–ಡಾ.ಸರ್ವಮಂಗಳಾ ಸಕ್ರಿ, ರಾಯಚೂರು
“ಬೆಕ್ಕು ನುಂಗಿದ ಕೋಳಿ, ಸತ್ತು ಕೂಗಿತ್ತ ಕಂಡೆ. ಕರಿಯ ಕೋಗಿಲೆ ಬಂದು ರವಿಯ ನುಂಗಿತ್ತ ಕಂಡೆ. ಸೆಜ್ಜೆ ಬೆಂದು ಶಿವದಾರ ಉಳಿಯಿತ್ತು. ಪ್ರಾಣಲಿಂಗವೆಂಬ ಶಬ್ದ ವ್ರತಗೇಡಿಯಾಯಿತ್ತು. ನೀರ ಮೇಲಣ ಹೆಜ್ಜೆಯನಾರೂ ಬಲ್ಲವರಿಲ್ಲ. ಗೊಹೇಶ್ವರನೆಂಬ ಶಬ್ದವಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ. “-
-ಅಲ್ಲಮಪ್ರಭು ದೇವರು
ಬೆಕ್ಕು ನುಂಗಿದ ಕೋಳಿ ಸತ್ತು
ಕೂಗಿತ್ತು ಕಂಡೆ.ಕರಿಯ ಕೋಗಿಲೆ ಬಂದು ರವಿಯ ನುಂಗಿತ್ತ ಕಂಡೆ.ಸೆಜ್ಜೆ ಬೆಂದು
ಶಿವದಾರ ಉಳಿಯಿತ್ತು.ಪ್ರಾಣ
ಲಿಂಗವೆಂಬ ಶಬ್ದ ವ್ರತಗೇಡಿಯಾಯಿತ್ತು.ನೀರ ಮೇಲಿನ ಹೆಜ್ಜೆಯನಾರೂ ಬಲ್ಲವರಿಲ್ಲ . ಗುಹೇಶ್ವರನೆಂಬ
ಶಬ್ದವಲ್ಲಿಯೂ ಇಲ್ಲ .ಇಲ್ಲಿಯೂ ಇಲ್ಲ.
ಅಲ್ಲಮಪ್ರಭುವಿನ ವಚನಗಳು ಬೆಡಗಿನ ಸಾಂಕೇತಿಕತೆನ್ನು ನಿಘೂಡತೆಯನ್ನು ಸ್ಪಷ್ಟ ಪಡಿಸುತ್ತದೆ.ಅಲ್ಲಮನ ಆದ್ಯಾತ್ಮದಲ್ಲಿ ಪ್ರಾಣಿ ಪಕ್ಷಿಗಳು ಮನುಷ್ಯನ ಆಂತರಿಕ ಮನಸ್ಸಿನ ಜೊತೆಗೆ
ಸಂವೇದಿಸುತ್ತವೆ. ನಮ್ಮ ಪ್ರಕೃತಿ ಪರಿಸರದಲ್ಲಿ ಕಾಣುವ
ಬೆಕ್ಕು ಕೋಳಿ ಕೋಗಿಲೆಗಳು
ಅಲ್ಲಮನ ವಚನಗಳಲ್ಲಿ ನಮಗೆ ಅಪರಿಚಿತವಾಗಿ ಕಾಣುತ್ತವೆ. ಆದರೆ ವಚನಗಳ
ಪ್ರವೇಶದ ಸಹಜ ಬೆಡಗಿನ ಭಾಷೆಗೆ ರೂಢಿಯಾಗುತ್ತದೆ.
ಕತ್ತಲಲ್ಲಿ ಬೇಟೆಗಾಗಿ ಕಾಯುವ ಮನುಷ್ಯನೆಂಬ ಬೆಕ್ಕು ಮಾಯಾ ಪ್ರಪಂಚವನ್ನು ಸೃಷ್ಟಿ ಮಾಡುತ್ತದೆ. ಪ್ರಣವ ಸ್ವರೂಪ ಎಚ್ಚರಿಕೆಯನ್ನು ಕೊಡುವ ಪುಟ್ಟದಾದ ಕೋಳಿ
ಸತ್ವಹೀನವಾಗಿದೆ.ಮನುಷ್ಯನ
ವಿಷಯಾಸಕ್ತಿಗಳ ಜೊತೆಗೆ ವ್ಯವಹರಿಸುವ ಜೀವನು ಸತ್ತ
ಕೋಳಿಯ ಓಃಕಾರವನ್ನು ಕೇಳಿದೊಡನೆ ಶೂಲದಿಂದ ಇರಿದಂತೆ ಭಾವಿಸುತ್ತಾನೆ. ಪುಟ್ಟದಾದ ಪ್ರಣವ ನಾದದ
ಕೋಳಿ ಮಾಯೆ ಎಂಬ ಬೆಕ್ಕಿಗೆ ಆಹಾರವಾಗುತ್ತದೆ.
