ಮಸ್ಕಿ : ಪಟ್ಟಣದ ಮುದಗಲ್ ರಸ್ತೆಯಲ್ಲಿರುವ ಸುರೇಶ ಅರಳಿ ಅವರ ಹೊಲದಲ್ಲಿ ಮಳೆಗೆ ಭತ್ತ ನೆಲಕ್ಕುರುಳಿದೆ.
ಕಳೆದ ಎರಡು ಮೂರು ದಿನಗಳಿಂದ ಧಾರಕಾರವಾಗಿ ಸುರಿದ ಮಳೆಗೆ ಮಸ್ಕಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ರುವ ಹೊಲದಲ್ಲಿ ನಾಟಿ ಮಾಡಿದ್ದ ಭತ್ತ ನೆಲಕ್ಕುರುಳಿ ರೈತರು ಅತಂತ್ರರಾಗಿದ್ದಾರೆ.
ಸುರೇಶ ಅರಳಿ ೫ ಎಕರೆ ಹೊಲದಲ್ಲಿ ಭತ್ತ ನಾಟಿ ಮಾಡಿದ್ದರು. ಎಕರೆಗೆ ೩೦ ರಿಂದ ೩೫ ಸಾವಿರ ರೂ. ಖರ್ಚು ಮಾಡಿದ್ದು ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಸುರೇಶ ಅರಳಿ ತಿಳಿಸಿದರು.
ಈ ಬಾರಿ ಭತ್ತ ಚನ್ನಾಗಿ ಬಂದಿತ್ತು. ಅಕಾಲಿಕ ಮಳೆ ರೈತರನ್ನು ಆತಂಕಕ್ಕೆ ದೂಡಿದೆ. ಬಹುತೇಕ ರೈತರು ಪರಿಹಾರಕ್ಕಾಗಿ ಕಂದಾಯ ಇಲಾಖೆಗೆ ಅಲೆಯುತ್ತಿದ್ದಾರೆ.