ಮಾತನಾಡಬೇಕೆಂದಿರುವೆ

ಮಾತನಾಡಬೇಕೆಂದಿರುವೆ

ಮೌನವ ಮುರಿದು
ಹೃದಯಂಗಳದ
ಭಾವನೆಗಳನು
ಹೊರಹಾಕ
ಬೇಕೆಂದಿರುವೆ
ಸುಖ ದುಖಃಗಳ ಬುತ್ತಿ ಹಂಚಿಕೊಳ್ಳಬೇಕೆಂದಿರುವೆ
ಆಸೆಗಳು
ಬತ್ತಿಹೋಗುವ ಮುನ್ನ
ಪ್ರೀತಿ ಪ್ರೇಮ
ಆರುವ ಮುನ್ನ
ಭಾವನೆಗಳು
ಬತ್ತುವ ಮುನ್ನ
ಹೊಂಗಿರಣ
ಸೂಸುವ ಹೊತ್ತಿನಲಿ
ಅದುಮಿಟ್ಟ
ಆಶೆಗಳನು ಬಿಚ್ಚಿಡಬೇಕೆಂದಿರುವೆ
ಚಿಗುರೊಡೆದ ಕನಸುಗಳ
ಹರಿಬಿಡದೇ
ಮುದದಿಂದ ಪಿಸುಗುಟ್ಟಿ
ಮಾತನಾಡಬೇಕೆಂದಿರುವೆ
ಒಮ್ಮೆ ನನ್ನ
ದ್ವನಿಗೆ ನೀನು
ಕಿವಿಯಾಗು

ಡಾ. ದಾನಮ್ಮ ಝಳಕಿ ಬೆಳಗಾವಿ

Don`t copy text!