ಅಹಂಕಾರಿಯಾದ ಮನುಷ್ಯ ಭೋಗದ ವ್ಯಾಮೋಹ ಕ್ಕೆ ಸಿಲುಕಿ ನಸ್ಸತ್ವನಾಗುತ್ತಾನೆ.
ಈ ದೇಹದಲ್ಲಿ ಶಕ್ತಿ ಸಂಚಯವಾಗ ಬೇಕಾದರೆ ಪ್ರಾಣ ಬೇಕು. ಹಸಿವು ತೃಷೆ ವಿಷಯ ನಿದ್ರೆ ಭೋಗಗಳನ್ನು ತ್ಯಜಿಸಬೇಕು.
ಅ ಜ್ಞಾನ ದಿಂದ ವರ್ತಿಸುವ ಕರಿ ಕೋಗಿಲೆ ಜ್ಞಾನಿಯಾದರೂ
ಅಹಂಕಾರದ ಪೊರೆ ಆವರಿಸಿದ ಕೋಗಿಲೆಯಾಗಿದೆ.ರವಿ ಪ್ರಜ್ವಲತೆಯ ಜ್ಞಾನದ ಸಂಕೇತ. ಅಹಂಕಾರ ದರ್ಪದಿಂದ ವರ್ತಿಸುವ ಮನುಷ್ಯ ನ ಅ ಜ್ಞಾನ ನವನ್ನು ಕರಿಯ ಕೋಗಿಲೆ ರವಿಯನ್ನು ಅಂದರೆ ಸು ಜ್ಞಾನ ವನ್ನು ನುಂಗುತ್ತದೆ.
ಮನುಷ್ಯನ ಪ್ರಾಣವೇ ಪಂಚೇಂದ್ರಿಯಗಳಿಗೆ ಶ್ರೇಷ್ಠ ತನವನ್ನು ಜೇಷ್ಠ ತನವನ್ನು
ಕೊಡುವುದು. ಸಾಧಕನಿಗೆ ಭಕ್ತಿಯ ಶಕ್ತಿ ಸಂಚಯವಾಗ
ಗ್ಬೇಉಕದರೆ ಜೇಷ್ಠ ತನದ ಪ್ರಾಣ ಬೇಕು.ಆದರೆ ಲಿಂಗಕ್ಕೆ ಪ್ರಾಣವೇ ಪೂಜೆ. ಪ್ರಾಣ
ಲಿಂಗ ವೆಂಬ ವ್ರತಗೇಡಿಯಾದ ಈ ದೇಹವು ಪ್ರಕೃತಿ ತತ್ವಗಳನ್ನು ಆವರಿಸಿ ಕೊಂಡಿರುತ್ತದೆ.ಪಿಂಡಾಂಡದ ಈ ದೇಹದಲ್ಲಿ ಪ್ರಾಣವಿರುವುದಲ್ಲದೆ ಲಿಂಗ
ವಿರುವುದೇ ಪ್ರಾಣವನ್ನುತಂದು ಇಷ್ಟ ಲಿಂಗದಲ್ಲಿರಿಸಿದರೆ ಪ್ರಾಣಲಿಂಗ ವೆಂಬುದು
ವ್ರತಗೇಡಿಯಾಗುತ್ತದೆ. ಲಿಂಗ ಪ್ರಾಣವೇ ಶಿವ.ಗುಹೇಶ್ವರ.ಆತನೆ ತಂದೆ ತಾಯಿ ದೇವರು.ಲಿಂಗಾತ್ಮವೆ ಪ್ರಾಣವೆಂದರಿತವರನು ಶ್ರೇಷ್ಠ ಸಾಧಕನಾಗುತ್ತಾನೆ.
ಅಲ್ಲಮನ ಈ ಬೆಕ್ಕು ಬರೀ ಖಳ ನಾಯಕನಿಗೆ ಸೀಮಿತವಾಗಿಲ್ಲ. ಮನುಷ್ಯನ
ವ್ಯಕ್ತಿತ್ವದ ಭಕ್ತಿಯ ವಿಕಾಸದ ಮಿತಿಯನ್ನು ಅಲ್ಲಮ ಅತ್ಯಂತ ಎಚ್ಚರಿಕೆಯಿಂದ
ಸ್ಪಷ್ಟತೆಯನ್ನು ಕೊಡುತ್ತಾನೆ.