e-ಸುದ್ದಿ, ಮಸ್ಕಿ
ಭಾರತೀಯ ಪರಂಪರೆಯಲ್ಲಿ ಗುರುವಿಗೆ ದೊಡ್ದ ಸ್ಥಾನವಿದ್ದು, ಗುರುಗಳ ಮಾರ್ಗದರ್ಶನದಿಂದಾಗಿ ಭಾರತ ಜಗತ್ತಿಗೆಲ್ಲ ಶ್ರೇಷ್ಠ ದೇಶವಾಗಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಶನಿವಾರ ಗುರುಪೂರ್ಣೀಮೆ ಅಂಗವಾಗಿ ಬಿಜೆಪಿಯಿಂದ ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರಿಗೆ ಸತ್ಕರಿಸಿ ಗುರುವಂದನೆ ಸಲ್ಲಿಸಿದರು.
ಪ್ರತಿಯೊಬ್ಬರ ಬದುಕಿನಲ್ಲಿ ಸ್ಪಷ್ಟವಾದ ಜೀವನದ ಗುರಿ ಇರಬೇಕು. ಗುರಿ ತಲುಪಲು ಗುರುಗಳ ಮಾರ್ಗದರ್ಶನ ಇರಬೇಕು. ಗುರು ತೋರಿದ ದಾರಿಯಲ್ಲಿ ಸಾಗಿದರೆ ಭವ ಬಂಧನಗಳಿಂದ ಮುಕ್ತಿ ಹೊಂದಬಹುದು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ತಿಳಿಸಿದರು.
ಬಿಜೆಪಿಯ ಹಿರಿಯ ಮುಖಂಡರಾದ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಅಂದಾನಪ್ಪ ಗುಂಡಳ್ಳಿ, ಶಿವಶಂಕ್ರಪ್ಪ ಹಳ್ಳಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿಗೌಡ ಪಾಟೀಲ, ಡಾ.ಬಿ.ಎಚ್.ದಿವಟರ್, ದೊಡ್ಡಪ್ಪ ಕಡಬೂರು, ಬಸಪ್ಪ ಬ್ಯಾಳಿ, ಮಲ್ಲಿಕಾರ್ಜುನ ಕಂದಗಲ್, ನಾಗರಾಜ ಯಂಬಲದ, ಶರಣಯ್ಯ ಸೊಪ್ಪಿಮಠ, ಜಿ.ವೆಂಕಟೇಶ ನಾಯಕ, ಯಮನಪ್ಪ ಬೊವಿ, ಮೌನೇಶ ನಾಯಕ, ಮಲ್ಲಿಕಾರ್ಜುನ ಅಚ್ಛಾ, ಶರಣಬಸವ ಹರವಿ, ಮಂಜುನಾಥ ಗುಗ್ಗಲ್ ಸತ್ಯನಾರಯಣ ಸಿಂಗ್ ಠಾಕೂಟ ಹಾಗೂ ಇತರರು ಭಾಗವಹಿಸಿದ್ದರು.