ಮನೋಹರಿ

e-ಸುದ್ದಿ ಓದುಗರಿಗಾಗಿ ಇಬ್ಬರು ಕವಯತ್ರಿಯರಾದ ಡಾ.ಸುಜಾತ ಅಕ್ಕಿ ಮತ್ತು ಸವಿತಾ ಮಾಟೂರು ಇಲಕಲ್ಲ ಅವರು ಒಂದೇ ಚಿತ್ರಕ್ಕೆ ವಿಭಿನ್ನವಾಗಿ ಕವಿತೆ ರಚಿಸಿದ್ದಾರೆ. ಓದುಗರು ಓದಿ ಅಭಿಪ್ರಾಯ ತಿಳಿಸಿ
-ಸಂಪಾದಕ

ಮನೋಹರಿ

ಮುದ್ದು ಮುಖದ ಸುಂದರಿ
ಮುಗ್ಧ ಮನದ ಕಿನ್ನರಿ
ಕನಸಿನ ಲೋಕದ ಸಂಚಾರಿ
ಮನವ ಸೆಳೆವ ಮನೋಹರಿ.

ಹಾವ ಭಾವ ಲಾಸ್ಯ ಲಹರಿ
ಅಂಕು ಡೊಂಕಿನ ವೈಯ್ಯಾರಿ
ಮಧುರ ಅಧರದ ಸಿಂಗಾರಿ
ಮನವನಾಳುವ ಮದನಾರಿ.

ಮನದ ಭಾವ ಮುಖದಿ ತೋರಿ
ಆಸೆಯನರುಹುವ ಬಂಗಾರಿ
ಮನದ ಮಲ್ಲಿಗೆ ನಗೆಯ ಬೀರಿ
ಗಮಲಿನ ಕಂಪ ಸೂಸುವ ಕಿಶೋರಿ.

ಖುಷಿಯ ಅಲೆಯಲಿ ತೇಲುವ ಸಾಗರಿ
ಬೆಳದಿಂಗಳ ನಾಚಿಸುವ ಚಂದ್ರ ಚಕೋರಿ
ನಲ್ಲನ ಮೆಲ್ಲುಸಿರಿನ ನಾಜೂಕಿನ ನಾರಿ
ಕಲ್ಲೆದೆಯನು ಕರಗಿಸುವ ಪ್ರೇಮ ಪರಿ.

ಸವಿತಾ ಮಾಟೂರು ಇಲಕಲ್ಲ

 

Don`t copy text!