ವಿಶ್ವ ಸಾಕ್ಷರತಾ ದಿನಾಚರಣೆಗೆ ಕವಿತೆಗಳ ಸಿಂಚನ
ವಿಶ್ವ ಸಾಕ್ಷರತಾ ದಿನದ ಅಂಗವಾಗಿ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಅಂತರ್ಜಾಲ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ಮೂಡಿ ಬಂದಿತು.
೧೨/೯/೨೦೨೧ ರಂದು ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ ೨೫ ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು. ಸಿ. ಸಾ. ವೇ. ಕೋಶಾಧ್ಯಕ್ಷರಾದ ಪ್ರಭು ಬನ್ನಿಗೋಳಮಠ ಅವರ ಸುಶ್ರಾವ್ಯ ಪ್ರಾರ್ಥನೆಯ ಮೂಲಕ ಕಾರ್ಯಕ್ರಮ ಆರಂಭವಾಯಿತು.
ಉದ್ಘಾಟಕರಾದ ಬಾಗಲಕೋಟೆಯ ಶ್ರೀ ಸಿ.ಸಾ. ವೇದಿಕೆಯ ಜಿಲ್ಲಾಧ್ಯಕ್ಷ ರಾದ ಶ್ರೀಮತಿ ಜಯಶ್ರೀ ಭಂಡಾರಿ ಅವರು ಮಾತನಾಡಿ, “ದೊಡ್ಡ, ದೊಡ್ಡ ಗ್ರಂಥಗಳನ್ನು ಓದಿ ಜಗತ್ತು ಸತ್ತು ಹೋಯಿತು, ಆದರೆ ಪ್ರೀತಿ ಎನ್ನುವ ಎರಡಕ್ಷರ ಕಲಿತು ಜಗತ್ತು ಬದುಕಿತು. ಅಪಾರ ಜ್ಞಾನ ಸಂಪಾದನೆಗಿಂತ ಬದುಕುವ ಕಲೆ ಮುಖ್ಯ” ಹಾಗೂ ವಿಶ್ವ ಸಾಕ್ಷರತಾ ದಿನಾಚರಣೆ ಬೆಳೆದು ಬರಲು ಕಾರಣ ಅದರ ದೇಯೋದ್ದೇಶ ಹಾಗೂ ಗುರಿಯನ್ನು ವಿವರಿಸಿದರು.
ಶಿಕ್ಷಣದ ಮೂಲಕ ಬಡತನವನ್ನು ಹೋಗಲಾಡಿಸಬಹುದು ಹಾಗೂ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ ಸಮಾಜದ ಗುಣಮಟ್ಟ ಸುಧಾರಣೆ ಮಾಡಬೇಕು ಎಂದರು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಇಲಕಲ್ಲ ತಾಲೂಕ ಕ. ಸಾ. ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಂಗಣ್ಣ.ಬ.ಗದ್ದಿ ಅವರು ಶಿಕ್ಷಣ ಮನುಷ್ಯನನ್ನು ಸುಸಂಸ್ಕೃತನನ್ನಾಗಿ ಮಾಡುತ್ತದೆ. ಶಿಕ್ಷಣ ಮೂಲಕ ಅಸಮಾನತೆ ಹೋಗಲಾಡಿಸಬಹುದು ಆದರೆ ವಿಷಾದನೀಯ ಸಂಗತಿ ಎಂದರೆ ಜಗತ್ತಿನಾದ್ಯಂತ ಜನರು ತಮ್ಮ ವೈಯ್ಯಕ್ತಿಕ ಹಾಗೂ ಸಾಮಾಜಿಕ ಹಕ್ಕುಗಳನ್ನು ತಿಳಿದುಕೊಳ್ಳಲು ಸಾಕ್ಷರತೆ ಬಹಳ ಮುಖ್ಯ, ಉತ್ತರಕೋರಿಯ, ಫಿನ್ ಲ್ಯಾಂಡ್, ನಾರ್ವೆ ಮುಂತಾದ ಕೆಲವು ರಾಷ್ಟ್ರಗಳು ಸಂಪೂರ್ಣ ಸಾಕ್ಷರತೆ ಹೊಂದಿವೆ. ಭಾರತ, ಚೀನಾದಂತಹ ರಾಷ್ಟ್ರಗಳಿಗೆ ಸಂಪೂರ್ಣ ಸಾಧ್ಯವಾಗಿಲ್ಲ ಕಾರಣ ಜನಸಂಖ್ಯೆ ಹಾಗೂ ಪ್ರಜ್ಞಾವಂತರು ಇಲ್ಲದೆ ಇರುವುದು ಕಾರಣ ಎಂದು ನುಡಿದರು.
