ವೀರ ಯೋಧರಿಗೆ ಸನ್ಮಾನ

ವೀರ ಯೋಧರಿಗೆ ಸನ್ಮಾನ

e- ಸುದ್ದಿ ಲಿಂಗಸುಗೂರು:

ಲಿಂಗಸುಗೂರು ತಾಲೂಕಿನ ಗೌಡೂರು ಗ್ರಾಮದ ವಿನಾಯಕ ಯುವಕ ಮಂಡಳಿ ಬಸವನ ಕಟ್ಟೆ ಬಳಗದಿಂದ 14 ನೇ ವರ್ಷದ ಗಣೇಶ ಚತುರ್ಥಿಯ ಅಂಗವಾಗಿ ಇಂದು ಗ್ರಾಮದ ವೀರಯೋಧರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಜರುಗಿತು‌. ಕಾರ್ಯಕ್ರಮವನ್ನು ಗುರುಗುಂಟಾ ಗ್ರಾಮದ ರಾಜಾ ಸೋಮನಾಥ ನಾಯಕ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಮಂಡಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.ಇದಕ್ಕೂ ಮೋದಲ ದೇಶ ಕಾಯುವ ವೀರಯೋಧರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮದ ಯುವ ನಾಯಕ ನಟ ವೀರಭದ್ರ ಹಾಗೂ ಸರಿಗಮಪ ಖ್ಯಾತಿಯ ಮೋನಮ್ಮ ಸೋಮನರಡಿಯವರಿಗೆ ಯುವಕ ಮಂಡಳಿ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.

ನಿವೃತ್ತ ವೀರ ಯೋಧರು ಸೈನಿಕ ತರಬೇತುದಾರರಾದ ಮೊಹಮ್ಮದ್ ಸಲಿಂ ಮಾತನಾಡಿ ಸೈನ್ಯಕ್ಕೆ ಸೇರಲು ಪ್ರತಿಯೊಬ್ಬ ಯುವಕರು ಮುಂದೆ ಬರಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮೋನಮ್ಮ ಗಾಯನ ತುಂಬಾ ಚೆನ್ನಾಗಿ ಮುಡಿಬಂದಿತು. ಭೀಮರಾಯ ಭಜಂತ್ರಿ, ಮಾರುತಿ ಬಡಿಗೆರ ತಂಡದ ವತಿಯಿಂದ ಸಂಗೀತ ಕಾರ್ಯಕ್ರಮ ಸರಳವಾಗಿ ನೇರವೇರಿತು.

ಈ ಸಂದರ್ಭದಲ್ಲಿ ಸೈನಿಕರಾದ ಹನುಮಂತ ಮಸ್ಕಿ, ಲಕ್ಷ್ಮಣ ಉದ್ದಾರ, ಈರಣ್ಣ ಅಂಬಿಗೇರ ಗುರುಗುಂಟಾ, ಮೌನೇಶ ಭೋವಿ, ರಾಜಾ ಜಡಿ ಸೋಮಲಿಂಗ ನಾಯಕ , ರಾಜಾ ಲಕ್ಷ್ಮಣ ನಾಯ್ಕ, ರಾಚಯ್ಯ ಸ್ವಾಮಿ ಗಣಾಚಾರಿ, ಸಿದ್ದಣ್ಣ ದಳಪತಿ, ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಯುವಕ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಗವಿಸಿದ್ದ ಭಜಂತ್ರಿ ನೇರವೆರಿಸಿದರು.

Don`t copy text!