ಗೆಲುವಿನ ನಗೆ

ಗೆಲುವಿನ ನಗೆ

(ಕತೆ)


ಮಾನಸ ಸರೋವರ ಮಾನಸ ಸರೋವರ
ಈ ನಿನ್ನ ಮನಸೇ ಮಾನಸ ಸರೋವರ..
ಮಾನಸ ಸರೋವರ ಚಿತ್ರದ ಗೀತೆ ಪಿ.ಬಿ. ಶ್ರೀನಿವಾಸ ಹಾಗೂ ವಾಣಿ ಜಯರಾಂ ಅವರ ಮಧುರ ಕಂಠದಲ್ಲಿ ಕೇಳಿ ಬರುತ್ತಿತ್ತು. ಬೆಳಗಿನ ಉಪಹಾರ ಮುಗಿಸಿ ವಿಶ್ರಮಿಸುತ್ತಿದ್ದ ರಾಧಿಕಾ ಹಾಡಿನಲ್ಲಿ ತಲ್ಲೀನಳಾಗಿ ತಾನೂ ಹಾಡುತ್ತಿದ್ದಳು. ಹಾಡು ಮುಗಿದು ಎಫ್. ಎಮ್. ನಿರೂಪಕ ಮಾತನಾಡಲು ಪ್ರಾರಂಭಿಸಿದಾಗ ಮುಚ್ಚಿದ್ದ ಕಣ್ಣುಗಳನ್ನು ತೆರೆದು ಯಾಕೋ ಮುಂದೆ ಆತನ ಮಾತುಗಳನ್ನು ಕೇಳಲು ಆಸಕ್ತಿ ಕಳೆದುಕೊಂಡು ರೆಡಿಯೋ ಆಫ್ ಮಾಡಿ ಬಾಲ್ಕನಿಗೆ ಬಂದು ನಿಂತಳು.

ಸ್ವಲ್ಪ ಹೊತ್ತು ರಸ್ತೆಯಲ್ಲಿ ಓಡಾಡುತ್ತಿರುವ ವಾಹನಗಳನ್ನು, ದಾರಿಹೋಕರನ್ನು ನೋಡುತ್ತಾ ನಿಂತಳು. ಏನೋ ಒಂದು ಥರದ ನಿರಾಸಕಿ,್ತ ಮನಸ್ಸಿನಲ್ಲಿ ಎಂಥಹದೋ ಶೂನ್ಯತೆ. ನಗರದ ಹೆಸರಾಂತ ವಕೀಲ ಪತಿ, ಮುತ್ತಿನಂಥ ಮಕ್ಕಳು. ಕೀರ್ತಿಗೊಬ್ಬ ಮಗ, ಆರತಿಗೊಬ್ಬ ಮಗಳು. ಬಯಸಬಹುದಾದ ಎಲ್ಲ ಸುಖ ಸೌಕರ್ಯಗಳಿದ್ದರೂ ರಾಧಿಕಾಳಿಗೆ ಏಕೋ ಒಂಟಿತನ ಕಾಡುತ್ತಿತ್ತು. ಯಾವಾಗಲೂ ಏನೋ ಕಳೆದುಕೊಂಡAತಹ ಭಾವ. ಅರ್ಥವಾಗದ ತೊಳಲಾಟ. ಮಕ್ಕಳು ಚಿಕ್ಕವರಿದ್ದಾಗ ಅವರ ಬೇಕು-ಬೇಡಗಳಲ್ಲಿ ದಿನ ಕಳೆದಿದ್ದು ತಿಳಿಯುತ್ತಿರಲಿಲ್ಲ. ಮಕ್ಕಳು ದೊಡ್ಡವರಾದ ನಂತರ ಒಂಟಿತನ ಹೆಚ್ಚಾಗಿ ಕಾಡತೊಡಗಿತ್ತು. ಒಂದೆರಡು ಕಿಟಿ ಗ್ರೂಪ್ ಸೇರಿಕೊಂಡಿದ್ದಾಗಿತ್ತು. ಏನೋ ನೆಪ ಮಾಡಿಕೊಂಡು ಮಾಲ್‌ಗಳನ್ನು ಸುತ್ತುವ ಅಭ್ಯಾಸ ಬೆಳೆಸಿಕೊಂಡಿದ್ದಳು.

