ಎನ್ನ ತವನಿಧಿ ಮಹಾಂತನೆ
ಎನ್ನ ತವನಿಧಿ ಪೂಜ್ಯ ಮಹಾಂತನೆ
ಎನ್ನ ಪೊರೆವ ಧೀಮಂತನೆ
ಎನ್ನ ಹರಸಿದ ನಿತ್ಯ ಸತ್ಯ ಶಾಶ್ವತನೆ
ಎನ್ನ ಉಸಿರೆ ನೀವೇ ಮಹಾಂತನೆ ||
ನಿಮ್ಮಿಂದಲೆ ನನಗೆ ದಿವ್ಯ ಚೈತನ್ಯವು
ನಿಮ್ಮಿಂದಲೆ ನನ್ನ ಭವ ಜನ್ಮ ಪಾವನವು
ನೀವೆ ನನ್ನ ಪಾಲಿನಾ ವರ ಕೊಡುವ ದೈವವು
ನಿಮ್ಮಿಂದಲೆ ನನಗೆ ಸಕಲ ಸಂಪದವು ||
ನಿಮ್ಮ ನಾಮ ಸ್ಮರಣೆಯಿಂದಲೆ ನನಗೆ ಗೆಲುವು
ನಿಮ್ಮ ಆಶೀರ್ವಾದವೆ ನನಗೆ ನೂರಾನೆ ಬಲವು
ಎನ್ನ ತವನಿಧಿ ವಿಜಯಮಹಾಂತೇಶ ನೀವೇ
ನನ್ನ ಪಾಲಿನ ಪರಮ ಪೂಜ್ಯನೀಯ ದೈವವು
–ಸವಿತಾ. ಮಾಟೂರ. ಇಲಕಲ್ಲ