(ಪ್ರತಿ ವರ್ಷ ಶ್ರಾವಣ ಪ್ರಾರಂಭದ ಮೊದಲ ಸೋಮವಾರದಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಾಂದಕವಟೆ ಗ್ರಾಮದ ಆರಾಧ್ಯ ದೈವ ಶ್ರೀ ಪರಮಾನಂದ ದೇವರ ಜಾತ್ರೆ ವಿಶಿಷ್ಟ ಪೂರ್ಣವಾಗಿ ಜರುಗುತ್ತದೆ,ಈ ಬಗ್ಗೆ ಈಗಾಗಲೇ ತಿಳಿಸಿದ್ದು ,ಈ ಕುರಿತು ಚಿಕ್ಕ ಮಾಹಿತಿ…)
” ಚಾಂದಕವಟೆಯ ವೈಶಿಷ್ಟ್ಯ ಪೂರ್ಣ ಆಚರಣೆ “….
—–ಬೇವಿನ ಎಲೆಯ ಮೇಲೆ ಊಟ….!!!!!!!?
ವಿಜಯಪುರ ಜಿಲ್ಲೆ ಭವ್ಯ ಸಂಸ್ಕೃತಿ ಪರಂಪರೆಯ ಜಿಲ್ಲೆ ಎಂದು ಜನನಿನಿತವಾಗಿದೆ. ಅದರಂತೆ ವಿಜಯಪುರ ಜಿಲ್ಲೆಯಲ್ಲಿನ ವಿವಿಧ ಗ್ರಾಮಗಳಲ್ಲಿ ವಿವಿಧ ಆಚರಣೆಗಳೂ ವೈಶಿಷ್ಟ್ಯಪೂರ್ಣವಾಗಿ ಜರುಗುತ್ತಿವೆ.
ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಾಂದಕವಟೆ ಎಂಬ ಗ್ರಾಮದಲ್ಲಿ ಶ್ರೀ ಪರಮಾನಂದ ದೇವರ ಜಾತ್ರೆ ಬಹು ವಿಶಿಷ್ಟವಾಗಿ ಆಚರಣೆಗೂಳ್ಳುತ್ತದೆ, ಶ್ರಾವಣ ಮಾಸದ ಪ್ರತಿ ಸೋಮವಾರದಂದು ಗ್ರಾಮದಿಂದ ೩ ಕಿ.ಮಿ ಅಂತರದಲ್ಲಿರುವ ಈ ದೇವಸ್ಥಾನಕ್ಕೆ ದೂರದ ಭಕ್ತರು ಆಗಮಿಸಿ ಜಾತ್ರೆಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಹೊಗ್ತಾರೆ, ಅಷ್ಟಕ್ಕೂ ಇಲ್ಲಿನ ಇಷ್ಟಾರ್ಥಗಳು ಬಲು ವಿಶಿಷ್ಟತೆಯಿಂದ ಕೂಡಿದ ಆಚರಣೆಗಳಾಗಿವೆ, ಈ ಜಾತ್ರೆಗೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ ಬೇವಿನ ಎಲೆಯಲ್ಲಿನ ಪ್ರಸಾದ ರೂಪದ ಊಟವನ್ನು ಸವಿಯಲೇಬೇಕು..! ಹೌದು ಊಟಕ್ಕಾಗಿ ಬೇವಿನ ಎಲೆಯನ್ನು ತಟ್ಟೆಯ ರೀತಿ ಬಳಸಿ ಅವುಗಳಲ್ಲಿ ಚಪಾತಿ,ಸಜ್ಜೆ ಕಡುಬು, ಕಿಚಡಿ ,ಅನ್ನ ಸಾಂಬಾರು, ಇತರೇ ಪದಾರ್ಥಗಳನ್ನು ಇಲ್ಲಿ ಬಡಿಸಲಾಗುತ್ತದೆ ಇಲ್ಲಿಯ ಊಟದ ಪಂಕ್ತಿಗೆ ಸಾವಿರಾರು ಜನರು ಸಾಕ್ಷಿ ಯಾಗಿ ಪ್ರಸಾದ ರೂಪದ ಊಟವನ್ನು ಸವಿದು ಪುನಿತರಾಗುತ್ತಿದ್ದಾರೆ. ಇದು ಹಲವು ವರ್ಷಗಳಿಂದಲೂ ನಡೆದು ಬಂದಿದ್ದು ಇನ್ನೂ ಕೂಡಾ ಮುಂದುವರೆದಿದೆ , ಆಚರಣೆ ಎನೇ ಆಗಿರಲಿ ಇದನ್ನು ಮೌಢ್ಯ ಎನ್ನುವದಕ್ಕಿಂತಲೂ ವೈಜ್ಞಾನಿಕ ಹಿನ್ನಲೆಯನ್ನು ಒಳಗೊಂಡಿದೆ.
ಬೇವು ಆರ್ಯುವೇದ ಜಗತ್ತಿಗೆ ಮೂಲ ವಸ್ತು , ಈ ಬೇವಿನ ಮರದ ಚಿಕ್ಕ ಕೊಂಬೆಗಳನ್ನು ಕತ್ತರಿಸಿ ಇತ್ತೀಚೆಗೆ ಅಮೇರಿಕಾದ ಆನ್ ಲೈನ್ ಕಂಪನಿಯೊಂದು ಮಾರಾಟಕಿಟ್ಟಿರುವದು ತಿಳಿದ ವಿಷಯ. ಆದ್ದರಿಂದ ಯಾವದೇ ದೇವಸ್ಥಾನಗಳಲ್ಲಿನ ಆಚರಣೆಗಳು ಮೌಢ್ಯತೆಯನ್ನು ಒಳಗೊಂಡಿಲ್ಲ ,ಆದರೆ ಆ ಆಚರಣೆಗಳನ್ನು ವೈಜ್ಞಾನಿಕ ಹಿನ್ನಲೆಯಲ್ಲಿ ಪರಾಮರ್ಶೆಗೆ ಒಳಪಡಿಸಿದಾಗ ಸತ್ಯಾಸತ್ಯತೆಯ ಅರಿವಾಗುವದರೊಂದಿಗೆ ಸಂಸ್ಕೃತಿಯ ಉಳಿವಾಗುತ್ತದೆ…ಎಂಬುದು ನಮ್ಮ ಅಂಬೋಣ…..
–ಪ್ರಶಾಂತ ಹೊಸಮನಿ
ನಾಗಠಾಣ, ವಿಜಯಪೂರ-
೯೬೩೨೬೧೪೪೯೭