ರಾಜ್ಶ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ, ಸಾಹಿತಿ ಲಲಿತಾ ಮ ಕ್ಯಾಸನ್ನವರ
ಆತ್ಮೀಯ ಭಾವದ ಸ್ನೇಹಿತೆ ಸಾಹಿತಿ ಲಲಿತಾ ಮ ಕ್ಯಾಸನ್ನವರ ರಾಜ್ಯ ಪ್ರಶಸ್ತಿ ವಿಜೇತ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿ.
ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮದರೈತ ಒಟ್ಟುಕುಟುಂಬದಲ್ಲಿ ಜನಿಸಿದ ಇವರು5 ಜನ ಸ ಹೋದರಿಯರಲ್ಲಿ ಹಿರಿಯ ಮಗಳು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಲಗಾದಲ್ಲಿ ಪೂರೈಸಿದ ಇವರು ಪದವಿಪೂರ್ವ ಶಿಕ್ಷಣ ವನ್ನು ಬೆಳಗಾವಿಯಲ್ಲಿ ಓದುತ್ತಿರುವಾಗಲೆ 1993 ರಲ್ಲಿ ತಿಗಡೊಳ್ಳಿಯ ವ್ಯಾಪಾರಸ್ತರಾದ ಪ್ರಕಾಶ ನೀಲಾಗೌಡರ ಅವರೊಂದಿಗೆ ಸಪ್ತಪದಿ ತುಳಿದು ಗೃಹಿಣಿಯಾದರು. ಅದು ಕೂಡು ಕುಟುಂಬ 4 ಜನ ಓರಗಿತ್ತಿಯರ ನಡುವೆ ಇದ್ದು ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುವುದರೊಂದಿಗೆ ಓದುವುದನ್ನು ಮುಂದುವರೆಸಿTCHವ್ಯಾಸಂಗ ಮುಗಿಸಿದರು. ಸದ್ ಗೃಹಿಣಿಯಾಗಿದ್ದ ಇವರು
1996 ಗಂಡು ಮಗುವಿನ ತಾಯಿಆದರು. ಜೊತೆಗೆ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡು, ಶಿಕ್ಷಕ ವೃತ್ತಿಗೆ ಪಾದಾರ್ಪಣೆ ಮಾಡಿದ್ದು ಇವರ ಬದುಕಿನ ಬಹುದೊಡ್ಡ ಯಶಸ್ಸಿನ ತಿರುವಾಯಿತು. ನಂತರ ದೂರಶಿಕ್ಷಣದಿಂದ MA bed ಪದವಿಯನ್ನು ಪಡೆದರು. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಶಾಲೆಯ ಮಕ್ಕಳ ಮೆಚ್ಚಿನ ಗುರುಮಾತೆಯಾಗಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು 1997ರಿಂದ 2006 ರವರೆಗೆ ಸಹೋದರಿಯರ ಮೈದುನರ ಮದುವೆ ಬಾಣಂತನ (ಅಮ್ಮನ ಆರೋಗ್ಯ ಸರಿ ಇರಲಿಲ್ಲ ಆದ್ದರಿಂದ) ಜವಾಬ್ದಾರಿಯೊಂದಿಗೆ ಬೆಳಗಾವಿ ತಾಲುಕಿನ ಮಾಸ್ತಮರ್ಡಿಯಲ್ಲಿ 14 ವರ್ಷ 6 ತಿಂಗಳ ಸೇವೆಯನ್ನು ಸಮರ್ಥವಾಗಿ ನಿರ್ವಹಿಸುವ ಹೊತ್ತಿಗಾಗಲೆ 2006ರಲ್ಲಿ ಮತ್ತೋಮ್ಮೆ ಮುದ್ದು ಮಗಳ ತಾಯಿ ಆದರು. ವೃತ್ತಿ ಜೀವನದಲ್ಲಿ ಸಾಕಷ್ಟು ನೋವುನಲಿವುಗಳನ್ನು ಕಂಡುಂಡ ಇವರು ಬೆಳಗಾವಿಯ ಭೊವಿಗಲ್ಲಿ ಶಾಲೆಗೆ ವರ್ಗಾವಣೆಗೊಂಡರು. ಬೆಳಗಾವಿಯಲ್ಲಿ ಕನ್ನಡ ಶಾಲೆ ಉಳಿಸಲು ಅನೇಕ ಕೆಲಸಗಳನ್ನು ವೈಯಕ್ತಿಕ ಆಸಕ್ತಿ ಅಭಿಮಾನದಿಂದ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ. ಸರ್ಕಾರದ ಆದೇಶದಂತೆ ಉಜ್ವಲನಗರದಲ್ಲಿ ಹೊಸ ಕನ್ನಡ ಶಾಲೆ ಹುಟ್ಟುಹಾಕಿದ್ದು ಇವರ ಕನ್ನಡ ಭಾಷಾಭಿಮಾನಕ್ಕೆ ಸಾಕ್ಷಿ ಆಗಿದೆ.