ಹಾಗೆ ಸುಮ್ಮನೆ ಎಂದು ಶಾಪಿಂಗ್ ಅಂತ ಹೊರಟರೂ ಮನೆಗೆ ವಾಪಸ್ ಬರುವಾಗ ಕೈಯ್ಯಲ್ಲಿ ಎರಡೋ ಮೂರೋ ಬ್ಯಾಗ್ ಇರುತ್ತಿದ್ದವು!. ಪತಿ ಆನಂದ ಯಾವತ್ತೂ ಯಾವುದಕ್ಕೂ ಲೆಕ್ಕ ಕೇಳಿದವರಲ್ಲ. ಬಾಲ್ಕನಿಯಲ್ಲಿ ನೋಡುತ್ತ ನಿಂತ ರಾಧಿಕಾಳಿಗೆ ನೆನಪಾಗಿದ್ದು ರಾತ್ರಿ ಬರೆದಿಟ್ಟ ಶಾಪಿಂಗ ಲಿಸ್ಟ್. ಬೇಗನೇ ಹೋದರೆ ಮಧ್ಯಾಹ್ನ ಆನಂದ ಮನೆಗೆ ಬರುವಷ್ಟರಲ್ಲಿ ವಾಪಸ್ ಬರಬಹುದು ಎಂದುಕೊಳ್ಳುತ್ತ ಬೇಗನೇ ಡ್ರೆಸ್ಸ್ ಬದಲಾಯಿಸಿ ಮುಖದ ಅಲಂಕಾರ ತಿದ್ದಿ ತೀಡಿ ತನ್ನ ಕಾರಿನ ಕೀ ಹಿಡಿದು ಹತ್ತಿರದ ರೀಲಾಯನ್ಸ ಮಾರ್ಟಕಡೆಗೆ ಹೊರಟಳು. ಪಾರ್ಕಿ್ಸಂಗನÀಲ್ಲಿ ಕಾರ್ ನಿಲ್ಲಿಸಿ ತನ್ನ ಮಾಸ್ಕ ಕಿವಿಗೆ ಸಿಕ್ಕಿಸಿಕೊಳ್ಳುತ್ತ ಮಾರ್ಟ ಒಳಗಡೆ ಪ್ರವೇಶಿಸಿ ಎದುರುಗಡೆ ಇದ್ದ ಬಾಸ್ಕೆಟನ್ನು ಎತ್ತಿಕೊಂಡು ಲಿಸ್ಟ್ ಪ್ರಕಾರ ಸಾಮನುಗಳನ್ನು ಬಾಸ್ಕೆಟ್ ಗೆ ಹಾಕುತ್ತ ನಡೆದಳು. ಕಾಸ್ಮೆಟಿಕ್ಸ ವಿಭಾಗಕ್ಕೆ ಹೋದಾಗ ನೆನಪಾಗಿತ್ತು ತನ್ನ ಹೊಸ ಮರೂನ್ ಸೀರೆಗೆ ಮ್ಯಾಚಿಂಗ್ ಲಿಪ್‌ಸ್ಟಿಕ್ ತೆಗೆದುಕೊಳ್ಳಬೇಕಾಗಿತ್ತು. ಒಂದೋಂದೇ ಶೇಡ್ ನೋಡುತ್ತಿದ್ದಂತೆ ‘ಅದು’ ಆಕೆಗೆ ಕಣ್ಣಿಗೆ ಬಿದ್ದಿತ್ತು. ಸೀರೆಯದ್ದೇ ಬಣ್ಣದ ಮ್ಯಾಟ್ ಪಿನಿಶ್‌ನ ಲಿಪ್‌ಸ್ಟಿಕ್!! ಅದನ್ನು ಕೈಗೆ ಎತ್ತಿಕೊಂಡ ತಕ್ಷಣ ಕೈಯ್ಯಲ್ಲಿ ಮಿಂಚು ಹರಿದಂತಾಯಿತು, ಮೆದುಳು ಸ್ಥಬ್ಧವಾದಂತಾಗಿತ್ತು, ಸೀದಾ ಕೈ ಪರ್ಸ ಒಳಗಡೆ ಇಳಿದಿತ್ತು. ನಂತರ ಯಾಂತ್ರಿಕವಾಗಿ ಬಾಸ್ಕೆಟ್ ಹಿಡಿದು ಕೌಂಟರ್ ಹತ್ತಿರ ಬಂದಿದ್ದಳು. ತಲೆಯಲ್ಲಿ ಸುತ್ತು ಬಂದAತಹ ಅನುಭವ. ಮನೆಗೆ ಹೋಗಿ ಚಹ ಕುಡಿದರೆ ಸರಿ ಹೋಗಬಹುದೇನೋ ಅನಿಸಿತ್ತು. ಬಿಲ್ ಮಾಡುತ್ತಿದ್ದ ಹುಡುಗ ರಾಧಿಕಾಳ ಕಡೆಗೆ ವಿಚಿತ್ರವಾಗಿ ನೋಡುತ್ತಿದ್ದ. ಎಲ್ಲ ಸಾಮಾನುಗಳು ಬಿಲ್ಲಿಂಗ ಆದ ನಂತರವೂ “ಇಷ್ಟೇ ಏನ್ರಿ ಮೇಡಂ” ಎಂದು ಮೂರು ಸಲ ಕೇಳಿದಾಗ ರಾಧಿಕಾಳ ಸಹನೆ ಮೀರಿತ್ತು. “ಹೌದು ಇಷ್ಟೇ” ಎಂದು ಜೋರಾಗಿ ಹೇಳಿದಳು. ಆತ ಆಚೆ ತಿರುಗಿ ಬಾಗಿಲ ಹತ್ತಿರ ಇದ್ದ ಗಾರ್ಡ ಹತ್ತಿರ ಏನೋ ಪಿಸುಗುಟ್ಟುತ್ತಿದ್ದದ್ದು ಕಾಣಿಸಿತು. ಸ್ವಲ್ಪ ದಾಂಡಿಗನಂತೆ ಕಾಣುತ್ತಿದ್ದ ಗಾರ್ಡ ಮುಂದೆ ಬಂದು “ಮೇಡಂ ನಿಮ್ಮ ಪರ್ಸ ತೋರಸರಿ” ಎಂದಾಗ ರಾಧಿಕಾಳ ಸಿಟ್ಟು ನೆತ್ತಿಗೇರಿತ್ತು.
