ಕೃಷ್ಣಾ ನದಿ ಪ್ರವಾಹ ಶೀಲಹಳ್ಳಿ ಸೇತುವೆ ಮುಳುಗಡೆ
e-ಸುದ್ದಿ, ಲಿಂಗಸುಗೂರು
ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ 2 ಲಕ್ಷ ನೀರು ಹರಿ ಬಿಡುತ್ತಿದ್ದು, ನಡುಗಡ್ಡೆಯಲ್ಲಿ ವಾಸಿಸುತ್ತಿರುವ ಜನತೆ ಆತಂಕ ಎದುರಿಸುತ್ತಿದ್ದಾರೆ.
ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಜನ ಸಂಪರ್ಕ ಕಡಿತಗೊಂಡಿದೆ. ಹಂಚಿನಾಳ, ಯಳಗುಂದಿ, ಕಡದರಗಡ್ಡಿ, ಯರಗೋಡಿ ನಡುಗಡ್ಡೆ ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಬರಲು ಪರದಾಡುತ್ತಿದ್ದಾರೆ.
ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ 2 ಲಕ್ಷ ನೀರು ಬಿಡಲಾಗಿದೆ. ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಹಂಚಿನಾಳ, ಯಳಗುಂದಿ ಕಡದರಗಡ್ಡಿ, ಯರಗೋಡಿ ನಡುಗಡ್ಡೆ ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಬರಲು ಪರದಾಡುತ್ತಿದ್ದಾರೆ.
ಕರಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ಪ್ರದೇಶದ ಭಾಗಶಃ ಜನತೆ ನಡುಗಡ್ಡೆಯಲ್ಲಿ ಇದ್ದು, ಪ್ರವಾಹ ಏಕಾಏಕಿ ಏರಿಕೆ, ಇಳಿಯುವಿಕೆಯಿಂದ ಭಯಗೊಂಡಿದ್ದಾರೆ ಎಂದು ಅವರೊಂದಿಗೆ ಸಂಪರ್ಕ ಹೊಂದಿರುವ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