ಮಣ್ಣೆತ್ತಿನ ಅಮವಾಸ್ಯೆ

ಮಣ್ಣೆತ್ತಿನ ಅಮವಾಸ್ಯೆ

ಕಾರಹುಣ್ಣಿಮೆ ನಂತರ ಬರುವ ರೈತರ ಹಳ್ಳಿಯ ಸೊಬಗಿನ ಹಬ್ಬ ಮಣ್ಣೆತ್ತಿನ ಅಮವಾಸ್ಯೆ. ಈ ಹಬ್ಬದ ಸಮಯಕ್ಕೆ ರೈತರು ಬೆಳೆದ ಬೆಳೆ ಮೊಣಕಾಲಿನೆತ್ತರಕೆ ಬೆಳೆದು ನಿಂತಿರುತ್ತದೆ,ಎಡೆ,ಗಡ್ಡೆಯನ್ನು ಹೊಡೆದು ಹೊಲವನ್ನು ಕಳೆ ತೆಗೆದು ಸ್ವಚ್ಛಗೊಳಿಸಿ ಸ್ವಲ್ಪ ವಿಶ್ರಾಂತಿಯನ್ನು ಕಳೆಯುವ ಸಂದರ್ಭದಲ್ಲಿ ಬರುವ ಮಣ್ಣಿನಿಂದ ಎತ್ತನ್ನು ತಯಾರಿಸಿ ಪೂಜಿಸುವ ಸಡಗರದ ಹಬ್ಬವೇ ಮಣ್ಣೆತ್ತಿನ ಅಮವಾಸ್ಯೆ.

ಹಬ್ಬದ ಹಿನ್ನೆಲೆ ಏನೆಂದರೆ ಕಾಯಕ ಯೋಗಿ ರೈತನ ಜೊತೆ ಯಾವಾಗಲೂ ಹೆಗಲು ನೀಡುವ ಬಸವ(ಎತ್ತು)ದುಡಿದು ದುಡಿದು ಬಳಲಿದ ದಿನಗಳಲ್ಲಿ ಈ ಒಂದು ದಿನವಾದರೂ ಹಬ್ಬದ ನೆಪದಲ್ಲಿ ಮೂಕ ಪ್ರಾಣಿಗಳಾದ ಅವುಗಳಿಗೆ ಒಂದೆರಡು ದಿನಗಳ ಕಾಲ ವಿಶ್ರಾಂತಿ ದೊರಕಬಹುದೆಂಬ ಊಹೆಯಿಂದ ನಮ್ಮ ಹಿರಿಯ ಜನಪದರು ಈ ಹಬ್ಬಕ್ಕೆಮಹತ್ವ ನೀಡಿದ್ದಾರೆ.

ಮತ್ತೊಂದು ಮಹತ್ವದ ಮಾಹಿತಿ ಏನೆಂದರೆ ಮಣ್ಣಿನಿಂದ ಬಂದ ಈ ದೇಹ ಮಣ್ಣಿಗೇ ಸಮರ್ಪಣೆ ಎಂಬುದರ ಸಂಕೇತವಾಗಿದೆ ಈ ಹಬ್ಬ.

ಆದರೆ ಇಂದುಮಾನವ ನಿರ್ಮಿತ ಅನಿಶ್ಚಿತ ಮಳೆಗಾಲದಲ್ಲಿ ಎಲ್ಲಾ ತಿರುವು ಮುರುವಾಗಿದ್ದು ಹಬ್ಬಗಳು ತಮ್ಮ ಮೊದಲಿನ ಮಹತ್ವ ಕಳೆದುಕೊಳ್ಳುತ್ತಿವೆ.


ಸಾಹಿತ್ಯಪ್ರಿಯ ಶಂಕರ

Don`t copy text!