ಗೆಲುವು ಸಂಭ್ರಮ

ಗೆಲುವು ಸಂಭ್ರಮ

ನಡೆದೆ ಓಡಿದೆ
ಎದ್ದೇ ಬಿದ್ದೆ
ಗಾಯಗೊಂಡೆ
ಬಳಲಿದೆ ಬಿಕ್ಕಿದೆ
ಸುನಾಮಿ ಬಿರುಗಾಳಿ
ತೇಲಿ ಹೋಗಲಿಲ್ಲ
ಉಕ್ಕಿ ಹರಿವ ಪ್ರವಾಹ
ಕೊಚ್ಚಿ ಹೋಗಲಿಲ್ಲ
ನಿಗಿ ನಿಗಿ ಕೆಂಡ
ಸುಟ್ಟು ಹೋಗಲಿಲ್ಲ
ಗಾಳಿ ಉಸುರಿಸಿ
ನೀರು ಕುಡಿದು
ಕಿಚ್ಚಿಗೆ ಕಾಸಿ
ಬೆಚ್ಚಗೆ ಬದುಕಿದವನು
ಕಷ್ಟ ಸಂಕಟಗಳ
ಸುರಿ ಮಳೆ
ಎಂದಿಗೂ
ಕಳೆದುಕೊಳ್ಳಲಿಲ್ಲ
ನನ್ನ ನಾನು
ಭಾವ ಭದ್ರತೆಯ
ಗಟ್ಟಿ ಗುಂಡಿಗೆ
ಎಂದೂ ಮುಳುಗಲಿಲ್ಲ
ಸವಾಲುಗಳ ಮಡುವಿನಲಿ
ಮುಖವಾಡವಿರದ
ನೈಜ ನಗೆ ನೋವು
ಬರೆದಿರುವೆ ಬಾಳ
ಪುಟಕೆ ಮುನ್ನುಡಿ
ಸಾವು ಸೂತಕ ಮಧ್ಯೆ
ಸದ್ದಿರದ ಗೆಲುವು ಸಂಭ್ರಮ
ಕಳೆದು ಕೊಳ್ಳಲಿಲ್ಲ
ನಾನು ನನ್ನನು
ನನ್ನ ಅಸ್ಮಿತೆಯನು

ಡಾ ಶಶಿಕಾಂತ ಪಟ್ಟಣ ಪುಣೆ

Don`t copy text!