“ಏನ್ ಹಂಗ ಅಂದರ… ನನ್ನ ಪರ್ಸ ಯಾಕ ತೋರಿಸಬೇಕು, ಬಿಲ್ಲ ಎಷ್ಟ ಆಯ್ತು ಹೇಳು, ಕೊಟ್ಟ ಹೋಗತೇನಿ. ಮೊದಲ ಲೇಟ್ ಆಗೇದ ನನಗ” ಎಂದು ಜೋರು ಮಾಡಿದಳು.
“ಕಾಸ್ಮೆಟಿಕ್ಸ ಸೆಕ್ಷನ್‌ದಾಗ ಏನೊ ಪರ್ಸ ಒಳಗ ಹಾಕ್ಕೊಂಡಿದ್ದು ಸಿಸಿ ಕ್ಯಾಮೆರಾದಾಗ ಕಾಣಿಸೆದ. ಬಿಲ್ಲ ಮಾಡುವಾಗ ಹೇಳತಿರಿ ಅಂದ ನೋಡಿದರು. ನೀವು ಹೇಳಲೇ ಇಲ್ಲ. ಸುಮ್ಮನೆ ಪರ್ಸ ಕೊಡಿರಿ ಈ ಕಡೆ ಇಲ್ಲ ಅಂದರೆ ಪೋಲಿಸರಿಗೆ ಫೋನ್ ಮಾಡತೇವಿ” ಎನ್ನುತ್ತ ರಾಧಿಕಾಳ ಪರ್ಸಗೆ ಕೈ ಹಾಕಿದ.
ಅಷ್ಟರಲ್ಲಿ ಸುತ್ತಲೂ ಜನ ಸೇರತೊಡಗಿದ್ದರು. ರಾಧಿಕಾ ಕಣ್ಣ ತಿರುಗಿಸುತ್ತಾ ಪರ್ಸ ಗಟ್ಟಿಯಾಗಿ ಅವುಚಿಕೊಂಡು “ನಾನು ಯಾರು ಅಂತ ತಿಳಕೊಂಡಿದ್ದಿ, ನಮ್ಮ ಮನೀಯವರು ವಕೀಲ ಅದಾರ, ನಿಮ್ಮ ಮ್ಯಾಲೆ ಕೇಸ್ ಹಾಕತೇನಿ” ಏಂದು ಚೀರತೊಡಗಿದಳು. ಅಷ್ಟರಲ್ಲಿ ಸ್ನೇಹಿತೆ ರಶ್ಮಿ ಆಕೆಯನ್ನು ನೋಡಿ “ಏನಾಯ್ತು? ಏನ್ ಪ್ರಾಬ್ಲಮ್?” ಎಂದು ಕೇಳಿದರೂ ಆಕೆಗೆ ಗಮನವಿರಲಿಲ್ಲ. ರಾಧಿಕಾಳ ಕಣ್ಣುಗಳು ದೊಡ್ಡದಾಗಿ ತೆಗೆದುಕೊಂಡು ಯಾವುದೋ ಗ್ರಹ ಬಡಿದಂತೆ ತಿರುಗುತ್ತಿದ್ದವು. ಇಬ್ಬರು ಮಹಿಳಾ ಸೆಲ್ಸಮನ್‌ಗಳು ರಾಧಿಕಾಳನ್ನು ಗಟ್ಟಿಯಾಗಿ ಹಿಡಿದು ಪರ್ಸ ಕಸಿದುಕೊಂಡು ಅದನ್ನು ಕೌಂಟರ್ ಮೇಲೆ ತಲೆ ಕೆಳಗಾಗಿ ಸುರುವಿದಾಗ ಅದರಲ್ಲಿಯ ಚಿಕ್ಕ ಮನಿ ಪರ್ಸ, ಮೋಬೈಲ್ ಮತ್ತು ಇತರ ವಸ್ತುಗಳೊಂದಿಗೆ ಹೊಸ ಲಿಪ್‌ಸ್ಟಿಕ್ ಹೊರಗೆ ಬಂದಿತ್ತು. ಅಷ್ಟರಲ್ಲಿಯೇ ಅಲ್ಲಿಗೆ ಬಂದ ಮ್ಯಾನೆಜರ್ ಲಿಪ್‌ಸ್ಟಿಕ್ ಕೈಗೆತ್ತಿಕೊಂಡು “ಇದೇನ್ರಿ ಮೇಡಂ” ಎಂದು ಕೇಳುತ್ತ ಕಂಪ್ಯೂಟರ ಪರದೆ ಮೇಲೆ ಕ್ಯಾಮರಾದ ರೆಕಾರ್ಡಿಂಗ್ ಪರಿಶೀಲಿಸತೊಡಗಿ   ರಾಧಿಕಾ ಲಿಪ್‌ಸ್ಟಿಕ್ ಎತ್ತಿ ಪರ್ಸನಲ್ಲಿ ಹಾಕಿದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ರಾಧಿಕಾ ಗಾಭರಿಯಾಗಿ ತಡವರಿಸತೊಡಗಿದ್ದಳು.
