ಬಡತನ ಓದಿಗೆ ಅಡ್ಡಿಯಾಗಬಾರದು.
e-ಸುದ್ದಿ, ಮುದ್ದೇಬಿಹಾಳ
ಇವತ್ತು ಬಹುತೇಕ ವಿದ್ಯಾರ್ಥಿಗಳು ಯಾಕೆ ಸರಿಯಾಗಿ ಓದುತ್ತಿಲ್ಲ ಎಂದು ಪ್ರಶ್ನಿಸಿದರೆ ನೂರೆಂಟು ಕುಂಟು ನೆಪ ಹೇಳುತ್ತಾರೆ. ಆದರೆ ಇದಕ್ಕೆ ಹೊರತಾದ ವಿದ್ಯಾರ್ಥಿನಿ ಇತರರಿಗೆ ಮಾದರಿಯಾಗಿದ್ದಾಳೆ.
ಮುದ್ದೇಬಿಹಾಳ ಗ್ರಾಮದ ಕಾವ್ಯ ಅರಮನಿ ಬೀದಿ ಬದಿಯಲ್ಲಿ ತೆಂಗಿನ ಕಾಯಿ, ಹಾರ ಮಾರಾಟ ಮಾಡುತ್ತ ಬೀದಿ ಬದಿಯಲ್ಲಿ ಕುಳಿತು ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡುತ್ತಿದ್ದಾಳೆ.
ಹೊಟ್ಟೆಯ ಹಸಿವಿಗೆ ವ್ಯಾಪಾರ ಓದಿನ ಹಸಿವಿಗೆ ಶಿಕ್ಷಣ ಪಡೆಯುವ ಹರಸಾಹಸದಲ್ಲಿರುವ ಕಾವ್ಯ ಅರಮನಿ ಆದರ್ಶ ವಿದ್ಯಾರ್ಥಿನಿಯಾಗಿದ್ದಾಳೆ.
ಕಾವ್ಯಳ ಓದಿಗೆ ಆಸರೆಯಾಗುವ ಕೈಗಳು ಮುಂದೆ ಬಂದರೆ ಸ್ವಸ್ಥ ಸಮಾಜ ಸದಾ ಜಾಗೃತವಾಗಿರುತ್ತದೆ.