ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಜನ್ಮಾದಿನಾಚರಣೆ

ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಜನ್ಮಾದಿನಾಚರಣೆ
e- ಸುದ್ದಿ ಮಸ್ಕಿ
ಮಸ್ಕಿ: ಪಟ್ಟಣದ ಜೈ ಭಗತ್ ಸಿಂಗ್ ಉಚಿತ ತರಬೇತಿ ಕೇಂದ್ರದಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಜನ್ಮ ದಿನದ ಅಂಗವಾಗಿ  ತಾಲೂಕು ಕರವೇ ಘಟಕದ ವತಿಯಿಂದ  ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಿ ಕೇಕ್ ಕತ್ತರಿಸುವ ಮೂಲಕ ಜನ್ಮದಿನಾಚರಣೆ ಆಚರಿಸಿದರು.
 ಕರವೇ ತಾಲೂಕು ಅದ್ಯಕ್ಷ ಅಶೋಕ ಮುರಾರಿ ಮಾತನಾಡಿ ನಾಡು ನುಡಿ ನೆಲ-ಜಲದಂತಹ ವಿಶಷಗಳು ಬಂದಾಗ ಕಳೆದ ಹಲವಾರು ವರ್ಷಗಳಿಂದ ನಮ್ಮ ಕನ್ನಡ ನಾಡಿನ ರಕ್ಷಣೆ ಕರವೇ ರಾಜ್ಯಾಧ್ಯಕ್ಷರು ನಿಂತಿದ್ದಾರೆ. ಮುಂದೆಯೂ ಸಹ ಕರ್ನಾಟಕ್ಕೆ ಯಾವುದೇ ವಿಷಯದಲ್ಲಿ ಅನ್ಯಾಯವಾದರೂ ಹೋರಾಟ ಮಾಡಲು ನಮ್ಮ ಕಾರ್ಯಕರ್ತರು ಬದ್ಧರಾಗಿರೋಣ ಎಂದರು.
ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಅಶೋಕ ಮುರಾರಿ, ನಗರ ಘಟಕ ಅಧ್ಯಕ್ಷ ಮಂಜುನಾಥ್, ರಿಯಾಜ್, ರಾಜು, ಜೈ ಭಗತ ಸಿಂಗ್ ಸಂಸ್ಥೆಯ ಲಕ್ಷ್ಮಣ, ಗಂಗಪ್ಪ, ದುರಗಪ್ಪ ಸೇರಿದಂತೆ ಇತರರು ಇದ್ದರು.
Don`t copy text!