ಕಣ್ಣು–ಮನಸ್ಸು

ಕಣ್ಣು–ಮನಸ್ಸು

ಸಕಲ ಸಂಚಲನಾ ಜೀವರಾಶಿಗಳಲ್ಲಿನ ಜ್ಞಾನೇಂದ್ರಿಗಳಲ್ಲಿ ಅತೀ ಪ್ರಮುಖವಾದ ಅಂಶಗಳೆಂದರೆ,

*ಕಣ್ಣು–ಮತ್ತು–ಮನಸ್ಸು*

ಒಳಗೆ ಕುಟಿಲ, ಹೊರಗೆ ವಿನಯವಾಗಿ
ಭಕ್ತರೆನಿಸಿಕೊಂಬವರ ಬಲ್ಲನೊಲ್ಲನಯ್ಯ ಲಿಂಗವು
ಅವರು ಸತ್ ಪಥಕ್ಕೆ ಸಲ್ಲರು ಸಲ್ಲರಯ್ಯಾ!
ಒಳಹೊರಗೊಂದಾದವರಿಗೆ ಅಳಿಯಾಸೆದೋರಿ ಬೀಸಾಡುವನವರ ಜಗದೀಶ ಕೂಡಲ ಸಂಗಮದೇವ

ನಮ್ಮ ಹೊರ ರೂಪ ಬೇರೆ ಒಳ ರೂಪವಿದೆ.ಇದಕ್ಕೆ ಪ್ರಮುಖ ಕಾರಣ ಕಣ್ಣು.ನಾವು ಪ್ರತಿದಿನ ನೂರಾರು ಘಟನೆಗಳನ್ನು ನೋಡುತ್ತೇವೆ.ಆದರೆ ಅದರಲ್ಲಿ ಕೆಲವನ್ನು ದಾಖಲಿಸಿಕೊಂಡು ಉಳಿದವುಗಳನ್ನು ಮರೆತು ಬಿಡುತ್ತೇವೆ.ಕಾರಣ ಯಾವ ಅಂಶಗಳು ನನ್ನ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆಯೋ ಅವುಗಳನ್ನು ಮಾತ್ರ ನೆನಪಿಟ್ಟುಕೊಳ್ಳುತ್ತೇವೆ.ಅದರಲ್ಲೂ ಅಂದಿನ ಸಿಹಿ–ಕಹಿ ಘಟನೆ ಮರೆಯುವುದಿಲ್ಲ.ಕಣ್ಣು ಮನಸ್ಸಿಗೆ ಪ್ರಚೋದಿಸುತ್ತದೆ ಮನಸ್ಸು ದೈಹಿಕ, ಮಾನಸಿಕ, ಸುಖಕ್ಕಾಗಿ ಹೋರಾಡಲು ಸಿದ್ಧವಾಗುತ್ತದೆ.ಆದರೆ ಸಮಾಜ ಒಪ್ಪದ ಕೆಲವು ಅಂಶಗಳನ್ನು ನಿಯಂತ್ರಿಸಲು ಮನಸ್ಸು ಒದ್ದಾಡುತ್ತದೆ.ಆಗ ಮನಸ್ಸು ಹೊರ ಹಾಗೂ ಒಳಗೆ ಮುಖವಾಡ ಧರಿಸಿಕೊಂಡು ಜೀವನ ಸಾಗಿಸಲೆಂದು ಬಯಸುತ್ತದೆ.
ಕಂಗಳ ಮುಂದಣ ಕತ್ತಲೆಯಿದೇನೋ? ಒಳಗಣ ರಣರಂಗ,ಹೊರಗಣ ಶೃಂಗಾರ,ಬಳಿಕೆಗೆ ಬಂದ ಬಟ್ಟೆಯಿದೇನೋ ಗುಹೇಶ್ವರಾ?

ಅಂತರಂಗ ಬಹಿರಂಗ ಒಂದೇ ಆಗುವುದು ಬಹಳ ವಿರಳ. ಸರ್ವಸಂಗ ಪರಿತ್ಯಾಗಿಗಳಾಗಿ ಸಮಾಜಕ್ಕೆ ಮಹತ್ತರವಾದ ಸಂದೇಶವನ್ನು ಮಾಡಬೇಕಾದ ಹಿರಿಯರು, ಪೂಜ್ಯರು,ನಾಯಕರು, ಜನಸಾಮಾನ್ಯರನ್ನು ಹಾದಿ ತಪ್ಪಿಸುತ್ತಿದ್ದಾರೆ. ವೇಷಕ್ಕೆ ತಕ್ಕ ಭಾಷೆಯನ್ನು ಬದಲಾಯಿಸುತ್ತಾರೆ ಸ್ವಾರ್ಥಕ್ಕಾಗಿ ಸಮಾಜ ವನ್ನು ತಮ್ಮ ಇಷ್ಟದಂತೆ ಬಳಸಿಕೊಳ್ಳುತ್ತಿದ್ದಾರೆ. ಅಮಾಯಕ ಜನ ಇಲ್ಲಿ ಮೋಸ ಹೋಗುತ್ತಿದ್ದಾರೆ ಇವರು ಜನಸಾಮಾನ್ಯರನ್ನು ನೋಡುವ ದೃಷ್ಟಿಕೋನವೇ ಭಿನ್ನವಾಗಿರುತ್ತದೆ. ಇಂತಹ ಆಷಾಡಭೂತಿಗಳನ್ನು ಕುರಿತು ಉರಿಲಿಂಗಪೆದ್ದಿಗಳ ವಚನ ಬಹಳ ಅರ್ಥಗರ್ಭಿತವಾಗಿದೆ.

