ಪೋಲಿಸ್, ಅಗ್ನಿ ಶಾಮಕದಳದಿಂದ ಶೋಧ ಕಾರ್ಯ ಮುಂದುವರಿಕೆ, ತಂಡ ರಚನೆ

ಮಸ್ಕಿ : 5 ದಿನಗಳ ಹಿಂದೆ ಮಸ್ಕಿ ಹಳ್ಳಕ್ಕೆ ಕೊಚ್ಚಿಕೊಂಡು ಹೋಗಿದ್ದ ಚನ್ನಬಸವ ಮಡಿವಾಳ ಹುಡುಕಾಟಕ್ಕಾಗಿ ಗುರುವಾರ ಪೊಲೀಸರು ಮತ್ತು ಅಗ್ನಿ ಶಾಮಕದಳದಿಂದ ತಂಡ ರಚಿಸಲಾಗಿದೆ.
ಲಿಂಗಸುಗೂರು, ಸಿಂಧನೂರು ಮತ್ತು ಮಾನ್ವಿ ತಾಲುಕು ಮತ್ತು ಸ್ಥಳಿಯ 30 ಕ್ಕೂ ಹೆಚ್ಚು ಸಿಬ್ಬಂದಿಗಳು ಹುಡುಕಾಟದಲ್ಲಿ ತೊಡಗಿದ್ದಾರೆ.
ಪಟ್ಟಣದ ಹಳ್ಳದಲ್ಲಿ ತಂಡಗಳು ಬಿಡುಬಿಟ್ಟಿದ್ದು ಹಳ್ಳದಲ್ಲಿರುವ ಜಾಲಿಗಿಡ, ತಗ್ಗು ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಹಳ್ಳದ ಮೇಲೆ ಹಾದು ಹೋಗಿರುವ ತುಂಗಭದ್ರ ಎಡದಂಡೆ ನಾಲೆಯ ಕೆಳಭಾಗದಲ್ಲಿ, ಕಡಬುರು, ಬಳಗಾನೂರು, ಮತ್ತು ಪೊತ್ನಾಳ ವರೆಗೆ ಹಳ್ಳದ ಗುಂಟ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಿಪಿಐ ದೀಪಕ್ ಬೂಸರಡ್ಡಿ ತಿಳಿಸಿದರು.


