ಆಧುನಿಕ ಶರಣೆ

ಆಧುನಿಕ ಶರಣೆ

ಆಹಾ! ನನ್ನ ಗುರುಮಾತೆ l
ವಿಜ್ಞಾನವನ್ನು ಬೋಧಿಸಿದ ಕಾಂತೆ l

ಹೆಜ್ಜೆ ಹೆಜ್ಜೆಗೂ ಬೆಂಬಲಿಸಿದರು l
ಶಿಲ್ಪಿಯಂತೆ ನನ್ನನ್ನು ಕೆತ್ತಿದರು l
ಸುಂದರ ಮೂರ್ತಿ ತಯಾರಿಸಿದರು l
ನಗುನಗುತ ಬಾಯ್ತುಂಬ ಹರಸಿದರು ll ೧ll

ನನ್ನ ಶಿಕ್ಷಕಿ ಶಿಕ್ಷಕಿಯರಲ್ಲಿ ಬಲು ಜಾಣೆ l
ಅಪ್ರತಿಮ ಆಧುನಿಕ ಶರಣೆ l
ದಿಟ್ಟ ಹೆಜ್ಜೆಯ ಮಹಿಳಾಮಣಿ l
ಇಂಥ ಗರತಿಯನು ಬೇರೆಲ್ಲೂ ನಾ ಕಾಣೆ ll ೨ll

ಇಸ್ಲಾಂ ಧರ್ಮದ ಮಾನಿನಿಯು l
ಸರ್ವ ಧರ್ಮಕ್ಕೂ ಪ್ರೇರಣೆಯು l
ಗೌರವ ಪ್ರತೀಕದ ಮಾತೃ ಛಾಯೆಯು l
ನಮ್ಮೆಲ್ಲರ ಪ್ರತ್ಯಕ್ಷ ದೇವತೆಯು ll ೩ll

ಸಾಹಿತ್ಯ_ ಶಿಕ್ಷಣ_ವಚನಗಳ ಸಂಗಮ l
ಕಲಿಯುವ ಮನಗಳಿಗೆ ಘಮ ಘಮ l
ಗೀತೆ_ಕುಣಿತಗಳ ಸಂಗೀತ ಸರಿಗಮ l
ಕಲೆಯೊಂದು ಬಾಳಿಗೆ ಅತ್ತ್ಯುತ್ತಮ ll ೪ll

ಕನ್ನಡತಿ ಕಾವ್ಯನಾಮದಿ ಪ್ರತೀತಿ
ಎಲ್ಲೆಲ್ಲೂ ಹಬ್ಬಿದೆ ಅವರ ಕೀರುತಿ l
ಪ್ರೀತಿ_ ವಿಶ್ವಾಸಗಳ ಚತುರ್ಮತಿ
ಕನ್ನಡಾಂಬೆಯ ಮೆಚ್ಚಿನ ಸಂತತಿ
ll ೫ll

 

ಸುನಿತಾ ಪಾಟೀಲ

Don`t copy text!