“ಎನರಿ ಇಷ್ಟ ವಯಸ್ಸು ಆಗೇತಿ, ಡೀಸೆಂಟ್ ಫ್ಯಾಮೀಲಿಯವರ ಹಂಗ ಕಾಣತೀರಿ, ಲಿಪ್‌ಸ್ಟಿಕ್ ಕಳ್ಳತನ ಮಾಡತಿರಲ್ಲರೀ” ಎನ್ನುತ್ತಿದ್ದುದು ಪ್ರತಿಧ್ವನಿಯಂತೆ ಕೇಳುತ್ತಿತ್ತು. ನೋಡುತ್ತಿದ್ದ ರಶ್ಮೀ ಮುಂದೆ ಬಂದು
“ರ‍್ತು ಪರ್ಸ ಒಳಗೆ ಹಾಕ್ಕೋಂಡಿರಬೇಕು, ಇರಲಿ ಬಿಡ್ರಿ ಪಾಪ, ಅವರ ಯಾಕ ನಿಮ್ಮ ಜುಜಬಿ ಲಿಪ್‌ಸ್ಟಿಕ್ ಕಳ್ಳತನ ಮಾಡ್ತಾರ? ಅವರಿಗೇನು ಕಡಿಮೀ ಆಗೇದ” ಎನ್ನುತ್ತಿದ್ದಂತೆಯೇ ರಾಧಿಕಾ ಧಡಾರನೇ ಕೆಳಗೆ ಉರುಳಿದ್ದಳು. ಏನಾಯ್ತು, ಏನಾಯ್ತು ಎನ್ನುತ್ತ ನೀರು ಕೊಡ್ರಿ, ಗಾಳಿ ಬಿಡ್ರಿ ಎಂಬ ಸಲಹೆಗಳೊಂದಿಗೆ
“ಕಳ್ಳತನ ಮಾಡಿ ಸಿಕ್ಕು ಬಿದ್ದ ಕೂಡಲೇ ನಾಟಕ ಮಾಡಾಕತ್ತಾರ ಬಿಡ್ರಿ” ಎನ್ನುವ ಪಿಸು ಮಾತುಗಳು ಬರತೊಡಗಿದ್ದವು. ಯಾರೋ ನೀರಿನ ಬಾಟಲ್ ತೆಗೆದು ನೀರು ಚಿಮ್ಮ ತೊಡಗಿದ್ದರು. ರಶ್ಮೀ ತಟ್ಟನೆ ಟೇಬಲ್ ಮೇಲೆ ಇದ್ದ ರಾಧಿಕಾಳ ಫೋನ್ ತೆಗೆದು ಅದರಲ್ಲಿ ಆನಂದನ ನಂಬರ್ ಹುಡುಕಿ ಆ ನಂಬರ್‌ಗೆ ಕರೆ ಮಾಡಿದಳು. ಆ ಕಡೆಯಿಂದ ಹಲೋ ಎಂಬ ಧ್ವನಿ ರಾಧಿಕಾಳ ಪತಿ ಆನಂದನ ಧ್ವನಿ ಎಂದು ಗುರುತಿಸಿ ಬೇಗನೇ ಗಾಂಧೀ ನಗರದಲ್ಲಿರುವ ರೀಲಾಯನ್ಸ ಮಾರ್ಟ ಕಡೆಗೆ ತಕ್ಷಣ ಬರಲು ಹೇಳಿ ಇನ್ನೂ ಮಂಪರಿನಲ್ಲಿದ್ದ ರಾಧಿಕಾಳತ್ತ ತಿರುಗಿದಳು. ಆನಂದ ಅಲ್ಲಿಗೆ ತಲುಪಿದಾಗ ಆಗಲೇ ಎಚ್ಚರಾಗಿದ್ದ ರಾಧಿಕಾ ಮಂಕು ಹಿಡಿದಂತೆ ಕುಳಿತಿದ್ದಳು. ಆನಂದ ಮ್ಯಾನೆಜರ್ ಹತ್ತಿರ ಮಾತನಾಡಿ ಅವರ ಬಿಲ್ ಸಂದಾಯ ಮಾಡಿ ರಾಧಿಕಾಳನ್ನು ಮನೆಗೆ ಕರೆದುಕೊಂಡು ಬಂದಿದ್ದ. ರಶ್ಮಿಯಿಂದ ವಿಷಯ ತಿಳಿದ ಆನಂದನ ಅಕ್ಕ ಸಾಯಂಕಾಲ ಅನಂದನಿಗೆ ಫೋನ್ ಮಾಡಿ ವಿಚಾರಿಸಿದಾಗ ಆನಂದ ಅಕ್ಕನೊಂದಿಗೆ ತನ್ನ ಮನಸ್ಸಿನ ಗೊಂದಲವನ್ನು ಹಂಚಿಕೊಂಡಿದ್ದ.
