ವಿಶ್ವೇಶ್ವರಯ್ಯ ರಾಷ್ಟೀಯ ಸಾಹಿತ್ಯ ಪ್ರಶಸ್ತಿ ಪ್ರದಾನ

ಸಮಗ್ರ ಸಾಹಿತ್ಯ ಸೇವೆಗಾಗಿ ವಿಜಯನಗರ ಕರ್ನಾಟಕದ ನಾಲ್ಕು ಜನರಿಗೆ

ವಿಶ್ವೇಶ್ವರಯ್ಯ ರಾಷ್ಟೀಯ ಸಾಹಿತ್ಯ ಪ್ರಶಸ್ತಿ ಪ್ರದಾನ

e-ಸುದ್ದಿ ಬೆಂಗಳೂರು

ಪುಸ್ತಕ ಪ್ರೀತಿ ಬೆಳಸುವ ದೃಷ್ಥಿಯಿಂದ, ಓದುಗರ ಮುಂದೆ, ಓದಲೇಬೇಕಾದ ಕೃತಿಗಳನ್ನು ಒದಗಿಸಿದರೆ, ಸೊಗಸಾದ ಮೃಷ್ಟಾನ್ನ ಭೋಜನ ಒದಗಿಸಿದಂತೆ. ಈ ಜಾಡಿನಲ್ಲಿ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ.) ಕಳೆದ 29 ವರ್ಷಗಳಿಂದ, ಶ್ರೇಷ್ಠ ಕೃತಿಗಳ ಆಯ್ಕೆಗಾಗಿ, ಸಾಹಿತ್ಯ ಸ್ವರ್ಧೆ ಹಮ್ಮಿಕೊಂಡು ಬರುತ್ತಿದೆ.

