ಡಾ.ಅಬ್ದುಲ್ ಕಲಾಂ ರಾಯಚೂರು ಭೇಟಿ ನೆನಪು

ರಾಯಚೂರು : ಡಾ.ಅಬ್ದುಲ್ ಕಲಾಂ ಅಸಾಧಾರಣ ವ್ಯಕ್ತಿ ಎಂದು ರಾಯಚೂರಿನ ನಿವೃತ್ತ ಉಪನ್ಯಾಸಕರು ಹಾಗೂ ರಾಯಚೂರು ವಿಜ್ಞಾನ ಸಂಸ್ಥೆ ಸಂಸ್ಥಾಪಕರಾದ ಸಿ.ಡಿ.ಪಾಟೀಲ ಸ್ಮರಿಸಿಕೊಂಡರು.

ಗುರುವಾರ e-ಸುದ್ದಿ ಯೊಂದಿಗೆ ಮಾತನಾಡಿ 2013 ರಲ್ಲಿ ರಾಯಚೂರಿಗೆ ಡಾ.ಅಬ್ದುಲ್ ಕಲಾಂ ಅವರು ಬಂದಾಗ ಅವರೊಡನೆ  ಇದ್ದ  ಒಡನಾಟವನ್ನು ಸ್ಮರಿಸಿಕೊಂಡರು.
ಅಕ್ಟೋಬರ್ 15 ಡಾ.ಕಾಲಂ ಅವರ ಜನ್ಮದಿನ. ಅವರು ಶ್ರೇಷ್ಠ ವಿಜ್ಞಾನಿ ಮತ್ತು ರಾಷ್ಟ್ರಪತಿಗಳಾಗಿ ಇಂದಿನ ಎಲ್ಲಾ ನಾಯಕರಿಗೆ, ಯುವಕರಿಗೆ ಮಾದರಿ ವ್ಯಕ್ತಿ ಎಂದು ಬಣ್ಣಿಸಿದರು.
ಸಾರ್ವಜನಿಕ ಜೀವನದಲ್ಲಿ ಶ್ರೇಷ್ಠ ವ್ಯಕ್ತಿಗಳು ಹೇಗಿರಬೇಕು ಎಂಬುದಕ್ಕೆ ಕಲಾಂ ಅವರು ಆದರ್ಶರಾಗಿದ್ದರು. ವಿಜ್ಞಾನದ ಮೂಲಕ ಆಧ್ಯಾತ್ಮ ಸಾಧಿಸುವ ಗುಣ ಅವರಲ್ಲಿತ್ತು. ಮಕ್ಕಳನ್ನು ವಿಜ್ಞಾನದ ಕಡೆ ಹೆಚ್ಚು ಹೆಚ್ಚು ತೊಡಗಿಸಿರಿ ಎಂದು ನನಗೆ ಉಪದೇಶಿಸಿದ್ದರು ಎಂದು ಸಿ.ಡಿ.ಪಾಟೀಲ ಕಲಾಂ ಅವರ ಜನ್ಮದಿನದಂದು ಸ್ಮರಿಸಿಕೊಂಡರು.

Don`t copy text!