ಇಂತಹ ಘಟನೆಗಳು ಅನೇಕ ಸಾರಿ ಪುನರಾವರ್ತನೆಗೊಂಡಿದ್ದವು. ಯಾವುದೋ ಮಾಲ್‌ನಲ್ಲಿ ರಾಧಿಕಾ ಚಿಕ್ಕ ಪುಟ್ಟ ಸಾಮನುಗಳನ್ನು ಪರ್ಸಿನಲ್ಲಿ ಹಾಕಿಕೊಂಡು ಸಿಕ್ಕಿ ಬೀಳುವುದು ಆನಂದನಿಗೆ ಕಿರಿ ಕಿರಿ ಉಂಟು ಮಾಡಿತ್ತು. ಆತ ಆಕೆಯೊಂದಿಗೆ ಶಾಪಿಂಗ್‌ಗೆ ಹೋಗುವುದನ್ನೇ ಕಡಿಮೆ ಮಾಡಿದ್ದ. ಕೆಲವು ಬಾರಿ ಕೌಂಟರಿಗೆ ಹೋಗುವ ಮೊದಲು ತಾನೇ ಆಕೆಯ ಪರ್ಸ ಚೆಕ್ ಮಾಡಿ ಖಾತರಿ ಮಾಡಿಕೊಳ್ಳುತ್ತಿದ್ದ. ಸಿಕ್ಕು ಬಿದ್ದಾಗ ಕೇಳಿದರೆ ನನಗೆ ಗೊತ್ತೇ ಇಲ್ಲ ನಾನು ತೆಗೆದುಕೊಂದಿಲ್ಲ ಎಂದು ಬಾಯಿ ಮುಚ್ಚಿಸಿ ಬಿಡುತ್ತಿದ್ದಳು. ಕೆಲ ಸಲ ಜಗಳ ಮಾಡಿದರೆ ಕೆಲ ಸಲ ಮರೆತು ಬಿಟ್ಟಿದ್ದೆ ಎನ್ನುತ್ತ ಕ್ಷಮೆ ಕೇಳುತ್ತಿದ್ದಳು. ಅದೇನು ಕೆಟ್ಟ ಮರೆವುು ಎಂದು ಆನಂದ ಮುಜುಗರಗೊಳ್ಳೂತ್ತಿದ್ದ. ಆದರೆ ಇವತ್ತಿನ ಆಕೆಯ ವರ್ತನೆ ಮತ್ತು ಮುಖಭಾವ ಆತನಲ್ಲಿ ಹೆದರಿಕೆ ಹುಟ್ಟಿಸಿತ್ತು. ತಮ್ಮನ ಧ್ವನಿಯಲ್ಲಿದ್ದ ಆತಂಕದ ಭಾವವನ್ನು ಗುರುತಿಸಿದ್ದ ಆತನ ಅಕ್ಕ ಅಂಕಿತಾ ತಕ್ಷಣ ಹೊರಟು ಬಂದಿದ್ದಳು. ಯಾವುದೇ ಸೂಚನೆಯಿಲ್ಲದೇ ಬಂದ ನಾದಿನಿಯನ್ನು ನೋಡಿ ಆಶ್ಚರ್ಯ ಸೂಚಿಸಿದ ರಾಧಿಕಾ ಹೇಗಿದ್ದೀ ಎಂದು ಕೇಳಿದ ನಾದಿನಿಗೆ “ನನಗೇನಾಗಿದೆ ಅರಾಮ ಇದ್ದೀನಲ್ಲ” ಎನ್ನುವ ಉತ್ತರ ಸಿಕ್ಕಿತ್ತು. ಮನೋ ವಿಜ್ಯಾನದಲ್ಲಿ ಡಿಗ್ರಿ ಮುಗಿಸಿದ್ದ ಅಕ್ಕನ ಸಲಹೆಯಂತೆ ವiನೋರೋಗ ತಜ್ಞರನ್ನು ಭೇಟಿಯಾಗುವುದು ಸೂಕ್ತವೆನಿಸಿತು. ಆಕೆಗೆ ಮಾನಸಿಕ ಸ್ಥಿತಿಯ ಬಗ್ಗೆ ಕಾಳಜಿಯಾದರೂ ತನಗೇನೂ ಆಗಿಲ್ಲ ಎಂಬAತಿದ್ದ ಆಕೆಯನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗುವುದು ಹೇಗೆ? ಎಂಬ ಪ್ರಶ್ನೆ ಆತನನ್ನು ಕಾಡ ತೊಡಗಿತ್ತು. ಕೊನೆಗೆ ತಾನೊಬ್ಬನೆ ನಗರದ ಹೆಸರಾಂತ ಮನೋರೋಗ ತಜ್ಞರಾದ ಡಾ. ದೇಸಾಯಿ ಅವರನ್ನು ಭೇಟಿಯಾಗಲು