ಮಸ್ಕಿ: ತಾಲೂಕಿನ ಅಡವಿಭಾವಿ ತಾಂಡದಲ್ಲಿ ನೂತನ ದೇವಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ಮಸ್ಕಿ ಭ್ರಮರಾಂಬ ದೇವಿ ಗುಡಿಯಿಂದ ಮೆರವಣಿಗೆ ನಡೆಯಿತು.
ಮೆರವಣಿಗೆಯನ್ನು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಚಾಲನೆ ನೀಡಿದರು.
ಕಳಸ ಕುಂಭಗಳೊಂದಿಗೆ ಬಂಜಾರ ಸಮಾಜದಿಂದ ದೇವಿಯ ಮೂರ್ತಿ ಮೆರವಣಿಗೆ ನಡೆಯಿತು. ಆಂದ್ರದ ಕಡಪಾದಿಂದ ತಂದಿರುವ ದುರ್ಗಾದೇವಿ ಮೂರ್ತಿಯ ಮೆರವಣಿಗೆಯನ್ನು ಇಲ್ಲಿನ ಭ್ರಮರಾಂಭ ದೇವಸ್ಥಾನದಿಂದ ಅರಂಭಿಸಿ ಪ್ರಮುಖ ಬೀದಿಗಳ ಮೂಲಕ ತಾಂಡದ ದೇವಸ್ಥಾನಕ್ಕೆ ತೆಗೆದುಕೊಂಡು ಹೊದರು.
ಡೊಳ್ಳು ಕುಣಿತ ಗಮನ ಸೆಳೆದವು. ಸಮಾಜದ ಮುಖಂಡ ಪಾಂಡುರಂಗ ಪಮ್ಮಾರ, ಅಮರೇಶ ಅಂತರಗಂಗಿ, ಅಮರೇಶ ರಾಠೋಡ್, ಆರ್.ಟಿ ನಾಯಕ, ನಾಗರಾಜ, ಪೂಲಪ್ಪ ರಾಠೋಡ್, ಅಮರೇಶ ಪವಾರ, ವಿಠಲ ಕೆಳೂತ್, ಕುಪ್ಪಣ್ಣ, ಕೃಷ್ಣಮೂರ್ತಿ ಜಾಧವ, ಉಮಾಪತಿ ನಾಯ್ಕ, ಶಿವಾನಂದ ರಾಠೋಡ್, ಚಂದ್ರು ಕಲಕಬೆಂಚಿ ಸೇರಿದಂತೆ ಸಮಾಜದ ಮುಖಂಡರಿದ್ದರು. ಪಿಎಸ್ ಐ ಸಣ್ಣ ಈರೇಶ ಇದ್ದರು.