ಮುತ್ತಿನ ಹನಿ
ಎಲ್ಲೆಡೆ ಇಬ್ಬನಿಯದು
ಪಸರಿಸಿತ್ತು
ಸಾಗಿತ್ತು ದಿಬ್ಬಣ
ನೆನಪುಗಳ ಹೊತ್ತು
ಮಂಕಾಗಿತ್ತು ನನ್ನೀ ಮನ
ತುಸು ಹೊತ್ತು
ಕರಗಿಸಿತ್ತದು ಸೂರ್ಯ ರಶ್ಮಿ
ಮಂಜಿನ ಪರದೆಯನ್ನು
ನಿನ್ನ ಪ್ರೀತಿಯ ಅಪ್ಪುಗೆ
ಇಳಿಸಿತ್ತು ಮನಸ್ಸಿನ
ಭಾರವನ್ನು
ಮಂಜದು ಕರಗಿ ಆಗಿತ್ತು
ಮುತ್ತಿನ ಹನಿ
ಮನಸ್ಸದು ನಿಟ್ಟುಸಿರಿಟ್ಟಿತು
ಹೊರಹಾಕುತ ಕಂಬನಿ…….
—– ಡಾ. ನಂದಾ ಬೆಂಗಳೂರು