ಲಿಂಗಸಗೂರಿನಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ.

ಲಿಂಗಸಗೂರಿನಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ.

e-ಸುದ್ದಿ, ಲಿಂಗಸುಗೂರು

ಕಲ್ಯಾಣ ಕರ್ನಾಟಕ ದಲ್ಲಿ ಶಿಕ್ಷಣ, ಕೃಷಿ, ವಿಮಾನ ನಿಲ್ದಾಣ ಸೇರಿದಂತೆ ಹಲವಾರು ರಂಗದಲ್ಲಿ ಅಭಿವೃದ್ಧಿ ಯಾಗುತಿದ್ದು ಈ ಭಾಗದಲಿ ಅಭಿವೃದ್ಧಿ ಯ ಹೊಸ ಅಧ್ಯಾಯ ಆರಂಭವಾಗುತ್ತಿದೆ ಎಂದು ಸಹಾಯ ಆಯುಕ್ತರಾದ ರಾಹುಲ್ ಸಂಕನೂರು ಹೇಳಿದರು.
ಅವರು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ಯ ಪಟ್ಟಣದ ಕ್ರೀಡಾಂಗಣ ದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ದೇಶಕ್ಕೆ ಆಗಷ್ಟ್ 1947ರಲ್ಲಿ ಸ್ವಾತಂತ್ರ್ಯ ದೊರಕಿದರೆ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೂ 1948 ಸೆಪ್ಟೆಂಬರ್ ರಲ್ಲಿ ಸ್ವಾತಂತ್ರ್ಯ ದೊರಕಿದೆ ಅದರ ಹಿಂದೆ ಹಲವಾರು ಹೋರಾಟಗಾರರ ಶ್ರಮ ಬಹಳಷ್ಟಿದೆ. ಈ ಭಾಗ ತೀರಾ ಹಿಂದುಳಿದಿದ್ದು ಇದೀಗ ಹಲವಾರು ರಂಗದಲ್ಲಿ ಅಭಿವೃದ್ಧಿಯ ಪಥದತ್ತ ಹೆಜ್ಜೆ ಹಾಕುತ್ತಿದೆ ಎಂದರು.371 ಜೆ ಅನುಕೂಲತೆಯಿಂದಾಗಿ ಉದ್ಯೋಗಾವಕಾಶಗಳು   ಹೆಚ್ಚಾಗಿವೆ. ಎಂದರು.

ಈ ಸಂದರ್ಭದಲ್ಲಿ ತಹಶಿಲ್ದಾರ ಚಾಮರಾಜ ಪಾಟೀಲ್, ತಾಲೂಕು ಪಂಚಾಯತ್ ಇ.ಓ ಲಕ್ಷ್ಮೀ ದೇವಿ,ಡಿವೈಎಸ್ಪಿ ಎಸ್.ಎಸ್. ಹುಲ್ಲೂರು,ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಯಮನೂರು, ಎಪಿಎಂಸಿ ಅಧ್ಯಕ್ಷ ಮಲ್ಲರಡ್ಡೆಪ್ಪ ಜಕ್ಕೇರಮಡು, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ನರಸಪ್ಪ ,ಆರೋಗ್ಯಾಧಿಕಾರಿ ಡಾ ಅಮರೇಶ ಪಾಟೀಲ್, ಬಿಇಓ ಹುಂಬಣ್ಣ ರಾಠೋಡ, ಸೇರಿದಂತೆ ಇತರ ಗಣ್ಯರು ಹಾಜರಿದ್ದರು. ತಹಶಿಲ್ದಾರ ಚಾಮರಾಜ ಪಾಟೀಲ್ ಸ್ವಾಗತಿಸಿದರು ಡಾ . ರಾಚಪ್ಪ ನಿರೂಪಿಸಿದರು ಶಿವಾನಂದ ನರಹಟ್ಟಿ ವಂದಿಸಿದರು.

Don`t copy text!