ದಾನ

ದಾನ

ದಾನ ಶೂರನಾಗಿ
ಅಂಗವ ಹರಿದು ನೀಡಿದ
ಕುಂಡಲಗಳ ಕಿತ್ತು ಕೊಟ್ಟ
ಸಾವಿನ ಭಯವಿಲ್ಲದ ಕರ್ಣ

ದಾನ ವೀರನಾಗಿ
ಮೂರನೇಯ ಹೆಜ್ಜೆಗೆ
ತಲೆ ಯ ನೀಡಿದ ಬಲೀಂದ್ರ
ಹೂತು ಹೊದ ಭೂಗರ್ಭದಿ

ದಾನಿಗಳು ಮೆರೆಯುತ್ತಿಹರು
ಟ್ವಿಟ್ಟರ್ ಫೆಸಬುಕ್ ಗಳಲ್ಲಿ
ತಾವು ನೀಡಿದ ಬ್ರೆಡ್ ಬಿಸ್ಕಿಟ್
ನೀರಿನ ಬಾಟಲಿಗಳೊಂದಿಗೆ

ಹೊಟ್ಟೆ ಬಿರಿಯುವಂತೆ
ತಿಂದುಂಡು ಉಳಿದದ್ದನ್ನು
ಹಸಿದವರಿಗೆ ನೀಡುವರು
ಸೆಲ್ಫಿ ಪೋಸ್ ನೊಂದಿಗೆ

ಮಹಾದಾನಿ ಹಣೆ ಪಟ್ಟಿ ಕಟ್ಟಿ
ಪ್ರಶಸ್ತಿಗಳ ಮಾಲೆ ಧರಿಸುವ
ದಾನದ ಅರ್ಥವನರಿಯದ
ಗಾವಿಲ ಗೊಸುಂಬೆಗಳು

ಪ್ರೊ.ರಾಜನಂದಾ ಘಾರ್ಗಿ
ಬೆಳಗಾವಿ

Don`t copy text!