ನೀ ಜಗದಾತೆ!

ನೀ ಜಗದಾತೆ!

ಮಾತೆ!, ಮಾತೆ!. ನೀ ಜಗದಾತೆ!.
ಸೃಷ್ಟಿಯ ಬ್ರಹ್ಮನನ್ನೇ ಹಡೆದವಳಾಕೆ.
ಮಾತೆ!, ಮಾತೆ!. ನೀ ಜಗನ್ಮಾತೆ!
ಆಲಯ ಇಲ್ಲದ ಮನದ ಗುಡಿ ಆಕೆ.

ಕಾಣದ ದೇವರಿಗೆ ಗುಡಿ ಉಂಟು.
ಪ್ರೇಮಿಗಳ ಪ್ರೀತಿಯ ಸೌಧ ಉಂಟು.
ಗುಡಿ – ಸೌಧದ ಗಡಿಯ ದಾಟಿ.
ಪದ – ವರ್ಣನೆಗಳ ಎಲ್ಲೆಯ ಮೀರಿ
ನಿಲುಕದ ನಕ್ಷತ್ರದಂತೆ ಮಿನುಗುತಿರುವಾಕೆ
ಮಾತೆ!, ಮಾತೆ!. ನೀ ಜಗದಾತೆ!.

ಜಗಕೆ ನೀನು ಒಂದು ಅದ್ಭುತ ಸೃಷ್ಟಿ!
ಸೃಷ್ಟಿಕರ್ತನೇ ನಾಚುವ ಆಗೆ,
ಕಾಣಿಕೆ ನೀಡುವೆ ಮೊಗದೊಂದು ಸೃಷ್ಟಿ!
ಸೃಷ್ಟಿ – ಅಸೃಷ್ಟಿಗೂ ಬೆಳಕು ಪಸರಿಸಿ
ತನ್ನಂತಾನೇ ಉರಿಯುವ ನಂದಾದೀಪಳಾಕೆ.
ಮಾತೆ!, ಮಾತೆ!. ನೀ ಜಗದಾಂಬಿಕೆ.

ಸಂತಸಕ್ಕೆ ಹಿಗ್ಗದೇ, ಸಂಕಷ್ಟಕ್ಕೆ ಕುಗ್ಗದೆ.
ಸಂಸಾರಕ್ಕೆ – ಸಂಸ್ಕಾರದ ಚಿಲುಮೆ ಚೆಲ್ಲುವಳಾಕೆ.
ನವರಸವ ಅಹ್ಲಾದಿಸಿ, ಸಂಸಾರ ನೌಕೆಯ ಪೋಷಿಸಿ.
ಜನ್ಮ ಮಹಿಮೆಯ ಸಾರುವಳಾಕೆ.
ನಿನ್ನೀ ಮಹಿಮೆ ಮರೆತು, ಪೂಜಾ – ಫಲ ಮಹಿಮೆಯ ಮೂಢರು ನಾವು!!
ಈ ಮೂಢರ ಮನ್ನಿಸಿ, ತೋರು ನಿನ್ನ ಛಾಯೆ!
ಸಾರ್ವಕಾಲಿಕವಾಗಲಿ ನಿನ್ನೀ ಮಾಯೆ!!!

ಮಾತೆ!, ಮಾತೆ!. ನೀ ಜಗನ್ಮಾತೆ!

ಸುರಾಗ್ aka ರಘು

 

 

 

Don`t copy text!