ಹೋಗಿದ್ದ. ಆನಂದ ಹೇಳಿದ್ದನ್ನು ಕೂಲಂಕುಷವಾಗಿ ಕೇಳಿದ ಡಾ. ದೇಸಾಯಿ ಅವರು ಈ ತರದ ವರ್ತನೆ ಯಾವಾಗಿನಿಂದ ಪ್ರಾರಂಭವಾಗಿದೆ ಎಂದು ತಿಳಿದುಕೊಳ್ಳಲು ಹೇಳಿದ್ದರು. ತಕ್ಷಣ ಅತ್ತೆಗೆ ಫೋನ್ ಮಾಡಿದ ಆನಂದ ಕುಶಲೋಪರಿಯ ನಂತರ ಸಾವಕಾಶವಾಗಿ ರಾಧಿಕಾಳ ವರ್ತನೆ ಮತ್ತು ಅದರಿಂದಾಗುತ್ತಿರುವ ತೊಂದರೆಗಳನ್ನು ವಿವರಿಸಿದ್ದೆ. ಮೊದ ಮೊದಲು ಮಾತನಾಡಲು ನಿರಾಕರಿಸಿದ ಅತ್ತೆ ಬಿಕ್ಕುತ್ತಲೇ ರಾಧಿಕಾಳ ಬಾಲ್ಯವನ್ನು ಬಿಚ್ಚಿಟ್ಟಿದ್ದರು. ಶಾಲೆಯಲ್ಲಿ ಸ್ನೇಹಿತರ ಪೆನ್‌ಸಿಲ್, ರಬ್ಬರ್‌ದಿಂದ ಪ್ರಾರಂಭವಾದ ಕದಿಯುವ ಅಭ್ಯಾಸ ನಂತರ ನೆರೆಮನೆ ಹಾಗು ಅಂಗಡಿಗಳಿಗೆ ಹಬ್ಬಿತ್ತು. ಅಮ್ಮನ ಬೆದರಿP,ೆ ಹೊಡೆತ ಯಾವುದಕ್ಕೂ ಬಗ್ಗದೇ ನಿರಾಕರಣೆಯೊಂದಿಗೆ ಮುಂದುವರೆದಿತ್ತು. ಸಿಟ್ಟಿನಿಂದ ಕೈಗೆ ಹಾಕಿದ ಬರೆಯೂ ಯಾವುದೇ ಪರಿಣಾಮವನ್ನು ಬೀರದಾಗಿತ್ತು. ಕೊನೆಗೆ ಬೇಸತ್ತ ಅವರೇ ಸುಮ್ಮನಾಗಿದ್ದರು. ಆದರೆ ಯಾರ ಗಮನಕ್ಕೂ ಬಾರದ ಹಾಗೆ ಜಾಗರೂಕತೆ ವಹಿಸಿದ್ದರು. ಅದೊಂದು ಕೆಟ್ಟ ಅಭ್ಯಾಸದ ಹೊರತಾಗಿ ತುಂಬ ಮೃದು ಸ್ವಭಾವ ಹಾಗೂ ನಗುಮುಖದ ರಾಧಿಕಾ ತನ್ನ ಸುಮಧುರ ಕಂಠದಿAದ ಹಾಡುವುದರ ಮೂಲಕ ಎಲ್ಲರಿಗೂ ಪ್ರಿಯಳಾಗಿದ್ದಳು. ಕಾಲೇಜು ಸೇರಿದ ಮೇಲೆ ಕಳ್ಳತನದ ಸಂದರ್ಭಗಳು ಕಡಿಮೆಯಾಗಿದ್ದವು ಅಥವಾ ಅವರ ಗಮನಕ್ಕೆ ಬಂದಿರಲಿಲ್ಲವೋ ಗೊತ್ತಿಲ್ಲ. ಈಗಂತೂ ವಿಷಯವನ್ನು ಮರೆತು ಬಿಟ್ಟಿದ್ದರು. ಅಳಿಯ ಹೇಳಿದ್ದನ್ನು ಕೇಳಿ ಅವರ ಆತಂಕ ಮತ್ತ್ತೆ ಗರಿಗೆದರಿತ್ತು. ಅವರಿಗೆ ಸಮಾಧಾನ ಹೇಳಿದ ಆನಂದ ಮತ್ತೆ ಫೋನು ಮಾಡುವುದಾಗಿ ತಿಳಿಸಿ ನಂತರ ಡಾಕ್ಟರ್ ಜೊತೆ ವಿವರಗಳನ್ನು ಹಂಚಿಕೊAಡಿದ್ದ. ಅವರ ಸಲಹೆಯ ಮೇರೆಗೆ ಆಕೆ ತಲೆ ತಿರುಗಿ ಬಿದ್ದ ನೆಪದಿಂದ ರಾಧೀಕಾಳನ್ನು ಡಾ. ದೇಸಾಯಿಯವರ ಕ್ಲೀನಿಕ್‌ಗೆ ಕರೆದುಕೊಂಡು ಬಂದಿದ್ದ.
