e-ಸುದ್ದಿ, ಮಸ್ಕಿ
ಮೂರು ತಾಲ್ಲೂಕುಗಳನ್ನೊಗೊಂಡು ರಚನೆಯಾಗಿರುವ ಮಸ್ಕಿ ತಾಲ್ಲೂಕಿನಲ್ಲಿ ಭೂ ದಾಖಲೆಗಳ ಕಚೇರಿಯನ್ನು ಶೀಘ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುವುದು ಎಂದು ತಹಶೀಲ್ದಾರ್ ಕವಿತಾ ಆರ್. ಭರವಸೆ ನೀಡಿದರು.
ಪಟ್ಟಣದಲ್ಲಿ ಭೂ ದಾಖಲೆ ಕಚೇರಿ ಹಾಗೂ ಸರ್ವೇ ಕಾರ್ಯ ವಿಳಂಬ ವಿರೋಧಿಸಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ ಕವಿತಾ ಅವರಿಗೆ ಮನವಿ ಪತ್ರ ಸಲ್ಲಿಸಿದಾಗ ಉತ್ತರಿಸಿದ ಅವರು ಈಗಿರುವ ತಾತ್ಕಾಲಿಕ ಕಟ್ಟಡ ಶಿಥಿಲಗೊಂಡಿದ್ದರಿಂದ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲು ಕೋರಿ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಒಂದೇರಡು ದಿನಗಳಲ್ಲಿ ಅದಕ್ಕೆ ಒಪ್ಪಿಗೆ ಸಿಗಲಿದ್ದು ಶೀಘ್ರದಲ್ಲಿ ಖಾಸಗಿ ಕಟ್ಟಡಕ್ಕೆ ಭೂ ದಾಖಲೆಗಳ ಕಚೇರಿ ಸ್ಥಳಾಂತರಿಸಿ ಪೂರ್ಣ ಪ್ರಮಾಣದಲ್ಲಿ ಕಚೇರಿ ಕಾರ್ಯಾರಂಭ ಮಾಡಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಅವರ ಜಮೀನುಗಳನ್ನು ಸರ್ವೇ ಮಾಡಿಕೊಡುವಂತೆ ಸರ್ವೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಪ್ರತಿಭಟನೆ : ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಭೂ ದಾಖಲೆಗಳ ಕಚೇರಿ ಅವ್ಯವಸ್ಥೆ ಹಾಗೂ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ತಹಶೀಲ್ದಾರ್ ಅವರನ್ನು ಆಗ್ರಹಿಸಿದರು.
ರೈತ ಸಂಘದ ತಾಲ್ಲೂಕು ಅದ್ಯಕ್ಷ ವಿಜಯ ಬಡಿಗೇರ್, ಮುಖಂಡರಾದ ಹನುಮಂತಪ್ಪ, ಶಂಕ್ರಪ್ಪ, ಆಂಜನೇಯ ಮೋಚಿ, ಜಾಕೋಬ್, ಶೇಠಪ್ಪ ಮೂಡಲದಿನ್ನಿ, ಯಮನಪ್ಪ ಭೋವಿ. ಹನುಮಂತಪ್ಪ ಉಪ್ಪಾರ, ಸೂಗಣ್ಣ. ಶಿವು ಸೇರಿದಂತೆ ಇತರರು ಇದ್ದರು.