ವಿಮುಕ್ತಿ ದೇವವಾಸಿ ಮಹಿಳೆಯರಿಗೆ ೩ ಸಾವಿರ ಮಾಶಾಸನ ನೀಡುವಂತೆ ಒತ್ತಾಯ

ವಿಮುಕ್ತಿ ದೇವವಾಸಿ ಮಹಿಳೆಯರಿಗೆ ೩ ಸಾವಿರ ಮಾಶಾಸನ ನೀಡುವಂತೆ ಒತ್ತಾಯ
e- ಸುದ್ದಿ ಮಸ್ಕಿ
ವಿಮುಕ್ತಿ ದೇವವಾಸಿ ಮಹಿಳೆಯರಿಗೆ ಪ್ರತಿ ತಿಂಗಳು ೩ ಸಾವಿರ ಮಾಶಾಸನ ನೀಡುವಂತೆ ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ನೇತೃತ್ವದಲ್ಲಿ  ಮಾಜಿ ದೇವದಾಸಿ ಮಹಿಳೆಯರು ಒತ್ತಾಯಿಸಿದರು.
ಪಟ್ಟಣದ ಬಸವೇಶ್ವರ ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕವಿತಾ.ಆರ್. ಅವರ ಮೂಲಕ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸೋಮವಾರ ಸಲ್ಲಿಸಿದರು.
 ವಿಮುಕ್ತಿ ದೇವದಾಸಿ ಮಹಿಳಾ ವೇದಿಕೆಯ ಜಿಲ್ಲಾ ಸಂಚಾಲಕಿ ನಾಗರತ್ನ ಮಾತನಾಡಿ ಮಸ್ಕಿ ತಾಲೂಕಿನಲ್ಲಿರುವ ಮಾಜಿ ದೇವದಾಸಿಯರಿಗೆ ಕೊರೋನಾ ಸಂದರ್ಭದಿಂದ ಇವರಗೆ ಯಾವುದೇ ಕೆಲಸವಿಲ್ಲದೇ ಜೀವನ ನಡೆಸಲು ಕಷ್ಟವಾಗಿದೆ. ಇತ್ತಿಚಿಗೆ ಮುಖ್ಯಮಂತ್ರಿ ಬೊಮ್ಮಾಯಿಯವರು ಅಧಿಕಾರ ಸ್ವೀಕರಿಸಿದ ಸಮಯದಲ್ಲಿ ವಿವಿಧ ಮಾಶಾಸನಗಳನ್ನು ಹೆಚ್ಚಿಗೆ ಮಾಡಿದ್ದೀರಿ ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದೆ ರೀತಿ  ಅತಿ ಹಿಂದುಳಿದ ಮೌಡ್ಯತೆಯಿಂದ ಕೂಡಿದ ನಮ್ಮ ಸಮುದಾಯದ ದೇವದಾಸಿ ಮಹಿಳೆಯರನ್ನು ಮಾತ್ರ ಕೈಬಿಟ್ಟಿದ್ದೀರಿ ಆದ್ದರಿಂದ ಈಗ ಅವರಿಗೂ ಕೂಡ ಮಾಶಾಸನ ಹೆಚ್ಚು ಮಾಡಿಕೊಡಿ ಇದರಿಂದ ಮಕ್ಕಳಿಗೆ  ಒಳ್ಳೆಯ ಬದುಕು ಕಟ್ಟಿಕೊಡಲು ಸಹಾಯವಾಗುತ್ತದೆ.  ಮಾಶಾಸನವನ್ನು ಮೂರು ಸಾವಿರ ಮಾಡಿ ಅವರಿಗೆ ಜೀವನ ನಿರ್ವಹಣೆ ಮಾಡಲು ಅನೂಕೂಲ ಮಾಡಿಕೋಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕಿ ಸರೋಜಾ, ಹುಲುಗಮ್ಮ, ಗಂಗಮ್ಮ, ಯಮನಮ್ಮ, ಗ್ಯಾನಮ್ಮ ಸೇರಿದಂತೆ ನೂರಾರು  ದೇವದಾಸಿ ಮಹಿಳೆಯರು ಇದ್ದರು.
Don`t copy text!