ಮಣ್ಣು ಎತ್ತು
ಇಲ್ಲಿ ಮಣ್ಣೆತ್ತು ಎಂದರೆ ಹೊಲದಲ್ಲಿ ರಂಟೆಕುಂಟೆ ಹೊಡೆದು ಅಲ್ಲಿನ ಮಣ್ಣನ್ನು ತಿರುವುಮುರುವು ಮಾಡಿ ಮೇಲಕೆತ್ತಿ ಹೊಲ ಹರಗುವುದು ಎಂದರ್ಥ.
ಇದನ್ನು ನಮ್ಮ ರೈತರು ಬೀಜ ಬಿತ್ತುವ ಮುನ್ನ ಮತ್ತು ಸಸಿಗಳನ್ನ ನೆಡುವ ಮುನ್ನ ಈ ರೀತಿಯಾಗಿ ಮಾಡುತ್ತಾರೆ. ಈ ಒಂದು ವೈಜ್ಞಾನಿಕತೆಯನ್ನ ಸರಿಯಾಗಿ ತಿಳಿದುಕೊಳ್ಳದೆ ನಮ್ಮ ಜನ ಮಣ್ಣಿನಿಂದ ಮಾಡಿದ ಎತ್ತುಗಳನ್ನು ತಂದು ಮೌಢ್ಯತನದಿಂದ ಪೂಜಿಸುತ್ತ ಬಂದಿದ್ದಾರೆ.
ಇದೊಂದು ವೈಧಿಕರ ಹುನ್ನಾರವಾಗಿದೆ ಹಾಗಾಗಿ ಈ ರೀತಿ ಪೂಜೆ ಮಾಡುವ ಬದಲಾಗಿ ಎಷ್ಟೊ ಜನ ನಮ್ಮ ಬಡರೈತರು ತಮ್ಮ ಎತ್ತುಗಳಿಗೆ ದನಕರುಗಳಿಗೆ ಮೇವು ಸಿಗದೆ ಚಡಪಡಿಸುತ್ತಿದ್ದಾರೆ. ಈ ಸಮಯದಲ್ಲಿ ನಾವು ಆ ಬಡ ರೈತರಿಗೆ ಮೇವು ಅಥವಾ ತೌಡೊ ಕೊಡಿಸಿ ದನಕರುಗಳ ಹಸಿವು ನಿಗಿಸಿದರೆ ಮಾತ್ರ ನಾವು ಮಾಡುವ ಈ ಮಣ್ಣೆತ್ತಿನ ಅಮವಾಸ್ಯೆ ನಿಜಕ್ಕೂ ಸಾರ್ಥಕವಾಗುತ್ತದೆಯೆಂಬುದು ನನ್ನ ವಯಕ್ತಿಕ ಅಭಿಪ್ರಾಯವಾಗಿದೆ.
ಈ ರೀತಿಯಾದರು ನಿಜಾಚರಣೆ ಮಾಡಿ ಸಮಾಜದಲ್ಲಿ ಬದಲಾವಣೆ ತನ್ನಿ ಶರಣ ಬಂಧುಗಳೇ ಇದು ನಮ್ಮ ಜಂಗಮಸೇವೆಯಾಗುತ್ತದೆ ( ಸಮಾಜಸೇವೆ ).
ಶರಣು ಶರಣಾರ್ಥಿ.
ಶ್ರೀಮತಿ ರುದ್ರಮ್ಮ ಅಮರೇಶ ಹಾಸಿನಾಳ.