ಮೊದಲು ಸಹಜವಾಗಿ ಎಂಬAತೆ ಆಕೆಯ ತಲೆ ತಿರುಗಿ ಬಿದ್ದ ವಿವರಗಳನ್ನು ಕೇಳುತ್ತ ಸಂದರ್ಭಗಳ ಬಗ್ಗೆ ವಿಚಾರಿಸುತ್ತ, ಕೆಲವು ಟೆಸ್ಟ್ ಗಳನ್ನು ಮಾಡಬೇಕಾಗುತ್ತದೆ ಎಂದು ಮತ್ತೆ ಬರಲು ತಿಳಿಸಿದರು. ಹೀಗೆ ಎರಡು ಮೂರು ಬಾರಿ ಭೇಟಿ ಮಾಡಿದಾಗ ರಾಧಿಕಾ ಅವರಿಗೆ ಸ್ಪಂಧಿ¸ತೋÀಡಗಿದಳು. ಅವರ ಪ್ರಶ್ನೆಗಳಿಗೆ ಉತ್ತರಿಸುತ್ತ ತನ್ನ ಮಾನಸಿಕ ತುಮುಲಗಳನ್ನು, ಸಂದೇಹಗಳನ್ನು ಹಂಚಿಕೊಳ್ಳ ತೊಡಗಿದಳು. ಕೂಲಂಕುಷವಾಗಿ ಪರಿಶೀಲಿಸಿ ಡಾ. ದೇಸಾಯಿ ಆಕೆಯ ವಿಚಿತ್ರ ವರ್ತನೆಗೆ ಕಾರಣವಾಗುವ ಕ್ಲಿಪ್ಟೋಮೇನಿಯಾ ಬಗ್ಗೆ ವಿವರಿಸಿದ್ದರು. ಮಿದುಳಿನಲ್ಲಿ ಸಿರೋಡೋನಿಕ್ ಎಂಬ ರಾಸಾಯನಿಕ ಸೃವಿಸುವುದರಿಂದ ಉಂಟಾಗುವ ಒಂದು ಮಾನಸಿಕ ಸ್ಥಿತಿ. ಓ ಸಿ ಡಿ ಅಂದರೆ ಒಂದು ತರಹ ಕಡ್ಡಾಯದ ಗೀಳು ಅಂತೂ ಹೇಳಬಹುದು. ಅದೊಂದು ಮಾನಸಿಕ ರೋಗ ಅನ್ನುವುದಕ್ಕಿಂತ ಮಾನಸಿಕ ಅಸ್ವಸ್ತತೆ ಎನ್ನುವುದು ಸೂಕ್ತವೆನಿಸುತ್ತದೆ. ಯಾವುದೋ ಉದ್ವೇಗಕ್ಕೊಳಗಾಗುವ ಮನಸ್ಸು ಕದಿಯುವದರಲ್ಲಿ ಉಪಶಮನ ಪಡೆದುಕೊಳ್ಳುವ ಒಂದು ಸ್ಥಿತಿ ಅಥವಾ ಏನಾದರೂ ಬೇಕೆನಿಸಿದಾಗ ಆ ಪ್ರಚೋದನೆಯನ್ನು ತಡೆದುಕೊಳ್ಳಲಾಗದ ಸ್ಥಿತಿ. ಅದಕ್ಕೆ ಯಾವುದೇ ನಿರ್ದಾರಿತ ಚಿಕಿತ್ಸೆ ಅಂತ ಇಲ್ಲದಿದ್ದರೂ ಕೆಲವು ಔಷಧೋಪಚಾರಗಳಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ನಂತರ ಮನಸ್ಸನ್ನು ಬೇರೆ ಯಾವುದಾದರೂ ನಮಗಿಷ್ಟವಾದ ವಿಷಯದಲ್ಲಿ ತೊಡಗಿಸಿದರೆ ಈ ವರ್ತನೆಯನ್ನು ನಿಯಂತ್ರಿಸಲು ಸಾಧ್ಯವೆಂದು ಹೇಳುತ್ತ ಡಾ. ದೇಸಾಯಿ ನಿಮಗೆ ಆಸಕ್ತಿದಾಯಕವೆನಿಸುವ ಯಾವುದಾದರೂ ಹವ್ಯಾಸವಿದೆಯೇ ಎಂದು ಕೇಳಿದ್ದರು. ತಕ್ಷಣ ಆನಂದ ಆಕೆ ತುಂಬಾ ಚೆನ್ನಾಗಿ ಹಾಡುತ್ತಾಳೆ ಎಂದಿದ್ದ. ನಿಮ್ಮನ್ನು