ಬಾಡಿಗೆ ಮನೆ
ಈ ಬಾಡಿಗೆ ಮನೆಗೊಂದು
ಬಾಡಿಗೆ ಮನೆ ಬೇಕಾಗಿದೆ
ಮಣ್ಣಿನ ಮನೆಗೊಂದು
ಮಣ್ಣಿನ ಮನೆ ಬೇಕಾಗಿದೆ
ತನ್ನದಲ್ಲದ ಈ ಮೈಗೂಂದು
ನನ್ನದಲ್ಲದ ಮನೆ ಬೇಕಾಗಿದೆ
ನನ್ನದೆನ್ನುವ ಈ ಒಡಲಿಗೊಂಧು
ತನ್ನನೆಯ ಮನೆ ಬೇಕಾಗಿದೆ
ನನ್ನದು ಎನ್ನುವ ಮನೆ ಮಾಲಿಕರಿಗೆ
ತಾವೂ
ಬಾಡಿಗೆದಾರರೆಂದು
ತಿಳಿಯುವುದು ಹೇಗೆ?
–ಪ್ರಸನ್ನ ಪುರೊಹಿತ
ಬೆಳಗಾವಿ