ಮಸ್ಕಿ : ಸ್ವಂತಂತ್ರಕ್ಕಾಗಿ ಹೋರಾಟ ಮಾಡಿದ ವೀರಮಹಿಳೆ ಕಿತ್ತೂರು ಚನ್ನಮ್ಮಳ ಶೌರ್ಯ ಅಜರಾಮರವಾಗಿದ್ದು ಆಧುನಿಕ ಕಾಲದ ಮಹಿಳೆಯರು ಚನ್ನಮ್ಮಳ ವಿಚಾರಗಳನ್ನು ಅಳವಡಿಸಿಕೊಳ್ಳಬೇಕೆಂದು ಗ್ರಾಮದ ಹಿರಿಯ ಮುಖಂಡ ಮಹಾದವೇಪ್ಪಗೌಡ ಪಾಟೀಲ ಹೇಳಿದರು.
ಪಟ್ಟಣದ ಹಳೇ ಬಸ್‍ನಿಲ್ದಾಣದ ಬಳಿ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಕಿತ್ತೂರು ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗಚ್ಚಿನಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯಾರು ಕಿತ್ತೂರು ಚನ್ನಮ್ಮ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮೌನೇಶ ತಾತ ಜಂಗಮರಹಳ್ಳಿ, ಅಮರಪ್ಪ ನಾಗರಬೆಂಚಿ, ಮಲ್ಲಪ್ಪ ನಾಯಿಕೊಡಿ, ಅಮರಪ್ಪ ಗುಡದೂರು, ಬಸನಗೌಡ ಆದಾಪುರ, ಬಸವರಾಜಪ್ಪ ಮಿಟ್ಟಿಮನಿ, ಚೆನ್ನನಗೌಡ ಗೋನಾಳ, ಶರಣಬಸವ ವಕೀಲರು ಗೋನಾಳ, ಸುರೇಶ ಪಲ್ಲೇದ, ಬಸವರಾಜ ನಾಯಿಕೊಡೆ, ಶಂಕ್ರಪ್ಪ ಸುಂಕದ, ಬಸವರಾಜ ಕೋರಿ, ಮಲ್ಲಿಕಾರ್ಜುನ ಬಾಳೆಕಾಯಿ ಹಾಗೂ ಇತರರು ಇದ್ದರು.
ವಿವಿಧಡೆ ಆಚರಣೆ ಃ ಪಟ್ಟಣದ ವಿವಿಧಡೆ ಕಿತ್ತೂರು ಚನ್ನಮ್ಮ ಜಯಂತಿಯನ್ನು ಆಚರಿಸಿದರು. ತಹಸೀಲ್ ಕಚೇರಿ, ಪುರಸಭೆ, ಬಿಜೆಪಿ, ಕಾಂಗ್ರೆಸ್ ಕಚೇರಿ ಸೇರಿದಂತೆ ಶಾಲ ಕಾಲೇಜುಗಳಲ್ಲಿ ಕಿತ್ತೂರು ಚನ್ನಮ್ಮ ಜಯಂತಿಯನ್ನು ಆಚರಿಸಿದರು.