯಕ್ಷೆ ಶೋಭಾ ಆಮದಿಹಾಳ ವೀಕ್ಷಿಸಿ ಗುಣಮಟ್ಟ ಪರಿಶೀಲನೆ ನಡೆಸಿದರು.
ಸವದತ್ತಿ ಸರ್ ಮನೆಯಿಂದ ಪರುತಗೌಡ ಪಾಟೀಲ ಅವರ ಮನೆವರೆಗೆ ನಡೆದಿರುವ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದ ನಂತರ ರಸ್ತೆಯನ್ನು ಕಳಪೆಯಾಗದಂತೆ ನೋಡಿಕೊಂಡು ಚೆನ್ನಾಗಿ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ. ಮಳೆಗಾಲ ಆರಂಭವಾಗುತ್ತಿದ್ದು ಕಾಮಗಾರಿ ಬೇಗ ಬೇಗ ಮುಗಿಸಿ ಎಂದು ಅಧ್ಯಕ್ಷೆ ಶೋಭಾ ಆಮದಿಹಾಳ ಸಂಬಂಧಿಸಿದ ಗುತ್ತಿಗೆದಾರನಿಗೆ ಸೂಚಿಸಿದರು.
ಪೌರಾಯುಕ್ತ ಜಗದೀಶ ಹುಲಗೆಜ್ಜಿ, ಅಭಿಯಂತರಾದ ಎಂ.ಎಂ. ಪಾಟೀಲ, ನಗರಸಭೆ ಸದಸ್ಯ ಚಂದ್ರಶೇಖರ ಏಕಬೋಟಿ, ಇತರರು ಇದ್ದರು.

Don`t copy text!