ಮಸ್ಕಿ : ಹಳ್ಳದ ನೀರಿನ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದ ಚನ್ನಬಸವ ಮಡಿವಾಳ ಕುಟುಂಬ ಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ವಯಕ್ತಿಕ ವಾಗಿ ೧ ಲಕ್ಷ ರೂಪಾಯಿ ನೀಡಿದರು.
ಪಟ್ಟಣದ ಮುದಗಲ್ ರಸ್ತೆಯ ಹತ್ತಿರ ಇರುವ ಚನ್ನಬಸವ ಮಡಿವಾಳ ಮನೆಗೆ ಗುರುವಾರ ಭೇಟಿನೀಡಿದ ಅವರು ಚನ್ನಬಸವನ ಪತ್ನಿ ನೇತ್ರಮ್ಮಳಿಗೆ ಮತ್ತು ತಾಯಿಗೆ ಸಾಂತ್ವಾನ ಹೇಳಿದರು.
ಚನ್ನಬಸವ ನ ಹುಡುಕಾಟಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವದು ಮತ್ತು ಸರ್ಕಾರದಿಂದ ಸಹಾಯ ಸಿಗುವಂತೆ ಮಾಡಲು ಪ್ರಯತ್ನಿಸುವೆ ಎಂದು ಪ್ರತಾಪಗೌಡ ತಿಳಿಸಿದರು.
ಬಿಜೆಪಿ ಮುಖಂಡರಾದ ಮಹಾದೇವಪ್ಪ ಗೌಡ ಪಾಟೀಲ, ಅಂದಾನಪ್ಪ ಗುಂಡಳ್ಳಿ, ಪುರಸಭೆ ಸದಸ್ಯ ರವಿಗೌಡ ಪಾಟೀಲ, ಶರಣಯ್ಯ ಸೊಪ್ಪಿಮಠ ಹಾಗೂ ಇತರರು ಇದ್ದರು.