ಈಗಾಗಲೇ 25 ವರ್ಷದಲ್ಲಿ, 300ಕ್ಕೂ ಹೆಚ್ಚು ಕೃತಿಗಳನ್ನು ಆಯ್ಕೆ ಮಾಡಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಹಾಗೂ ಲೇಖಕರಿಗೆ 8 ಲಕ್ಷಕ್ಕೂ ಹೆಚ್ಚು ರೂ.ಗಳ ಬಹುಮಾನವನ್ನು ನೀಡಿ ಗೌರವಿಸಿ, ಪ್ರೋತ್ಸಾಹಿಸಿದೆ.
ಈ ನಿಟ್ಟಿನಲ್ಲಿ ಸಂಸ್ಥೆ ಸರ್. ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆಯ ಅಂಗವಾಗಿ, 25-09-2021, ಶನಿವಾರ ಸಂಜೆ 5 ರಿಂದ 9 ರವರೆಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನ ಉದಯಭಾನು ಕಲಾಸಂಘದ ಅಡಿಟೋರಿಯಮ್‍ನಲ್ಲಿ ಹಮ್ಮಿಕೊಂಡಿದೆ.
ಸಮಗ್ರ ಸಾಹಿತ್ಯ ಸೇವೆಗಾಗಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಭಾಜನರಾದ ಗ್ರಂಥಾಲಯ ನಿರ್ದೇಶಕ ಡಾ. ಸತೀಶ್‍ಕುಮಾರ್ ಎಸ್. ಹೊಸಮನಿ, ಕ.ಸಂ. ಇಲಾಖೆಯ ಮಾಜಿ ನಿರ್ದೇಶಕ ಶ್ರೀ ಮಾರ್ಕಂಡಪುರಂ ಶ್ರೀನಿವಾಸ, ಕಲಬುರಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನದ ನಿರ್ದೇಶಕರಾದ ಡಾ. ಎಚ್.ಟಿ. ಪೋತೆ, ಬೆಂಗಳೂರಿನ ಸಾಹಿತಿ ಮತ್ತು ಪ್ರಕಾಶಕರಾದ ನಿಡಸಾಲೆ ಪುಟ್ಟಸ್ವಾಮಯ್ಯ, ಕೆ.ಎಲ್.ಇ. ಎಸ್.ಸಿ.ಪಿ. ಪದವಿ ಕಾಲೇಜ್, ಮಹಾಲಿಂಗಪುರದ ಅಶೋಕ್‍ ನರೋಡೆ, ಕೊಪ್ಪಳದ ಹಿರಿಯ ನಾಟಕಕರಾದ ಎಸ್.ವ್ಹಿ.ಪಾಟೀಲ್ ಗುಂಡೂರು ಹಾಗೂ ವಿವಿಧ ರಾಜ್ಯದ ಸಾಹಿತಿಗಳಾದ ಬೀದರನ ಎಂ. ಜಿ. ದೇಶಪಾಂಡೆ, ಬೆಂಗಳೂರಿನ ಮ.ಚಿ. ಕೃಷ್ಣ, ಬೆಳಗಾವಿಯ ಯ.ರು. ಪಾಟೀಲ, ಗದಗನ ಡಾ. ರಾಜೇಂದ್ರ ಎಸ್. ಗಡಾದ, ಬೆಂಗಳೂರಿನ ಡಾ. ತೆರಣ್ಯ ಎಲ್. ದೇವರಾಜ್, ತಿಮ್ಮಾಪುರದ ಡಾ. ಸಂಗಮೇಶ ವೆ. ತಮ್ಮನಗೌಡ್ರ, ಬೆಂಗಳೂರಿನ ಬಿಂಡಿಗನವಿಲೆ ಭಗವಾನ್, ಕಲಬುರಗಿಯ ಶ್ರೀಶೈಲ ನಾಗರಾಳ, ಬೆಳಗಾವಿಯ ಶಿ.ಗು. ಕುಸುಗಲ್ಲ, ಡಾ. ಗುರುದೇವಿ ಹುಲ್ಲೆಪ್ಪನವರಮಠ, ಬೆಂಗಳೂರಿನ ಡಾ. ವೆಂಕೋಬರಾವ್ ಎಂ. ಹೊಸಕೋಟೆ, ಗದಗನ ಡಾ. ತಯಬಲಿ ಅ. ಹೊಂಬಳ, ಬೆಂಗಳೂರಿನ ಶ್ರೀಮತಿ ಎಸ್. ವಿಜಯಗುರುರಾಜ್, ಧಾರವಾಡನ ಶ್ರೀಮತಿ ಲೀಲಾ ಕಲಕೋಟಿ, ಡಾ. ಮಹಾದೇವ ನಾ. ಜೋಶಿ, ಶಿವಮೊಗ್ಗದ ಶ್ರೀಮತಿ ಜೆ.ವಿ. ನಾಗರತ್ನಮ್ಮ, ಮುಂಬೈನ ವಿಶ್ವೇಶ್ವರ ಮೇಟಿ, ಬೆಂಗಳೂರಿನ ಶ್ರೀಮತಿ ವೇದಾಮಂಜುನಾಥನ್ ಬೆಳಗೆರೆ, ಕಲಬುರಗಿಯ ಡಾ. ಸೂರ್ಯಕಾಂತ್ ಎಸ್. ಸುಜ್ಯಾತ್, ಗೋಕಾಕನ ಶ್ರೀಮತಿ ಶಕುಂತಲಾ ಪಿ. ಹಿರೇಮಠ, ತುಮಕೂರಿನ ಡಾ. ಪ್ರಕಾಶ್ ಕೆ. ನಾಡಿಗ್, ಬೆಂಗಳೂರಿನ ನಾಗರಾಜ್ ಜಿ. ನಾಗಸಂದ್ರ, ಬೆಂಗಳೂರಿನ ಶ್ರೀಮತಿ ಪ್ರೀತಿ ಭರತ್, ಬೆಳಗಾವಿಯ ಜಯಶ್ರೀ ಜಯಪ್ರಕಾಶ ಅಬ್ಬಿಗೇರಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಇದೆ ಸಂದರ್ಭದಲ್ಲಿ ಸಂಸ್ಥೆ 30ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆಗಾಗಿ ವಾರ್ಷಿಕೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ. ಬೆಳಿಗ್ಗೆ 10 ಗಂಟೆಯಿಂದ ಜನಪದೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಉತ್ಸವ ವಿವಿಧ ಜನಪದ ಕಲಾವಿದರಿಂದ ಜನಪದ ಗೀತೆ, ಕೋಲಾಟ ಹೀಗೆ ಮುಂತಾದ ಸಾಂಸ್ಕøತಿಕ ಕಾಯಕ್ರಮ ಜರುಗಲಿದೆ ಎಂದು ವಿಜಯನಗರ ಕರ್ನಾಟಕ (ಬಳ್ಳಾರಿ, ವಿಜಯನಗರ, ಕೊಪ್ಪಳ, ಗದಗ) ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Don`t copy text!