e-ಸುದ್ದಿ ಓದುಗರಿಗೆಲ್ಲ ಶರಣು ಶರಣಾರ್ಥಿಗಳು
ಅಕ್ಟೋಬರ್ ೨ , ೨೦೨೦ ಗಾಂಧಿ ಜಯಂತಿಯಂದು
e-ಸುದ್ದಿ ಅಂತರಜಾಲದ ಪತ್ರಿಕೆ ಜನ್ಮ ತಾಳಿದೆ.
ಕಳೆದ ೯ ತಿಂಗಳಿನಿಂದ ನಿರಂತರವಾಗಿ ಸುದ್ದಿ, ಕವಿತೆ, ಕತೆ, ವಚನ ವಿಶ್ಲೇಷಣೆ, ವಿಶೇಷ ಲೇಖನ, ವ್ಯಕ್ತಿ ಪರಿಚಯ ಪ್ರಕಟಿಸಲಾಗಿದೆ. ಇನ್ನೂ ಮುಂದೆ ಹೊಸ ಹೊಸ ರೀತಿಯ ಪ್ರಯೋಗಗಳಿಗೆ e-ಸುದ್ದಿ ತಂಡ ಯೋಚಿಸತೊಡಗಿದೆ.
ಆರಂಭದಲ್ಲಿ ಕೆಲವೇ ಜನ ಬರೆಯುತ್ತಿದ್ದವರು ಇಂದು ಅನೇಕರು ಬರೆಯುವ ಮೂಲಕ ಬರಹಗಳಿಗೆ ಪಾಳಿ ಹಚ್ಚುವ ಹಾಗೆ ಆಗಿದೆ. ಹಿರಿಯ ಬರಗಾರರು ನನಗೆ ತಮ್ಮ ಬರಹ ಕಳಿಸಿ ಹಾರೈಸುತ್ತಿದ್ದಾರೆ. ಹೊಸ ಬರಹಗಾರರಿಗೆ ಇದೊಂದು ಉತ್ತಮ ವೇದಿಕೆಯಾಗಿ ರೂಪಗೊಂಡಿದೆ.
ಸಣ್ಣ ಪ್ರಮಾಣದಲ್ಲಿದ್ದ ಚಂದದಾರರ ಸಂಖ್ಯೆ ಇಂದು ೧೦೦೦ ಗಡಿ ಸಮೀಪಿಸಿರುವುದು ಧನ್ಯತೆಯನ್ನೂ ಮೂಡಿಸಿದೆ.
ಕಳೆದ ಒಂದು ವಾರದಿಂದ e-ಸುದ್ದಿ ಗೆ ಗೂಗಲ್ ನಿಂದ ಜಾಹಿರಾತುಗಳು ಬರತೊಡಗಿವೆ ನೀವು ಗಮನಿಸಿರಬಹುದು. ಇದೊಂದು e-ಸುದ್ದಿ ಗೆ ಚೈತನ್ಯ.
ನಾನು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೀದ್ದೇನೆ. ನನ್ನ ಮೇಲೆ ಮತ್ತು ನನ್ನ e-ಸುದ್ದಿ ಪತ್ರಿಕೆಯ ಮೇಲಿನ ಅಭಿಮಾನದಿಂದ ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹಿರಾತುಗಳ ಮೇಲೆ ಕ್ಲಿಕ್ಕಿಸಿದಾಗ ಮಾತ್ರ ನನಗೆ ಸಹಾಯವಾಗುತ್ತದೆ. ದಯವಿಟ್ಟು ಸುದ್ದಿ ಓದುವಾಗ ಜಾಹಿರಾತುಗಳ ಮೇಲೆ ಕ್ಲಿಕ್ ಮಾಡಿ. ಸಹಕರಿಸಿರಿ ಎಂದು ವಿನಂತಿಸಿಕೊಳ್ಳುವೆ.
ಧ್ವನಿಯನ್ನು ಕೇಳಿ
ಇಂದಿನಿಂದ e-ಸುದ್ದಿ ಅಪ್ ಗ್ರೇಡ್ ಆಗುತ್ತಿದೆ. ನೀವು ನಿಮ್ಮ ನಿಮ್ಮ ಕೆಲಸದ ಒತ್ತಡದಲ್ಲಿ ಮಗ್ನರಾಗಿರುತ್ತೀರಿ.ಅನೇಕ ಸಲ
e-ಸುದ್ದಿ ಯ ಬರಹಗಳನ್ನು ಓದಲು ಆಗದೆ ಸುಮ್ಮನೆ ನೋಡಿರಲು ಬಹುದು.
ಇಂದಿನಿಂದ e-ಸುದ್ದಿ ಯಲ್ಲಿ ಪ್ರಕಟವಾಗುವ ಎಲ್ಲಾ ಬರಹಗಳು ಧ್ವನಿ ಮುದ್ರಿತ ರೂಪದಲ್ಲಿ ಕೇಳಿಸಿಕೊಳ್ಳಬಹುದು. ಪ್ರಕಟಿತ ಬರಹದ ಮೇಲೆ –Listen to this article ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿದರೆ ಅಟೋಮ್ಯಾಟಿಕ್ ಆಗಿ ಪ್ರಕಟಿತ ಬರಹ ಧ್ವನಿ ಮುದ್ರಿತವಾಗಿ ಓದುತ್ತದೆ. ಒಪನ್ ಸ್ಪೀಕರ್ ತೆರೆದುಕೊಂಡು ಕೇಳಿಸಿ ಕೊಳ್ಳಬಹುದು.
ಅಂದಹಾಗೆ ಇಂದು ನನ್ನ ವಯಕ್ತಿಕ ಬದುಕಿನಲ್ಲಿ ಸದಾ ನೆನಪಿಸಿಕೊಳ್ಳುವ ದಿನ. ನನ್ನ ಮದುವೆ ವಾರ್ಷಿಕೋತ್ಸವ. ಬಾಳ ಸಂಗಾತಿ ಲತಾ (ವೀಣಾ) ಜತೆಯಾದ ಸಂಭ್ರಮ. ಈ ಸಂಭ್ರಮಕ್ಕೆ ೧೮ ರ ತರುಣಾವಸ್ಥೆ. ನಿಮ್ಮ ಹಾರೈಕೆ ಇದ್ದೇ ಇರುತ್ತೆ ಎನ್ನುವ ನಂಬಿಕೆ.
ನಮ್ಮ ನಿಮ್ಮೆಲ್ಲರ e-ಸುದ್ದಿ ಯನ್ನು ಬೆಳಿಸಿರಿ ಎಂದು ಮತ್ತೊಮ್ಮೆ ವಿನಂತಿಸಿಕೊಳ್ಳುವೆ
ಇಂತಿ ನಿಮ್ಮ
ವೀರೇಶ ಸೌದ್ರಿ ಮಸ್ಕಿ
9448805067
Happy wedding anniversary for both tt
Happy wedding anniversary sir and mam. Also best of luck to e-Suddi