ವೃತ್ತಿಯಲ್ಲಿ ಶಿಕ್ಷಕಿ ಆಗಿದ್ದರು ಪ್ರವೃತ್ತಿಯಲ್ಲಿ ಸಾಹಿತ್ಯ ಆಸಕ್ತಿ ಹೊಂದಿದ ಇವರು 2005ರಿಂದ ಇಲ್ಲಿಯವರೆಗೆ ಲೇಖಕಿಯಾಗಿ ಅನೇಕ ಬಿಡಿ ಲೇಖನಗಳನ್ನು ಹಾಗೂ ಕವನಗಳನ್ನು ರಚಿಸಿ ಅವುಗಳಿಗೆ ಅನೇಕ ಸನ್ಮಾನ ಪ್ರಶಸ್ತಿಗಳನ್ನು ಪಡೆದದ್ದು ಇವರ ಸಾಧನೆಯಾಗಿದೆ. ವೃತ್ತಿ ನಿಷ್ಠತೆಗೆ 1997ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ, 2011ರಲ್ಲಿ ಜಿಲ್ಲಾ ವಿಜ್ನಾನ ಶಿಕ್ಷಕರ ಪ್ರಶಸ್ತಿ,2012ರಲ್ಲಿ ಜ್ಞಾನೇಶ್ವರ ಆದರ್ಶ ಶಿಕ್ಷಕರ ಪ್ರಶಸ್ತಿ, 2013 ರಲ್ಲಿ ರಾಷ್ಟ್ರ ಉತ್ತಮ tranee techer ಪ್ರಶಸ್ತಿ. British council of International training academy ಇಂದ 2017 ರಲ್ಲಿ ರಾಜ್ಯ ಸರ್ಕಾರದ ರಾಜ್ಯ ಮಟ್ಟದ ವಿಶೇಷ ಶಿಕ್ಷಕರ ಪ್ರಶಸ್ತಿ ಪುರಸ್ಕೃತರು, ಇದೆ ಸಾಲಿನಲ್ಲಿ ರಾಜ್ಯ ಪ್ರತಿಭಾ ಪರಿಷತ್ ಶಿಕ್ಷಕರ ವೇದಿಕೆ ಬೆಂಗಳೂರು ಇವರ ಗುರುಶ್ರೇಷ್ಟ ರಾಜ್ಯ ಪ್ರಶಸ್ತಿ, ಅಖಿಲ ಕರ್ನಾಟಕ ಜೈನ ನೌಕರ ವೇದಿಕೆ ಬೆಂಗಳೂರಿನಿಂದ ಜ್ಞಾನಶ್ರೀ ಪ್ರಶಸ್ತಿ ಹೀಗೆ ಮೂರು ಪ್ರಶಸ್ತಿ ಇವರ ಮುಡಿಗೇರಿವೆ. ಜಿಲ್ಲಾ ವೇದಿಕೆಯ, ವಿಭಾಗಮಟ್ಟದ, ರಾಜ್ಯ ಪ್ರಶಸ್ತಿಗಳೆಲ್ಲವು ಇವರ ಸೇವೆಗೆ ಸಂದ ಗೌರವಗಳಾಗಿವೆ.1997ರಿಂದ 2017 ರವರೆಗೆ ಸುಮಾರು 35 ಕ್ಕೂ ಹೆಚ್ಚು ಕನ್ನಡ ವೈಜ್ಞಾನಿಕ ಇಂಗ್ಲಿಷ ವಿಷಯಗಳಲ್ಲಿ ಪ್ರಶಸ್ತಿ ಬಂದಿವೆ ಎಂಬುದು ಇವರ ಸಾಧನೆಯ ಗುರುತಾಗಿ ಜಿಲ್ಲೆಯಲ್ಲಿ ಇವರನ್ನು ಗುರುತಿಸುವಂತಾಗಿದೆ.
