ಶಾಲೆಗಳ ಆರಂಭ; ಮಕ್ಕಳಲ್ಲಿ ಹೆಚ್ಚಿದ ಉತ್ಸಾಹ

ಶಾಲೆಗಳ ಆರಂಭ; ಮಕ್ಕಳಲ್ಲಿ ಹೆಚ್ಚಿದ ಉತ್ಸಾಹ

e-ಸುದ್ದಿ, ಮಸ್ಕಿ

ಇಂದಿನದ ರಾಜ್ಯದಲ್ಲಿ ಮತ್ತೆ ಶಾಲೆಗಳು ಆರಂಭವಾಗುತ್ತಿರುವದಕ್ಕೆ ಮಕ್ಕಳಲ್ಲಿ ಉತ್ಸಾಹ ಹೆಚ್ಚಾಗಿದೆ. ಪ್ರತಿಯೊಂದು ಊರಿನಲ್ಲಿ ಶಾಲೆಗಳ ಆರಂಭಕ್ಕೆ ತಳಿರು ತೊರಣ ಕಟ್ಡಿ ಅಂದ ಚಂದ ಹೆಚ್ಚಿಸಿದ್ದರು.

ಮಸ್ಕಿ ತಾಲೂಕಿನ‌ ಮೆದಕಿನಾಳ ಗ್ರಾಮದಲ್ಲಿ ಶಾಲೆ ಪ್ರಾರಂಭೊತ್ಸವ ಜರುಗಿತು.

ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರಕಾರ ಆರಂಭಿಸುತ್ತಿರುವ ಶಾಲೆಗೆ ನಾವುಗಳೆಲ್ಲ ಕರೋನಾ ಮುಂಜಾಗೃತ ಕ್ರಮಗಳನ್ವಯ ಶಾಲೆಗೆ ಬಂದು ನಿರಂತರವಾಗಿ ಶಾಲೆ ನಡೆಯಲು ಎಲ್ಲರೂ ಕಾರಣರಾಗಬೇಕು ಎಂದು ಮೆದಕಿನಾಳ ಪ್ರೌಢಶಾಲೆ ಮುಖ್ಯಗುರುಗಳಾದ ಬಿ.ಎಂ ಮುಳ್ಳುರು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಯಲ್ಲಪ್ಪ ಕ್ವಾಸಗಿಯವರು ಮಕ್ಕಳಿಗೆ ಹೂ ಗುಚ್ಛ ನೀಡುವ ಮುಖಾಂತರ 9 ಮತ್ತು 10 ನೇ ತರಗತಿಯ ಮಕ್ಕಳಿಗೆ ಸ್ವಾಗತಿಸಿದರು..

ಮುದುಗಲ್ ನ ವೈದ್ಯರಾದ ಅಮರಗುಂಡಪ್ಪ ಅವರು ಮಕ್ಕಳಿಗಾಗಿ ಕೊಡಿಸಿದ ಮಾಸ್ಕಗಳನ್ನು ಸದಸ್ಯ ಗುಂಡಪ್ಪ ಪರಡ್ಡಿ ವಿತರಿಸಿದರು. ಸಿ.ಆರ್.ಪಿ ರಾಜು ವಾಲಿಕಾರ್ ಹಾಗೂ ಶಾಲೆಯ ಶಿಕ್ಷಕ ಸಿಬ್ಬಂದಿ ಹಾಜರಿದ್ದರು…ಬಹುದಿನಗಳ ನಂತರ ಶಾಲೆಗೆ ಬಂದ ಮಕ್ಕಳ ಮುಖದಲ್ಲಿ ಸಂಭ್ರಮ ಇತ್ತು.

Don`t copy text!