ಮಸ್ಕಿ : ತಾಲೂಕಿನ ಅಂಕುಶ ದೊಡ್ಡಿಯಲ್ಲಿಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಬುಧವಾರ ಬಳಗಿನ ಜಾವ ೫ ಗಂಟೆ ಸುಮಾರಿಗೆ ಮಣ್ಣಿನ ಮನೆಯ ಚತ್ತು ಬಿದ್ದು ಶಾಂತಮ್ಮ ಗಂಡ ಅಮರೇಶ ಪೂಜಾರಿ ಗಾಯಗೊಂಡಿದ್ದಾಳೆ.
ಮಣ್ಣಿನಲ್ಲಿ ಮುಳುಗಿ ಹೋಗಿದ್ದ ಮಹಿಳೆಯನ್ನು ಪಕ್ಕದ ಮನೆಯವರು ಹುಡುಕಾಡಿ ಮಣ್ಣಿನ ಲ್ಲಿ ಹೂತು ಹೊಗಿದ್ದ ಮಹಿಳೆಯ ಕೈ ಕಾಣಿಸಿಕೊಂಡಿದ್ದನ್ನು ಪತ್ತೆ ಹಚ್ಚಿ ಮಣ್ಣು ತೆಗೆದು ಜೀವ ಉಳಿಸಿದ್ದಾರೆ.
ಗ್ರಾಮಸ್ಥರು ಮಹಿಳೆಯನ್ನು ಮಸ್ಕಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.
ಮಗು ಶಿವರಾಜ( ೨)ಗೆ ಯಾವುದೇ ರೀತಿಯಲ್ಲಿ ಗಾಯಗಳಾಗಿಲ್ಲ.
ತಹಸೀಲ್ದಾರ ಬಲರಾಮ ಕಟ್ಟಿಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದರು.