ಹೆಣ್ಣು

ಹೆಣ್ಣು

ಹೆಣ್ಣೆಂದರೆ ಒಂದು ವ್ಯಕ್ತಿಯಲ್ಲ
ಹೆಣ್ಣು ಈ ಜಗದ ಕಣ್ಣು.
ಹೆಣ್ಣೆಂದರೆ ಬರಿ ಸ್ತ್ರೀ ಅಲ್ಲ.
ಹೆಣ್ಣು ಈ ಜಗದ ಉಸಿರು.!

ಹೆಣ್ಣೆಂದರೆ ಬರಿ ಬಯಕೆ ಅಲ್ಲ
ಹೆಣ್ಣು ಈ ಸೃಷ್ಟಿ ದೇವತೆ.
ಹೆಣ್ಣಿನಿಂದಲೆ ಬದುಕು ಬಾಳ್ವೆ.
ಹೆಣ್ಣಿನಿಂದಲೆ ಹಸಿರು ಉಸಿರು !!

ಹೆಣ್ಣಿನಿಂದಲೆ ಜನನ ಜೀವನ
ಹೆಣ್ಣಿನಿಂದಲೆ ಬದುಕು ಪಾವನ.
ಹೆಣ್ಣಿನಿಂದಲೆ ಈ ಸ್ವರ್ಗ ನರಕ
ಹೆಣ್ಣಿನಿಂದಲೆ ಬದುಕು ಸ್ವಾರ್ಥಕ.!!

ಹೆಣ್ಣು ನನ್ನನು ಹೆತ್ತ ತಾಯಿ
ಹೆಣ್ಣು ಎನ್ನಯ ಅಕ್ಕ ತಂಗಿ
ಹೆಣ್ಣು ನನ್ನಯ ಮಡದಿ ಮಕ್ಕಳು
ಹೆಣ್ಣು ನನ್ನಯ ಹೃದಯದುಸಿರು

ಹೆಣ್ಣು ಹೆಣ್ಣು ಮಾಯೆ ಅಲ್ಲ
ಹೆಣ್ಣು ಗಂಡು ಮಾಯೆ ಅಲ್ಲ
ಹೆಣ್ಣಿನ ಆತ್ಮ ಪವಿತ್ರ ನೋಡಾ
ಪಂಪಯ್ಯಪ್ರಿಯಾ ಶಿವಲಿಂಗದೇವ

ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಸಿಂಧನೂರು*

Don`t copy text!