ಅಭಿನಂದನ್ ಸಂಸ್ಥೆಯಿಂದ ವಿಧ್ಯಾರ್ಥಿಗಳಿಗೆ ಸನ್ಮಾನ.
e-ಸುದ್ದಿ, ಮಸ್ಕಿ
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದಲ್ಲಿ ಮಸ್ಕಿ ತಾಲ್ಲೂಕಿಗೆ ಕೀರ್ತಿಯನ್ನು ತಂದುಕೊಟ್ಟ ವಿದ್ಯಾರ್ಥಿಗಳಿಗೆ ಅಭಿನಂದನ್ ಸಂಸ್ಥೆಯ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ನಗರದ ಗಚ್ಚಿನ ಮಠದ ಆವರಣದಲ್ಲಿ ಆಯೋಜಿಸಲಾಯಿತು.
ಮಸ್ಕಿ ತಾಲ್ಲೂಕಿನಲ್ಲಿ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜ್ಯೋತಿ ಚಂದ್ರಮೌಳೇಶ್ವರ ಅವರು 600 ಕ್ಕೆ 600 ಅಂಕಗಳನ್ನು ಗಳಿಸಿರುವುದು ಮಸ್ಕಿ ತಾಲ್ಲೂಕಿಗೆ ಒಂದು ಹೆಮ್ಮೆಯ ಸಂಗತಿಯಾಗಿದೆ.
ಭ್ರಮರಾಂಭ ಪತ್ತಿನ ಸೌಹಾರ್ದ ಸಹಕಾರಿಯ ಪ್ರಧಾನ ವ್ಯವಸ್ಥಾಪಕ ವೀರೇಶ್ ಹಿರೇಮಠ ಅವರು ವಿದ್ಯಾರ್ಥಿಗಳಲ್ಲಿ ನವ ಚೈತನ್ಯ ತುಂಬಲು ಅಭಿನಂದನಾ ಕಾರ್ಯಕ್ರಮ ಕೈಗೊಂಡಿರುವದು ಅಭಿನಂದನ್ ಸಂಸ್ಥೆ ಉತ್ತಮ ಕಾರ್ಯವಾಗಿದೆ ಎಂದರು.
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅನಿತಾ ನಾಗರಾಜ, ಶಿವಗಂಗಾ ಮುದ್ದಾಪೂರ, ಸಂತೋಷ ಕುಮಾರ್ ವೀರಣ್ಣ, ಐಶ್ವರ್ಯ ರಂಗರಾವ್, ಪ್ರಕಾಶ್ ಯಂಕಪ್ಪ, ಸೌಭಾಗ್ಯ ನಾಗರಾಜ, ಅಯ್ಯಪ್ಪ, ರಂಜಿತಾ ಬಳಗಾನೂರ ಸನ್ಮಾನಿಸಲಾಯಿತು.
ಮಸ್ಕಿಯ ಹಿರಿಯರಾದ ಶಿವಪ್ರಸಾದ್ ಕ್ಯಾತನಟ್ಟಿ, ಪ್ರಾಚಾರ್ಯರಾದ ರಂಗಯ್ಯ ಶೆಟ್ಟಿ ರಾಮಣ್ಣ ನಾಯಕ್, ವಿನಯ್ ಹಿರೇಮಠ, ವಿಜಯ್ ಗಿಡದ್ ಹಾಗೂ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಸಂಸ್ಥೆಯ ಸದಸ್ಯರಾದ ಶೃತಿ ಹಂಪರಗುಂದಿ, ಮಲ್ಲಿಕಾರ್ಜುನ ಬಡಿಗೇರ, ಅಮೀತ್ ಕುಮಾರ್ ಪುಟ್ಟಿ, ಕಾರ್ತಿಕ್ ಜೋಗಿನ್, ಹನುಮಂತ, ವಿಜಯ್ ಕುಮಾರ್, ಕಿಶೋರ್, ಜಯಶ್ರೀ ಮತ್ತು ಇತರರು ಉಪಸ್ಥಿತರಿದ್ದರು.