ಮಸ್ಕಿ : ತಾಲೂಕಿನ ಕಾಚಾಪುರ ಗ್ರಾಮದ ಹೊರ ವಲಯದ ಹೊಲದಲ್ಲಿ ಬೆಳದಿದ್ದ ಗಾಂಜ ಗಿಡಗಳನ್ನು ಜಿಲ್ಲಾ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಗುರುವಾರ ಜರುಗಿದೆ.
ಜಿಲ್ಲಾ ಅಬಕಾರಿ ಅಧಿಕಾರಿ ಪ್ರಶಾಂತಕುಮಾರ ನೇತೃತ್ವದ ತಂಡ ಹೊಲಕ್ಕೆ ದಾಳಿ ಮಾಡಿ 3 ಲಕ್ಷ ರೂ ಬೆಲೆ ಬಾಳುವ 54 ಗಾಂಜ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಒಂದೊಂದು ಗಿಡ 2 ರಿಂದ 3 ಮೀಟರ್ ಉದ್ದದ ಗಿಡಗಳಿವೆ.
ಅಕ್ರಮವಾಗಿ ಗಾಂಜ ಬೆಳದಿದ್ದ ಜಮೀನು ಮಾಲಿಕರಾದ ವೆಂಕೊಬ, ಬಸ್ಸಪ್ಪ, ಮಲ್ಲಪ್ಪ ವಿರುದ್ದ ಪ್ರಕರಣ ದಾಖಲಾಗಿದೆ. ಆರೋಪಿತರು ತಲೆ ಮರೆಸಿಕೊಂಡಿದ್ದಾರೆ.