ಸೆಲ್ಫಿ

ಸೆಲ್ಫಿ

ಸಂಬಂಧಗಳು ತೇಲುತಿವೆ
ಸೆಲ್ಫಿಮೋಡಿಯಲ್ಲಿ
ಮೋಹದ ಜಾಲದಲಿ
ಅಂಗೈಯ ಪ್ರಪಂಚದಲ್ಲಿ

ತೆಗೆದ ಛಾಯಾ
ತೆರೆದ ಮನದಿ
ನೋಡುವ ಕಾತರತೆ
ಮನದಿ ವಾಂಛೆ

ಪ್ರಕೃತಿಯ ಸೆಲ್ಫಿಯಲಿ
ಸಿಲುಕಿ ಜಾರಿದ ಜೀವ
ಸೆಲ್ಫಿಮೋಡಿಯಲ್ಲಿ
ಬಾರದ ಯಾನದಲಿ

ತಾಂತ್ರಿಕ ಪ್ರಗತಿಗತಿ
ಏನೆಲ್ಲಾ ಕಾಣ್ಕೆ
ಫೋಟೋ ಶೂಟ್ಗಳ
ಹಾವಳಿಯ ಧಾಳಿ

ಸೆಲ್ಫಿಯಲಿ ಸಿಲುಕಿವೆ
ಬೆಸುಗೆಯ ಸಂಬಂಧ
ಬಂಧನವ ಕಳಚಿ
ಬೆರೆತಿವೆ ಕ್ಲಿಕ್ನಲ್ಲಿ

ಭಾವಕೋಶದಲಿ
ಕರುಳಬಳ್ಳಿಗಳೋ
ಸುಟ್ಟುಕರಕಲಾಗಿವೆಬಳ್ಳಿ ಮುಲಾಮುತಾಕಿಸಿರುವೆ

ಕರುಳಬಳ್ಳಿ ಚಿಗುರು
ಕುಡಿಯೊಡೆಯಲು
ಬಂಧುತ್ವ ಬೆಸೆಯಲು
ಮೊಗ್ಗರಳಿ ಹೂವಾಗಲು

-ಡಾ.ಸುಜಾತ ಅಕ್ಕಿ

Don`t copy text!