ಮಸ್ಕಿ : ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಶನಿವಾರ ದೇವಿ ಪುರಾಣ ಕಾರ್ಯಕ್ರಮಕ್ಕೆ ಗಚ್ಚಿನಮಠದ ಶ್ರೀವರರುದ್ರಮುನಿ ಶಿವಾರ್ಚಾಯರು ಚಾಲನೇ ನೀಡಿದರು.
ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಪುರಾಣವನ್ನು ಸಂಜೆ ಬದಲಿಗೆ ಬೆಳಿಗ್ಗೆ ಪಠಣ ಮಾಡುತ್ತಿದ್ದು ಭಕ್ತರು ದೂರ ದೂರ ಕುಳಿತುಕೊಂಡು ಪುರಾಣ ಆಲಿಸಬೇಕು ಮತ್ತು ಸ್ಯಾನಿಟೈಸರ್ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಬೆಳಿಗ್ಗೆ ಭ್ರಮರಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಘಟ ಸ್ಥಾಪನೆ ನೆರವೇರಿಸಿದರು. ದೇವರಾಜ ಗವಾಯಿ ಪುರಾಣ ಪಠಿಸಿದರು. ಅಮರೇಶ ಹೂಗಾರ ಸಂಗೀತ ಸಾಥ್ ನೀಡಿದರು.
ಅಂಕಲಿಮಠದ ಫಕೀರೇಶ್ವರ ಸ್ವಾಮೀಜಿ , ದೇವಸ್ಥಾನ ಸಮಿತಿಯ ಪ್ರಕಾಶ ಧಾರಿವಾಲ, ಸಿದ್ದಲಿಂಗಯ್ಯ ಗಚ್ಚಿನಮಠ, ಮಲ್ಲಪ್ಪ ನಾಯಿಕೊಡೆ, ನಾಗರಾಜ ಸಜ್ಜನ, ಮಲ್ಲಿಕಾರ್ಜುನ ಕ್ಯಾತ್ನಟ್ಟಿ, ನಾಗಭೂಷಣ ನಂದಿಹಾಳ, ಷಡಕ್ಷರಪ್ಪ ಬಾಳೆಕಾಯಿ, ಘನಮಠದಯ್ಯ ಸಾಲಿಮಠ, ಮಹಾಂತೇಶ ಮಸ್ಕಿ ಇದ್ದರು.
ಚೌಡೇಶ್ವರಿ ದೇವಸ್ಥಾನ : ಕಲ್ಗುಡಿಯ ಚೌಡೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಿ ಅಲಂಕಾರ ಮಾಡಲಾಯಿತು. ದೇವಾಂಗ ಸಮಾಜದ ಮುಖಂಡರಾದ ಶಿವಶಂಕ್ರಪ್ಪ ಹಳ್ಳಿ, ಅಮರಪ್ಪ ಕೊಪ್ಪರದ, ಮಂಜುನಾಥ ಮಾಳ್ಗಿ, ಹನುಮಂತಪ್ಪ ವೀರಾಪುರ ನಿವೃತ್ತ ಶಿಕ್ಷಕರು ಹಾಗೂ ಇತರರು ಭಾಗವಹಿಸಿದ್ದರು.
ವೆಂಕಟೇಶ್ವರ ದೇವಸ್ಥಾನ : ವೆಂಕಟೇಶ್ವರ ದೇವಸ್ಥಾನದಲ್ಲಿ ವೆಂಕಟೇಶನಿಗೆ ವಿಶೇಷ ಅಲಂಕಾರ ಮಾಡಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು. ಬ್ರಾಹ್ಮಣ ಸಮಾಜದ ಮುಖಂಡರು, ವೈಶ್ಯ ಸಮಾಜದ ಮುಖಂಡರು, ರಜಪುತ ಸಮಾಜದ ಮುಖಂಡರು ಭಾಗವಹಿಸಿದ್ದರು.