ಸಾಕ್ಷರರು ರಾಕ್ಷಸರಾಗುವ ಸಂಭವ ಹೆಚ್ಚಾಗಿವೆ ಅವರಿಂದಲೇ ಅಪರಾಧ ಅನಾಹುತಗಳು ನಡೆಯುತ್ತಿವೆ ಸಾಕ್ಷರತಾ ಆಂದೋಲನದ ಬಗ್ಗೆ ವಿವರಿಸಿ ಸಾಮಾನ್ಯ ಜ್ಞಾನಕ್ಕೆ ಪತ್ರಿಕೆ ಓದಬೇಕು ಅದಕ್ಕೆ ಅಕ್ಷರ ಜ್ಞಾನಬೇಕು ಆದರೆ ಭಾರತದಲ್ಲಿ ನಮ್ಮ ಜನಸಂಖ್ಯೆ ಅಡ್ಡಿಯಾಗಿದೆ ಅಷ್ಟೇ ಅಲ್ಲ ನಮ್ಮದು ಕೃಷಿ ಆಧಾರಿತ ದೇಶ ಕೃಷಿಕರಿಗೆ ವಿದ್ಯೆ ಬಗ್ಗೆ ಆಸಕ್ತಿ ಕಡಿಮೆ ಹೀಗಾಗಿ ಸಂಪೂರ್ಣ ಸಾಕ್ಷರತೆ ಸಾಧ್ಯವಾಗುತ್ತಿಲ್ಲ ಎಂದರು.
ತಮ್ಮ ವಿದ್ವತ್ತ ಪೂರ್ಣ ಮಾತುಗಳಿಂದ ಸಭೆಯ ಗೌರವವನ್ನು ಹೆಚ್ಚಿಸಿದರು
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ಇಲಕಲ್ಲ ಘಟಕದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಪ್ರಭು ಬನ್ನಿಗೋಳಮಠ ಅವರು ಸಿದ್ಧೇಶ್ವರ ಸಾಹಿತ್ಯ ವೇದಿಕೆ ಇಲಕಲ್ಲದಲ್ಲಿ ಆರಂಭವಾದ ಬಗ್ಗೆ ವಿವರಿಸುತ್ತಾ ರಾಜ್ಯಧ್ಯಕ್ಷರಾದ ಗಿರಿಜಾ ಮಾಲಿಪಾಟೀಲವರ ಪ್ರೋತ್ಸಾಹ ಉತ್ಸಾಹಗಳೇ ಸ್ಫೂರ್ತಿ ಒಳ್ಳೆಯ ಕವಿಯಿತ್ರಿ ಲೇಖಕಿ ಅತ್ಯುತ್ತಮ ಸಂಘಟಕರಾಗಿರುವ ಇವರಿಗೆ ಸಾಹಿತ್ಯ ಸಂಸ್ಕೃತಿ ಬಗ್ಗೆ ವಿಶೇಷ ಕಾಳಜಿ ಇದೆ ಎಂದರು ಇಳಕಲ್ಲಿನ ಪ್ರತಿಯೊಬ್ಬ ಸಾಹಿತಿಗಳು, ಉದಯೋನ್ಮುಖ ಕವಿಗಳು ಬೆಳಕಿಗೆ ಬರಬೇಕು. ಸಾಹಿತ್ಯಕ್ಕೆ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವ ಶಕ್ತಿಯಿದೆ. ಎಲ್ಲರ ಸಹಕಾರವನ್ನು ಅಪೇಕ್ಷಿಸಿ ಮನವಿ ಮಾಡಿದರು. ಈಗಿನ ಜನಪ್ರಿಯ ಕಾವ್ಯ ಪ್ರಕಾರ ಗಜಲ್ ಎಂದು ಗಿರಿಜಾ ಮಾಲಿ ಪಾಟೀಲ ಅವರು ಬರೆದ ಸಾನಿ ಮಿಸ್ರಾ ಬಳಸಿ ಬರೆದ ಗಜಲ್ ವಾಚನದೊಂದಿಗೆ ತಮ್ಮ ಮಾತುಗಳನ್ನು ಮುಕ್ತಾಯ ಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ ಪರಮೇಶ ಮಡಬಲು ಹಾಸನ ಅವರು ಶಿದ್ದೇಶ್ವರ ಸಾಹಿತ್ಯ ವೇದಿಕೆಯ ಕಾರ್ಯಗಳನ್ನು ಶ್ಲಾಗಿಸಿ ಅತ್ಯುತ್ತಮ ಕಾರ್ಯಗಳನ್ನು ನಡೆಸಲು ನಾವೆಲ್ಲಾ ಕೈಜೋಡಿಸೋಣ ಎಂದರು.
