ಮರಳಿ ಗ್ರಾಮದ ರಸ್ತೆ ನಿರ್ಮಿಸಿಕೊಂಡ ರೈತರು
e-ಸುದ್ದಿ ಲಿಂಗಸುಗೂರು
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣ ಸಮೀಪದ ಹೂನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮರಳಿ ಗ್ರಾಮದ ರೈತರ ಹೊಲಗಳಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟು ಕೆಸರು ಗದ್ದೆಯಂತಾಗಿದ್ದು ರೈತರು ತಮ್ಮ ಜಮೀನುಗಳಿಗೆ ಹೋಗಲು ಹರಸಹಾಸ ಪಡುವಂತಾಗಿತ್ತು,
ಗ್ರಾಮದ ರೈತರು ಜನಪ್ರತಿನಿಧಿಗಳಿಗೆ ಮತ್ತು ಹೂನೂರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಈ ರಸ್ತೆ ದುರಸ್ಥಿ ಮಾಡುವಂತೆ ಅನೇಕ ಬಾರಿ ಮನವಿ ಮಾಡಿದರೂ ಯಾವದೇ ಪ್ರಯೋಜವಾಗಿಲ್ಲ.
ಈ ಹಿನ್ನಲೆಯಲ್ಲಿ ಮರಳಿ ಗ್ರಾಮದ ರೈತರು ಪ್ರತಿ ಮನೆ ಮನೆಗೆ ಹೋಗಿ ಹಣ ಹೊಂದಿಸಿಕೊಂಡು ಶ್ರಮದಾನದ ಮೂಲಕ ರಸ್ತೆ ದುರಸ್ಥಿ ಮಾಡಿಕೊಂಡಿದ್ದಾರೆ,
ಮರಳಿ ಗ್ರಾಮದ ರೈತರಾದ ಕರಿಯಪ್ಪಗೌಡ, ಹನುಮಂತ, ಶರಣಬಸವ, ಬಸವರಾಜ, ಮುತ್ತಣ್ಣ, ಬಸವರಾಜ, ಬಸನಗೌಡ ಮಾಲಿ ಪಾಟೀಲ್, ಸಿದ್ದಪ್ಪ ಅಮರೇಶ, ದೊಡ್ಡಬಸಪ್ಪ, ಹಾಗೂ ಗ್ರಾಮಸ್ಥರು ಇದ್ದರು.