ಅಂತರಾಷ್ಟ್ರೀಯ ಮಟ್ಟದಲ್ಲಿ ಬಸವತತ್ವ ಪ್ರಚಾರ
ಅಂತರಾಷ್ಟ್ರೀಯ ಮಟ್ಟದಲ್ಲಿ ಬಸವ ತತ್ವಗಳ ಪ್ರಚಾರದ ನಿಟ್ಟಿನಲ್ಲಿ ಇಂಡೋ-ಕೆರೆಬಿಯನ್ ಕಲ್ಚರಲ್ ಸೆಂಟರ ಆಯೋಜಿಸಿದ್ದ ಝೂಮ್ ಕಾರ್ಯಕ್ರಮದಲ್ಲಿ ಶ್ರೀ ವಿಜಯಕುಮಾರ ಕಮ್ಮಾರ ಅವರು ಭಾಗವಹಿಸಿ “ಆಧುನಿಕ ಜಗತ್ತಿನ ಆರ್ಥಿಕತೆಯಲ್ಲಿ ಸಂಸ್ಕೃತಿ ಮತ್ತು ಪರಂಪರೆಯಲ್ಲಿ 12 ನೇ ಶತಮಾನದ ವಚನ ಸಾಹಿತ್ಯದ ಪಾತ್ರ: Culture in Economics through Vachana Literature of 12th Century” ದ ಬಗ್ಗೆ ವಿಷಯ ಮಂಡನೆ ಮಾಡಿದ್ದಾರೆ.
ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ, ಆಫ್ರಿಕಾ, ಏಷಿಯಾ ಮತ್ತು ಯುರೋಪ್ ಖಂಡದ 45 ದೇಶಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಚನ ಸಾಹಿತ್ಯದ ಪರಿಕಲ್ಪನೆ ಮತ್ತು ಆಧುನಿಕ ಜಗತ್ತಿಗೆ ವಚನ ಸಾಹಿತ್ಯದ ಸಂದೇಶ ಪರಿಚಯಿಸುವಲ್ಲಿ ಈ ಕಾರ್ಯಕ್ರಮ ಉತ್ತಮ ನಿದರ್ಶನವಾಗಿದ್ದು ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿದೆ.
(ಈ ಕಾರ್ಯಕ್ರಮದ ಚರ್ಚೆಯ ವಿಷಯ ಇಷ್ಟರಲ್ಲಿ e-ಸುದ್ದಿಯಲ್ಲಿ ಪ್ರಕಟವಾಗಲಿದೆ. ನಿರೀಕ್ಷಿಸಿ)