ಶಿಕ್ಷಣ ಇಲಾಖೆಯ ಎಲ್ಲ ರೀತಿಯ ತರಬೇತಿಗೆ ಸತತವಾಗಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ ಮಾಡುವುದರೊಂದಿಗೆ 2010 ರಲ್ಲಿ ಇಲಾಖೆಯ ವತಿಯಿಂದ ಬೆಳಗಾವಿ diet ದಿಂದ ಇಂಗ್ಲಿಷ ಭಾಷೆಯಲ್ಲಿ ಶಿಕ್ಷಕರ ಕೈಪಿಡಿ ಹಾಗೂ 2018 ರಲ್ಲಿ ಸಫಲಂ ಕವನ ಸಂಕಲನ ಬಿಡುಗಡೆ ಗೊಂಡಿವೆ. ನಿರಂತವಾಗಿ ಸಾಹಿತ್ಯ ಕ್ರಿಷಿಯಲ್ಲಿ ತೊಡಗಿಕೊಂಡಿರುವ ಇವರ ಇನ್ನೇರಡು ಕೃತಿಗಳು ಸದ್ಯದಲ್ಲಿಯೆ ಪ್ರಕಟನೆಗೆ ಸಿದ್ಧವಾಗುತ್ತಿವೆ.
ಶಿಕ್ಷಣ ವೃತ್ತಿ ಸಾಹಿತ್ಯ ಪ್ರವೃತ್ತಿ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ಇವರು ಅನೇಕ ಓದುವ ಆಸಕ್ತಿ ಹೊಂದಿದ ಬುದ್ಧಿವಂತ ಮಕ್ಕಳ ಶಿಕ್ಷಣಕ್ಕಾಗಿ ಅನೇಕ ದೇಣಿಗೆ ದಾನ ನೀಡಿದ್ದಾರೆ. ಕಳೆದ ವರ್ಷದಿಂದ ತಮ್ಮ ಶಾಲೆಗೆ ದಾಖಲಾದ ವಿದ್ಯಾರ್ಥಿಗಳಿಗೆ ವೈಯುಕ್ತಿಕವಾಗಿ 1000 ರೂ ಬಾಂಡ್ ಗಳನ್ನು ನೀಡುವುದರ ಮೂಲಕ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹಾಗೂ ಪ್ರಗತಿ ಹೊಂದಲು ಪ್ರೇರೆಪಿಸುತ್ತಿರುವುದು ಇವರ ಮಾತ್ರುಮನದ ಕಳಕಳಿಯಾಗಿದೆ.ಭಾಷೆ, ಸಾಹಿತ್ಯ, ಶಿಕ್ಷಣ,ಧರ್ಮಮತ್ತು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ಮತಿ ಲಲಿತಾ ಕ್ಯಾಸನ್ನವರ ಅವರಿಗೆ ದೇವರು ಉತ್ತಮ ಆಯುರಾರೋಗ್ಯ ನೀಡಿ ಸಮಾಜಕ್ಕೆ ಅವರಿಂದ ಇನ್ನಷ್ಟು ಸೇವೆಸಲ್ಲಿಸುವ ಭಾಗ್ಯ ಅವರಿಗೆ ನೀಡಲಿ ಎಂಬುದೆ ನಮ್ಮೆಲ್ಲರ ಸದಾಶಯವಾಗಿದೆ.
–ಶ್ರೀ ಮತಿ ಆಶಾ ಎಸ್ ಯಮಕನಮರಡಿ.