ಹೊನ್ನ ಬಿಟ್ಟು, ಹೆಣ್ಣ ಬಿಟ್ಟು, ಮಣ್ಣಬಿಟ್ಟು ಬ್ರಹ್ಮಚಾರಿಗಳಾಗಿಬೇಕೆಂದು ಬಣ್ಣವಿಟ್ಟು ನುಡಿವ ಅಣ್ಣಗಳ ಪರಿಯ ನೋಡಿರೇ, ಹೆಣ್ಣ ಬಿಟ್ಟಡೆಯೂ ಹೊನ್ನ ಬಿಡರಿ, ಹೊನ್ನ ಬಿಟ್ಟಡೆಯೂ ಮಣ್ಣ ಬಿಡಿರಿ. ಒಂದು ಬಿಟ್ಟೊಡೆಯೂ ಒಂದು ಬಿಡರಿ. ಬ್ರಹ್ಮಚಾರಿಗಳೆಂತಪ್ಪರಿ ಹೇಳಿರಣ್ಣಾ? ಹೆಣ್ಣ ಬಿಟ್ಟು ಬ್ರಹ್ಮಚಾರಿಗಳಾಗಬೇಕೆಂದು ಅವರೆಂತು ಹೇಳಿದರು? ನೀವೆಂತು ಕೇಳಿದರಿ? ಹೆಣ್ಣನ್ನು ಹೆಣ್ಣೆಂದರಿವಿರಿ ಹೊನ್ನನ್ನು ಹೊನ್ನೆಂದರಿವಿರಿ.ಮಣ್ಣನ್ನು ಮಣ್ಣನ್ನೆಂದರಿವಿರಿ. ಬ್ರಹ್ಮಚಾರಿಗಳಂತೆಂಪ್ಪಿರಣ್ಣಾ? ಬಿಟ್ಟಡೆ ಹೆಣ್ಣು-ಹೊನ್ನು-ಮಣ್ಣು ಮೂರನೂ ನಿರಾಭಾರಿ ಜಂಗಮವಾಗಿ ಜ್ಞಾನದಲ್ಲಿ ಸುಳಿಯಬಲ್ಲಡೆ ಭವಂ ನಾಸ್ತಿ ತಪ್ಪದು. ಹಿಡಿದಡೆ ಹೆಣ್ಣು ಹೊನ್ನು ಮಣ್ಣು ಈ ಮೂರನ್ನು ಹಿಡಿದು ಗುರು-ಲಿಂಗ-ಜಂಗಮಕ್ಕೆ ಸದ್ಭಕ್ತಿಯಿಂದ ದಾಸೋಹವ ಮಾಡಬಲ್ಲಡೆ ಭವಂ ನಾಸ್ತಿ ತಪ್ಪದು. ಇದ್ದರೆ ಯು ನೀರ ತಾವರೆಯಂತಿಪ್ಪರು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ನಿಮ್ಮ ಶರಣರು.

ಮನವೆಂಬದು ಮರ್ಕಟ ಹಲವು ಕೊಂಬೆಗೆ ಹಾರುತ್ತದೆ. –ಮನವೆಂಬುದು ಮೋಜಿನ– ಕುದುರೆ–ಹಲವಾರು ಕೇರಿಗೆ ಅಡ್ಡಾಡಿಸುತ್ತಿದೆ. ಮನವೆಂಬುವುದು—ಹುಚ್ಚ ನಾಯಿ– ಇನ್ನೂ ಮುಂತಾಗಿದೆ.
ಒಟ್ಟಿನಲ್ಲಿ ಹೇಳುವುದಾದರೆ *ಕಣ್ಣು* ಮನಸ್ಸುನನ್ನು *ಪ್ರಫುಲ್ಲ* ಗೊಳಿಸಬಲ್ಲದು ಹಾಗೇ *ವಿಕಾರ* ಗೊಳಿಸಬಲ್ಲದು. ಆದ್ದರಿಂದ ನಾವು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು.

ರವೀಂದ್ರ ಆರ್ ಪಟ್ಟಣ
ಮುಳಗುಂದ—-ಗದಗ

Don`t copy text!