ಶ್ರೀಮತಿ ಸರೋಜಾ ಶ್ರೀಕಾಂತ ಅಮಾತಿ ಅವರು “ಗುರುಕುಲ ಕಲಾ ಕೌಸ್ತುಭ” ಪ್ರಶಸ್ತಿಗೆ ಆಯ್ಕೆ
e- ಸುದ್ದಿ, ತುಮಕೂರು
ಮುಂಬಯಿಯ ಕಲ್ಯಾಣ್ ನಿವಾಸಿ ಶ್ರೀಮತಿ ಸರೋಜಾ ಶ್ರೀಕಾಂತ ಅಮಾತಿ ಅವರು “ಗುರುಕುಲ ಕಲಾ ಕೌಸ್ತುಭ” ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ತುಮಕೂರಿನಲ್ಲಿ ನಡೆಯುವ “ಗುರುಕುಲ ಕಲಾ ಪ್ರತಿಷ್ಠಾನದ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ” ಅವರಿಗೆ ಈ ಪ್ರಶಸ್ತಿಯನ್ನು ಅಗಷ್ಟ ಕೊನೆಯ ವಾರದಲ್ಲಿ ಪ್ರಧಾನಿಸಿ ಸನ್ಮಾನಿಸಲಿದ್ದಾರೆ.
ಸರೋಜಾ ಅಮಾತಿ ಅವರ ಸೃಜನಶೀಲತೆ ಮತ್ತು ಕಲೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಶ್ರೀಯುತ ಹುಲಿಯೂರುದುರ್ಗ ಲಕ್ಷ್ಮೀ ನಾರಾಯಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
19 ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಪ್ರತಿಭಾನ್ವಿತರಿಗೆ ಗುರುಕುಲ ಕಲಾ ಪ್ರಶಸ್ತಿಯನ್ನು ನೀಡಲಿದ್ದಾರೆ. ಬರವಣಿಗೆ ರಂಗೋಲಿ,ಹೊಲಿಗೆ,ಗಾಯನ ಇವು ಇವರ ಪ್ರಮುಖ ಹವ್ಯಾಸಗಳು.ಮುಂಬಯಿ ಮತ್ತು ಕರ್ನಾಟಕದ ಅನೇಕ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ಜಯದೇವಿ ತಾಯಿ ಲಿಗಾಡೆ ರಾಷ್ಟ್ರಮಟ್ಟದ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಪ್ರಶಸ್ತಿ,ರಾಜ್ಯ ಮಟ್ಟದ ದ.ರಾ.ಬೇಂದ್ರೆ ಕಾವ್ಯ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ.
ವಿಶೇಷವಾಗಿ e-ಸುದ್ದಿ ಬಳಗದ ಬರಹಗಾರರಲ್ಲಿ ಇವರು ಒಬ್ಬರು. e-ಸುದ್ದಿ ತಂಡಕ್ಕೆ ಅಭಿಮಾನದ ಸಂಗತಿ.