ಸಾಕ್ಷರತೆ ಕುರಿತ ಕವಿ ಗೋಷ್ಠಿ ನಡೆಯಿತು. ಬಾಗವಹಿಸಿದ ಕವಿಗಳು ಸ್ವರಚಿತ ಕವನ ವಾಚನ ಮಾಡಿ ಸಾಕ್ಷರತೆಯ ಬಗ್ಗೆ ಅತ್ಯುತ್ತಮ ವಿಚಾಗಳನ್ನು ಮಂಡಿಸಿದರು
ನಿರ್ಣಾಯಕರಾದ ಶ್ರೀ ಮಲ್ಲಿಕಾರ್ಜುನ ಅಂಗಡಿಯವರು ವಿವಿಧ ಕಾವ್ಯ ಪ್ರಕಾರಗಳನ್ನು ತಿಳಿಸಿ ಹಳೆಯ ತಲೆಮಾರಿನ ಕವಿಗಳಿಂದ ಇಂದಿನ ಕವಿಗಳು ಮಾರ್ಗ ದರ್ಶನ ಪಡೆಯಬೇಕು ಎಂದರು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಶ್ರೀಮತಿ ಇಂದುಮತಿ ಪುರಾಣಿಕ ಅವರು
ಎಲ್ಲ ಕವಿಗಳು ಅತ್ಯುತ್ತಮವಾಗಿ ಕವನ ವಾಚನ ಮಾಡಿದರು, ಇಲಕಲ್ಲಿನಲ್ಲಿ ಇಂತಹ ಸಾಹಿತ್ಯ ವೇದಿಕೆ ಇರಲಿಲ್ಲ, ಇದರ ಅವಶ್ಯಕತೆ ಬಹಳ ಇತ್ತು ಅದನ್ನು ಮಂಜುಳಾ ಬನ್ನಿಗೋಳಮಠ ಅವರು ಹಾಗೂ ಸಿದ್ಧೇಶ್ವರ ಸಾಹಿತ್ಯ ವೇದಿಕೆ ಈಡೇರಿಸಿದೆ, ವೇದಿಕೆಯ ಎಲ್ಲ ಕಾರ್ಯಕ್ರಮಗಳಿಗೂ ನಮ್ಮಸಹಕಾರ ಇರುತ್ತದೆ ನಾವೆಲ್ಲರೂ ಅಧ್ಯಕ್ಷರ ಜೊತೆಗಿರುತ್ತೇವೆ ಇದು ನಮಗೆ ಸಂತೋಷದ ವಿಷಯ ಎಂದರು.
ಶ್ರೀ ಸಿದ್ಧೇಶ್ವರ ವೇದಿಕೆಯ ರಾಜ್ಯದಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಅವರು ಮಾತನಾಡಿ ಶಿಕ್ಷಣ ಮಾನವರನ್ನು ನಾಗರಿಕರನ್ನಾಗಿ ರೂಪಿಸಬೇಕು ಆದರೆ ವಿದ್ಯಾವಂತರೆ ಸಮಾಜಕ್ಕೆ ಕಂಟಕರಾಗತ್ತಿರುವದು ಸೋಚನಿಯ ಎಂದರು. ಕಾರ್ಯಕ್ರಮ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕಾರ್ಯ ಮಾಡಿದೆ. ಭಾರತವು ಸಂಪೂರ್ಣ ಸಾಕ್ಷರತಾ ದೇಶವಾಗಲಿ ಎಂಬ ಆಶಯದೊಂದಿಗೆ ನುಡಿಗಳಿಗೆ ವಿರಾಮ ಹೇಳಿದರು.
ಕಾರ್ಯಕ್ರಮದಲ್ಲಿ ತಮ್ಮ ಸುಲಲಿತವಾದ ನಿರೂಪಣೆಯೊಂದಿಗೆ ಅನುಪಮಾ ಪಾಡಮುಖಿ(ಧೋತ್ರೆ )ಯವರು ಅಚ್ಚುಕಟ್ಟಾಗಿ ನಡೆಸಿ ಕೊಟ್ಟರು.
ಸೋದರಿ ಶ್ರೀಮತಿ ಸವಿತಾ ಮಾಟೂರವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಎಲ್ಲರ ಅಂತರ್ಜಾಲ ಸೂತ್ರಗಳನ್ನು ತಾಂತ್ರಿಕ ಸಹಾಯದೊಂದಿಗೆ ಶ್ರೀ ಶಂಕರ ದೋತ್ರೆ ಹಾಗೂ ಚೇತನ್ ಬನ್ನಿಗೋಳಮಠ ಅವರು ನಿರ್ವಹಣೆ ಮಾಡಿದರು.
ಸೋದರ ಶ್ರೀ ಮುತ್ತಣ್ಣ ಬೀಳಿಗಿ ಶಿಕ್ಷಕರು ಗಣ್ಯ ಮಾನ್ಯರಿಗೆ ಕವಿ ಮನಸುಗಳಿಗೆ ಕಾರ್ಯಕ್ರಮದ ಭಾಗವಾದ ಪ್ರತಿಯೊಬ್ಬರಿಗೂ ವಂದನಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.
–ಮಂಜುಳಾ ಬನ್ನಿಗೊಳಮಠ, ಇಲಕಲ್ಲ