ಗವಿಶ್ರೀಗಳಿಂದ ಅಭಿನಂದನ್ ಸಂಸ್ಥೆಯ ಡಿಜಿಟಲ್ ರಸಪ್ರಶ್ನೆಯ 500 ರ ಸಂಚಿಕೆಗೆ ಚಾಲನೆ
e- ಸುದ್ದಿ, ಮಸ್ಕಿ
ಪಟ್ಟಣದ ಅಭಿನಂದನ್ ಸಂಸ್ಥೆ ವತಿಯಿಂದ ಕಳೆದ ಒಂದುವರೆ ವರ್ಷದಿಂದ ಸತತವಾಗಿ ನಡೆಸಿಕೊಂಡು ಬರುತ್ತಿರುವ “ಡಿಜಿಟಲ್ ರಸಪ್ರಶ್ನೆ ಥಟ್ ಅಂತ ಉತ್ತರಿಸಿ” ಕಾರ್ಯಕ್ರಮವು ಯಶಸ್ವಿಯಾಗಿ 500 ಸಂಚಿಕೆಯನ್ನು ತಲುಪಿರುವದು ಬಹುದೊಡ್ಡ ಸಾಧನೆಯಾಗಿದೆ ಎಂದು ಕೊಪ್ಪಳ ಗವಿಮಠದ ಶ್ರೀಗವಿಸಿದ್ದೇಶ್ವರ ಸ್ವಾಮೀಜಿ ಹರ್ಷ ವ್ಯಕ್ತ ಪಡಿಸಿದರು.
ಕೊಪ್ಪಳದ ಗವಿ ಮಠದಲ್ಲಿ ಭಾನುವಾರ ೫೦೦ ನೇ ಸಂಚಿಕೆಗೆ ಚಾಲನೇ ನೀಡಿ ಮಾತನಾಡಿದರು.
ಸತತವಾಗಿ 499 ಸಂಚಿಕೆಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರಿ ನಡೆಸುವ ಉತ್ತಮವಾದ ರೀತಿಯಲ್ಲಿ ಸಹಕಾರ ನೀಡುವ ದೃಷ್ಟಿಯಲ್ಲಿ ಕಾರ್ಯ ನಿರ್ವಹಿಸಿರುವುದು ಅಮೋಘ ಸಾಧನೆಯಾಗಿದೆ. ಹಾಗೂ ಈ ಅಭಿನಂದನ್ ಸಂಸ್ಥೆಯ ಸಾಮಾಜಿಕ ಕಾರ್ಯಗಳ ಪಟ್ಟಿಯನ್ನು ಗಮನಿಸಿದರೆ ಬಹಳ ಹೆಮ್ಮೆಯ ಸಂಗತಿ ಎಂದೆನಿಸುತ್ತದೆ. ಈ ಸಂಸ್ಥೆಯ ಈ ಕಾರ್ಯಗಳು ಹೀಗೆ ಮುಂದುವರಿದು ತಮ್ಮ ಸೇವಾ ಕಾರ್ಯಗಳ ಮೂಲಕ ಜಗದಗಲ ವ್ಯಾಪಿಸಲಿ ಎಂದು ಆಶಿರ್ವಾದಿಸಿದರು.
ಶಿಕ್ಷಕರಾದ ಕಳಕಪ್ಪ ಹಾದಿಮನಿ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಸದಸ್ಯರಾದ ಶೃತಿ ರಾಮಣ್ಣ ಹಂಪರಗುಂದಿ, ಮಲ್ಲಿಕಾರ್ಜುನ ಬಡಿಗೇರ, ಅಮೀತ್ ಕುಮಾರ್ ಪುಟ್ಟಿ ಮತ್ತು ಗವಿಶ್ರೀ ಮಠದ ಭಕ್ತಾದಿಗಳು ಇದ್ದರು.