ಗೌರಿ ನೆನಪು

September 5th, Gauri Lankesh was murdered leaving us with a heavy heart.

ಗೌರಿ ನೆನಪು

ಅನುಭವ ಮಂಟಪದಲಿ
ವಚನ ಸುಧೆ ಹರಿಸಿದ
ಕೋಗಿಲೆಯ ಹತ್ಯೆಯಾಯಿತು

ಶಾಂತಿ ಅಹಿಂಸೆಯ
ಪರಿಮಳ ಪಸರಿಸಿದ
ಪಾರಿವಾಳವೂ ಹತ್ಯೆಯಾಯಿತು

ಜಾತಿ ಧರ್ಮ ಧಿಕ್ಕರಿಸಿ
ಪ್ರೀತಿಯ ಹುಡಿ ಹರಡಿಸಿದ
ಆ ಪತಂಗವೂ ಹತ್ಯೆಯಾಯಿತು

ಮೌಢ್ಯ ವಿರೋಧಿಗಾಗಿ
ನಿತ್ಯ ಕೂಗಿ ಎಬ್ಬಿಸುತ್ತಿದ್ದ
ಕೋಳಿಯೂ ಹತ್ಯೆಯಾಯಿತು

ಹಾಲು-ಹಾಲಾಹಲವ
ಶೋಧಿಸಿ ಸತ್ಯ ಉಲಿದ
ಹಾಲಕ್ಕಿಯೂ ಹತ್ಯೆಯಾಯಿತು

ಗರಿಕೆಯ ಎಳೆತಂದು
ವೈಚಾರಿಕ ಗೂಡು ಕಟ್ಟಿದ
ಗುಬ್ಬಿಯೂ ಹತ್ಯೆಯಾಯಿತು

ಹದ್ದುಮೀರಿ
ಅರಿವು ಬಿತ್ತಿದವರ
ಹತ್ಯೆಯಾಗಿದೆ ಹದ್ದಿನ ಸಾಮ್ರಾಜ್ಯದಲಿ

ಹತ್ಯೆಯ ವಾರಸುದಾರರೀಗ
ಬುದ್ಧರೂಪ ತಳೆದಿದ್ದಾರೆ
ಹದ್ದು ಅಂಗುಲಿಮಾಲಾ ಆಗುವುದೆಂದು.

ಕೆ.ಬಿ.ವೀರಲಿಂಗನಗೌಡ್ರ.

Don`t copy text!