ತಾಲೂಕಾಡಳಿತ ಮಧ್ಯಪ್ರವೇಶದಿಂದ ರಸ್ತೆ ತಡೆ ಚೆಳುವಳಿ ದಿನಾಂಕ ತಾತ್ಕಾಲಿಕ ಮುಂದೂಡಿಕೆ
e- ಸುದ್ದಿ ಮಸ್ಕಿ
ಬುದ್ದಿನ್ನಿ ಎಸ್ ಗ್ರಾಮದಲ್ಲಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಮಸ್ಕಿ ತಹಶೀಲ್ದಾರ್ ಕವಿತಾ ಆರ್ ಅವರು ಶಾಲಾ ಭೇಟಿ 8 ನೇ ತರಗತಿ ಮಕ್ಕಳ ಸಮಸ್ಯೆಗಳನ್ನು ಆಲಿಸಿದರು ಈ ಸಂದರ್ಭದಲ್ಲಿ ಮಸ್ಕಿ ಪ್ರಭಾರಿ ಶಿಕ್ಷಣಾಧಿಕಾರಿ ಬಸಪ್ಪ ತನಿಖೆದಾರ ,ಪೋಲೀಸ್ ಸರ್ಕಲ್ ಇನ್ಸಪೆಕ್ಟರ್ ದೀಪಕ್ ಭೂಸರೆಡ್ಡಿ, ಪೋಲೀಸ್ ಸಬ್ ಇನ್ಸ್ಪೆಕ್ಟರ್ ಸಿದ್ದರಾಮ ಸಾಂಬ್ರಾಣಿ, ಹೂವಿನಭಾವಿ ಗ್ರಾಮ ಲೆಕ್ಕಾಧಿಕಾರಿ ಬಾಬು ಶಾಲೆಯ ಶಿಕ್ಷಕವೃಂದ, ಬುದ್ದಿನ್ನಿ ಎಸ್, ಹೂವಿನಭಾವಿ, ಬೆಂಚಮರಡಿ ಗ್ರಾಮಸ್ಥರು ಈ ಸಂದರ್ಭದಲ್ಲಿ ಇದ್ದರು
ಬುದ್ದಿನ್ನಿ ಗ್ರಾಮ ಸೇರಿದಂತೆ 8 ಹಳ್ಳಿಗಳ ಶಾಲಾ ಮಕ್ಕಳು, ಪಾಲಕರು, ಸಂಘಸಂಸ್ಥೆಗಳಿಂದ ಪ್ರೌಢಶಾಲೆ ಮಂಜೂರಿಗಾಗಿ 20-09-2021 ರಂದು ಜೇವರ್ಗಿ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಮುದಬಾಳ ಕ್ರಾಸ್ ಬಳಿ ನಡೆಯಬೇಕಿದ್ದ ಸಂಚಾರ ತಡೆ ಚೆಳುವಳಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಡ್ಡೆಪ್ಪ ಬುದ್ದಿನ್ನಿ ತಿಳಿಸಿದ್ದಾರೆ.
ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸವ ಭರವಸೆ ತಾಲೂಕು ಆಡಳಿತ ನೀಡಿದ್ದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಿಕ್ಷಣ ಇಲಾಖೆಯ ಕಲಬುರಗಿ ಅಪರ ಆಯುಕ್ತ ನಳಿನ್ ಅತುಲ್, ರಾಯಚೂರು ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಡಿಡಿಪಿಐ, ಲಿಂಗಸುಗೂರು ಸಹಾಯಕ
ಆಯುಕ್ತರು (ಎಸಿ) ಡಿಎಸ್ ಪಿ, ಬಿಒ ಸೇರಿದಂತೆ 8 ಹಳ್ಳಿಗಳ ಗ್ರಾಮಸ್ಥರು, ಸಂಘಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿರಬೇಕೆಂಬುದು ನಮ್ಮ ಬೇಡಿಕೆಯಾಗಿದ್ದು ಸಭೆ ನಡೆಸುವ ಭರವಸೆಯನ್ನು ಅಧಿಕಾರಿಗಳು ನೀಡಿರುವದರಿಂದ ಪ್ರತಿಭಟನೆ ತಾತ್ಕಾಲಿಕ ವಾಗಿಕೈ ಬಿಟ್ಟಿರುವದಾಗಿ ಹೋರಾಟಗಾರರು ತಿಳಿಸಿದ್ದಾರೆ.