M Tech…ನಲ್ಲಿ ಲಕ್ಷ್ಮಿಗೆ ಗೋಲ್ಡ್ ಮೆಡಲ್ ವಿಜೇತೆ
e-ಸುದ್ದಿ, ಇಲಕಲ್ಲ
ಇಲಕಲ್ಲ ನಗರದ ಸಾಮಾನ್ಯ ಕುಟುಂಬದ ವಿದ್ಯಾರ್ಥಿನಿ ಎಂ.ಟೆಕ್ ನಲ್ಲಿ ಬಂಗಾರದ ಪದಕ ಪಡೆದು ಉತ್ತೀರ್ಣರಾಗಿರುವದು ಇಲಕಲ್ ನಗರದ ಜನತೆ ಹೆಮ್ಮೆ ಪಡುವಂತಾಗಿದೆ.
ಈಕೆಯ ಹೆಸರು ಲಕ್ಷ್ಮಿ ಈರಣ್ಣ ಚುಂಚಾ.
ಲಕ್ಷ್ಮಿ ಇಲಕಲ್ ನಗರದ ಖ್ಯಾತ ಪಾಕಪ್ರವೀಣ ಈರಣ್ಣ ಚುಂಚಾ ಅವರ ಮಗಳು
ಯಾವುದೇ ಮದುವೆ ಇರಲಿ, ಮುಂಜಿವಿ ಇರಲಿ, ನಗರದಲ್ಲಿ ನಡೆಯುವ ಸಣ್ಣ ಕಾರ್ಯಕ್ರಮಗಳಿಂದ ಹಿಡಿದು ದೊಡ್ಡ ಕಾರ್ಯಕ್ರಮಗಳಲ್ಲಿ ಈರಣ್ಣ ಚುಂಚಾ ಕೈ ಸವಿ ಸವಿಯ ಪಾಕ ಮಾಡಲು ಸಿದ್ಧ ಹಸ್ತರು.
ಅಷ್ಟೊಂದು ಪ್ರಖ್ಯಾತರು ನಮ್ಮ ಇಳಕಲ್ಲ ಮಂದಿಯ ಅಚ್ಚುಮೆಚ್ಚಿನ ಬಾಣಸಿಗ ಚುಂಚಾ ಈರಣ್ಣ.
ಈರಣ್ಣ ಮಾಡಿದ ಅಡುಗೆ ರುಚಿಯನ್ನು ಸವಿಯದವರೇ ಇಲ್ಲ
ಅದರ ಸವಿಯನ್ನು ಸವಿದವನೇ ಬಲ್ಲ. ಲಕ್ಷ್ಮಿ M Tech..ನಲ್ಲಿ ಸ್ವರ್ಣಪದಕ ಪಡೆದಿರುವದರ ಹಿಂದೆ ಅವಳ ಅಪ್ಪ ಈರಣ್ಣ ಪರಿಶ್ರಮ, ತ್ಯಾಗ ಅಗಾಧವಾಗಿದೆ.
ಬಡತನದಲ್ಲಿಯೇ ಬಂದ ನೇಕಾರ ಕುಟುಂಬದ ಕರುಳಿನ ಕುಡಿ ಲಕ್ಷ್ಮಿಯ ಈ ಸಾಧನೆ ಇಳಕಲ್ಲ ಮಂದಿಗೆ ಸಂತಸ ತಂದಿದೆ.