ಹಳ್ಳದ ಗುಂಟ ಇರುವ ಹಳ್ಳಿಗಳಲ್ಲಿ ಚನ್ನಬಸವನ ಬಗ್ಗೆ ಮಾಹಿತಿ ಕಂಡುಬಂದರೆ ತಿಳಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಧ್ವನಿವರ್ಧಕದ ಮೂಲಕ ಮನವಿ ಮಾಡಿದ್ದಾರೆ.
ತೆಪ್ಪ ಕಾರ್ಯ ಸ್ಥಗಿತ ಃ ಹಳ್ಳದಲ್ಲಿ ನೀರಿನ ಹರಿವು ಪ್ರಮಾಣ ಕಡಿಮೆಯಾಗಿದ್ದು, ಮುಳ್ಳು ಕಂಟಿಗಳು ಅಧಿಕವಾಗಿದ್ದು ತೆಪ್ಪ ಚಲಿಸಲು ಸಾಧ್ಯವಾಗದ ಕಾರಣ ತೆಪ್ಪದ ಮೂಲಕ ಹುಡುಕಾಟವನ್ನು ಸ್ಥಗಿತಮಾಡಿ ಸಿಬ್ಬಂದಿಗಳು ಹಳ್ಳದಲ್ಲಿ ಸಂಚಿರಿಸಿ ಹುಡುಕಾಟಕ್ಕೆ ಮುಂದಾಗಿದ್ದಾರೆ.
ಹುಡುಕಾಟಕ್ಕೆ ಅಡ್ಡಿ ಃ ಹಳ್ಳದಲ್ಲಿ ಆಳೆತ್ತರದ ದೊಡ್ಡ ದೊಡ್ಡ ತಗ್ಗುಗುಂಡಿಗಳು, ಗಿಡ ಗಂಟಿಗಳು ಎಥೇಚ್ಚವಗಿ ಬೆಳದಿರುವದು ಹುಡುಕಾಟಕ್ಕೆ ಅಡ್ಡಿಯಾಗತೊಡಗಿದೆ. ಗಿಡಗಳನ್ನು ತೆರವುಗೊಳಿಸಲು ಜೆಸಿಬಿ ಯಂತ್ರ ಬಳಸಲು ಕೂಡ ಹಳ್ಳದಲ್ಲಿ ಹಸಿ ಇದ್ದು ಹಾಗು ತಗ್ಗುಳಿರುವದು ಇರುವದರಿಂದ ತೊಂದರೆಯಾಗತೊಡಗಿದೆ.
ಸಿಬ್ಬಂದಿಗಳಿಗೆ ಗಾಯ ಃ ಭಾನುವಾರ ಹಳ್ಳದಲ್ಲಿ ಚನ್ನಬಸವನ ರಕ್ಷಣೆಗೆ ಮುಂದಾಗಿದ್ದ ಅಗ್ನಿ ಶಾಮಕದಳ ಸಿಬ್ಬಂದಿಯೋರ್ವನಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲದೆ ಎಂಟು ಜನ ಸಿಬ್ಬಂದಿಗಳಿಗೆ ಕಾಂiÀರ್iಚರಣೆ ಸಮಯದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಜಿಲ್ಲಾ ಅಗ್ನಿಶಾಮಕದಳ ಮುಖ್ಯಸ್ಥ ರವೀಂದ್ರ ಘಾಟೆ ತಿಳಿಸಿದರು.
ಶಂಕೆ ಃ ಕಳೆದ ಐದು ದಿನಗಳಿಂದ ಚನ್ನಬಸವ ಪತ್ತೆಯಾಗದಿರುವದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಹಳ್ಳದಲ್ಲಿ ದೊಡ್ಡ ದೊಡ್ಡ ತಗ್ಗು ಗುಂಡಿಗಳು ಮತ್ತು ಜಾಲಿಗಳು ಇರುವದರಿಂದ ತಗ್ಗು ಪ್ರದೇಶದಲ್ಲಿ ಚನ್ನಬಸವ ಸಿಕ್ಕಿ ಹಾಕಿಕೊಂಡಿರುಬಹುದು, ಹಳ್ಳದ ನೀರಿನ ರಭಸಕ್ಕೆ ಕಸ ಕಡ್ಡಿ, ಉಸುಕು ತಗ್ಗು ಪ್ರದೇಶಗಳಿಗೆ ಬಂದು ಕುಳಿತರೇ ಹುಡುಕುವದು ಕಷ್ಟ ಎಂದು ಎಂದು ಸಾರ್ವಜನಿಕರು ಹಾಗೂ ಅಧಿಕಾರಿಗಳು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಎಂಥದೆ ಪರಸ್ಥಿಯಲ್ಲಿ ಚನ್ನಬಸವನ ಹುಡಕಾಟವನ್ನು ನಿಲ್ಲಿಸುವುದಿಲ್ಲ ಎಂದು ಪಿಎಸ್‍ಐ ಸಣ್ಣ ವೀರೇಶ ತಿಳಿಸಿದ್ದಾರೆ. ಗುರುವಾರ ನಡೆದ ಶೋಧಕಾರ್ಯದಲ್ಲಿ ತಹಸೀಲ್ದಾರ ಬಲರಾಮ ಕಟ್ಟಿಮನಿ, ಅಗ್ನಿಶಾಮಕದಳದ ಜಿಲ್ಲಾ ಮುಖ್ಯಸ್ಥ ರವೀಂದ್ರ ಘಾಟೇ, ಸಿಪಿಐ ದೀಪಕ್ ಬೂಸರಡ್ಡಿ, ಪಿಎಸ್‍ಐ ಸಣ್ಣ ವೀರೇಶ ಇದ್ದರು.

Don`t copy text!