ಅದರಲ್ಲಿ ತೊಡಗಿಸಿಕೊಂಡು ನೋಡಿ ಸಹಾಯವಾಗಬಹುದು ಎಂದು ಕೆಲವು ಟ್ಯಾಬ್‌ಲೆಟ್‌ಗಳನ್ನು ಕೊಟ್ಟಿದ್ದರು. ರಾಧಿಕಾ ನಿಧಾನವಾಗಿ ತನ್ನ ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದಳು. ಇಷ್ಟು ದಿನ ತನ್ನ ಸಮಸ್ಯೆಯನ್ನು ಸಮಸ್ಯೆ ಎಂದು ಗುರುತಿಸಲಾಗದೇ ಅದಕ್ಕೆ ಮರೆವಿನ ಮುಖವಾಡ ತೊಡಿಸಲು ತೊಳಲಾಡುತ್ತಿದ್ದ ರಾಧಿಕಾ ಅದನ್ನು ಎದುರಿಸಲು ನಿರ್ಧರಿಸಿದಳು. ಅದರಿಂದ ಬಿಡುಗಡೆ ಹೊಂದಲು ಸಿದ್ಧಳಾದಳು. ತಕ್ಷಣ ಹತ್ತಿರದಲ್ಲಿಯೇ ಇದ್ದ ಶಾರದಾ ಸಂಗೀತಾಲಯದಲ್ಲಿ ತನಗೆ ಇಷ್ಟವಾದ ಸುಗಮ ಸಂಗೀvದÀ ಕ್ಲಾಸಿಗೆ ಹೆಸರು ನೋಂದಾಯಿಸಿದಳು. ತನ್ನನ್ನು ತಾನು ಸಂಗೀತದಲ್ಲಿ ತೊಡಗಿಸಿಕೊಂಡಳು. ಮಧುರವಾದ ಧ್ವನಿ ಮತ್ತು ಸಹಜವಾದ ಹಾಡುಗಾರಿಕೆಯಿಂದ ಆರು ತಿಂಗಳಲ್ಲಿಯೇ ಸಂಗೀತಾಲಯದ ಚಿಕ್ಕ ಪುಟ್ಟ ಕಾರ್ಯಕ್ರಮಗಳ್ಲಲಿ ಭಾಗವಹಿಸಲು ಪ್ರಾರಂಭಿಸಿದಳು. ದಿನೆ ದಿನೆ ಅವಳ ಆತ್ಮ ವಿಶ್ವಾಸಕ್ಕೆ ಗರಿ ಮೂಡತೊಡಗಿತ್ತು.
ಅಂದು ಆನಂದನ ಜೊತೆಗೆ ಅದೇ ರೀಲಾಯನ್ಸ ಮಾರ್ಟಗೆ ಹೋಗಿ ಎಂದಿನAತೆ ಬೇಕಾದ ಸಾಮನುಗಳನ್ನು ಆಯ್ದುಕೊಂಡು ಕೌಂಟರ ಹತ್ತಿರ ಬಂದಾಗ ಆನಂದ ಎಂದಿನAತೆ ಆಕೆಯ ಪರ್ಸ ಕಡೆ ನೋಡಿದನು. ಆತನ ಕಣ್ಣುಗಳಲ್ಲಿ ನೇರವಾಗಿ ನೋಡುತ್ತ ಮುಗುಳ್ನಗೆ ನಕ್ಕು ರಾಧಿಕಾ ನಿಧಾನವಾಗಿ ಆತನ ಮುಂಗೈಯನ್ನು ಒತ್ತಿದಳು. ಆಕೆಯ ಕಣ್ಣುಗಳಲ್ಲಿದ್ದ ಭರವಸೆ ಓದಿದ ಆನಂದ ನಿರಾಳವಾಗಿ ದುಡ್ಡಿಗಾಗಿ ಪರ್ಸ ಕೈಗೆತ್ತಿಕೊಂಡ. ತನಗೆ ಶಾಪದಂತೆ ಕಾಡುತ್ತಿದ್ದ ಕ್ಲಿಪ್ಟೋಮೇನಿಯಾವನ್ನು ಸೋಲಿಸಿದ ಗೆಲುವಿನ ನಗೆ ರಾದಿಕಾಳ ಮುಖದಲ್ಲಿ ಸ್ಪಷ್ಟವಾಗಿ ಮೂಡಿತ್ತು.

ರಾಜನಂದ ಗಾರ್ಘಿ, ಬೆಳಗಾವಿ

.

Don`t copy text!